ಬ್ರೇಕಿಂಗ್ ನ್ಯೂಸ್
ಕರ್ನಾಟಕಸುಳ್ಯ

ಸುಳ್ಯದಲ್ಲಿ ಆರ್‌ಎಸ್‌ಎಸ್‌ ಶತಾಬ್ದಿ ವರ್ಷ: ಹಿಂದೂ ಸಂಗಮ ಸಮಿತಿ ಉದ್ಘಾಟನೆ !

ಸುಳ್ಯ: Tulu Times | ಸುಳ್ಯದಲ್ಲಿ ಆರ್‌ಎಸ್‌ಎಸ್‌ ಶತಾಬ್ದಿ ವರ್ಷ ಆಚರಣೆ ಹಿನ್ನೆಲೆ   ಹಿಂದೂ ಸಂಗಮ ಸಮಿತಿ ಉದ್ಘಾಟನೆ ಕಾರ್ಯಕ್ರಮವು  ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರ ಕೇರ್ಪಳದಲ್ಲಿ ನಡೆಯಿತು.

ಈ ವೇಳೆ  ಆರ್‌ ಎಸ್‌ ಎಸ್ ಗೆ ನೂರು ವರ್ಷದ ತುಂಬಿದ ಹಿನ್ನಲೆ ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು. ಈ ಬಗ್ಗೆ ಸೀತಾರಾಮ್ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಂಘಚಾಲಕ್ ಚಂದ್ರಶೇಖರ ಭಟ್ ತಳೂರು, ರವೀಂದ್ರ ಪುತ್ತೂರು, ಉದ್ಯಮಿ ಎಂ.ಬಿ ಸದಾಶಿವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಪುತ್ತೂರು: ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ

ಶತಾಬ್ದಿ ವರ್ಷ ಆಚರಣೆಯ ಉದ್ದೇಶವೇನು..?

ಶತಾಬ್ದಿ ವರ್ಷದಲ್ಲಿ ಸಮಾಜದಲ್ಲಿ ಐದು ಪ್ರಮುಖ ಬದಲಾವಣೆಗಳನ್ನು ತರಲು ಸಂಘವು ಗುರಿ ಇಟ್ಟುಕೊಂಡಿದೆ. ಅವುಗಳೆಂದರೆ: ಸಾಮಾಜಿಕ ಸಮರಸತೆ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯ.ಪ್ರತಿ ಗ್ರಾಮ, ಪ್ರತಿ ಬಸ್ತಿ, ಪ್ರತಿ ಮನೆ’ ಎಂಬ ಅಭಿಯಾನದ ಮೂಲಕ ದೇಶಾದ್ಯಂತ ಲಕ್ಷಾಂತರ ಮನೆಗಳನ್ನು ತಲುಪಲು ಸಂಘ ಯೋಜಿಸಿದೆ. ಭಾರತದಾದ್ಯಂತ ಸುಮಾರು 1,500 ರಿಂದ 1,600 ಬೃಹತ್ ಹಿಂದೂ ಸಮ್ಮೇಳನಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಶತಾಬ್ದಿ ವರ್ಷವು ಸಂಘದ ಶಾಖೆಗಳ ವಿಸ್ತರಣೆ ಮತ್ತು ದೇಶಾದ್ಯಂತ ಸಾಮಾಜಿಕ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಶ್ರೀ ವನಶಾಸ್ತರ ಮತ್ತು ನಾಗಸನ್ನಿಧಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಉತ್ಸವ

ನವೆಂಬರ್ 2025 ರಿಂದ ಜನವರಿ 2026 ರ ಅವಧಿಯಲ್ಲಿ ಆಯೋಜಿಸಲಾದ ಬೃಹತ್ ಜನಸಂಪರ್ಕ ಅಭಿಯಾನದ ಮೂಲಕ ಪ್ರತಿ ಹಳ್ಳಿ ಮತ್ತು ಮನೆಗಳನ್ನು ತಲುಪಲು ಸಂಘದ ಕಾರ್ಯಕರ್ತರು ಯೋಜಿಸಿದ್ದಾರೆ. ಮಂಡಲ ಮತ್ತು ಬಸ್ತಿ ಮಟ್ಟದಲ್ಲಿ ಹಿಂದೂ ಸಮ್ಮೇಳನಗಳು, ಯುವ ಸಮಾವೇಶಗಳು ಮತ್ತು ಸಾಮಾಜಿಕ ಸೌಹಾರ್ದ ಸಭೆಗಳನ್ನು 2026ರ ಉದ್ದಕ್ಕೂ ಆಯೋಜಿಸಲಾಗುವುದು. ಈ ವರ್ಷವು ಸಂಘದ ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ಮತ್ತು ಸಾಮಾಜಿಕ ಸುಧಾರಣೆಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.

RSS centenary year in Sullia: Hindu Sangama Samiti inaugurated!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 156

You cannot copy content of this page