ಪುತ್ತೂರು : Tulu Times | ಪಾತಾಳ, ಉಪ್ಪಿನಂಗಡಿ, ಪುತ್ತೂರು ತಾಲೂಕು (ದ.ಕ.) ಇದರ ಪಾತಾಳ ಯಕ್ಷ ಪ್ರತಿಷ್ಠಾನದ ವತಿಯಿಂದ, ಸಂಘಟಕರಾಗಿರುವ, ಸಾಹಿತ್ಯ ಪರಿಚಾರಕ, ಕಲಾ ಪೋಷಕ, ಸಜ್ಜನ-ಸಹೃದಯಿ ಹರಿಕೃಷ್ಣ ಪುನರೂರು ಇವರಿಗೆ ಪಾತಾಳ ಸ್ಮೃತಿ ಗೌರವ
ಪ್ರದಾನ ಸಮಾರಂಭವು ಜ.05, ಸೋಮವಾರ, ಮಧ್ಯಾಹ್ನ 4.00 ಗಂಟೆಗೆ ಪಾತಾಳ ಮನೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ (ರಿ.) ಇದರ ಕಾರ್ಯದರ್ಶಿಯಾಗಿರುವ ಡಿ. ಹರ್ಷೇಂದ್ರ ಕುಮಾರ್ ವಹಿಸಲಿದ್ದು, ಪಾತಾಳ ಸ್ಮೃತಿ ಹಾಗೂ ಪುನರೂರು ಅಭಿನಂದನೆಯನ್ನು ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪೂರ್ವಧಕ್ಷರು ಪ್ರೊ. ಎಂ. ಎಲ್. ಸಾಮಗ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮುಖ್ಯಸ್ಥರು, ಅರುಣ ಕುಮಾರ್ ಪುತ್ತಿಲ, ಶುಭಾಶಂಸನೆಯನ್ನು ಪುತ್ತೂರಿನ ಮಾಜಿ ಶಾಸಕರು ಶ್ರೀಮತಿ ಶಂಕುಂತಲಾ ಟಿ ಶೆಟ್ಟಿ ಮಾಡಲಿದ್ದಾರೆ. ಇನ್ನು ಮುಖ್ಯ ಪಾತಾಳ ಸ್ಮೃತಿ ಪುರಸ್ಕಾರಕ್ಕೆ ಖ್ಯಾತ ಗಮಕಿಗಳು ಗಣಪತಿ ಪದ್ಯಾಣ ಹಾಗೂ ಖ್ಯಾತ ಸಾಹಿತಿಗಳು, ಹಿರಿಯ ಪ್ರವಚನಗಾರರು ಮುಳಿಯ ಶಂಕರ ಭಟ್ ಭಾಜನರಾಗಿರುತ್ತಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಪರಂಧಾಮ ಕಥಾನಕದ ಕಾವ್ಯ ವಾಚನ ಮಧ್ಯಾಹ್ನ ಗಂಟೆ 2ಗೆ ಆರಂಭವಾಗಲಿದೆ ಹಾಗೂ ಈ ಕಾರ್ಯಕ್ರಮಕ್ಕೆ ಪಾತಾಳ ಮನೆಯವರು ಎಲ್ಲರಿಗೂ ಪ್ರೀತಿಪೂರ್ವಕ ಆಹ್ವಾನ ನೀಡಿರುತ್ತಾರೆ.
Patala Smriti Honor Award Ceremony on January 5th -ತುಳು ಟೈಮ್ಸ್
ಇದನ್ನೂ ಓದಿ :ಜೆಇಇ ಮೇನ್ 2026 ಅಭ್ಯರ್ಥಿಗಳು ಗುರುತಿನ ಚೀಟಿ ಪರಿಶೀಲನೆ ಮಾಡಿಕೊಳ್ಳಬೇಕು: ಎನ್‌ಟಿಎ ಸೂಚನೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/bVV7PCunwKI?si=h36aCV8OxDA9lwiY











