ಉತ್ತರಾಖಂಡ : Tulu Times | ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯಾ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರು ಬಿಹಾರದ ಹುಡುಗಿಯರು ರೂ. 20,000–25,000ಕ್ಕೆ ಮದುವೆಗೆ ಲಭ್ಯ ಎಂಬರ್ಥದ ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಕಳೆದ ತಿಂಗಳು ಅಲ್ಮೋರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾಹು, “ವಯಸ್ಸಾದ ಮೇಲೆ ಮದುವೆಯಾಗುತ್ತೀಯಾ? ಮದುವೆಯಾಗಲು ಆಗದಿದ್ದರೆ ನಾವು ಬಿಹಾರದಿಂದ ಹುಡುಗಿಯನ್ನು ತಂದು ಕೊಡುತ್ತೇವೆ. ಅಲ್ಲಿ ರೂ. 20,000–25,000ಕ್ಕೆ ಸಿಗುತ್ತಾಳೆ. ನನ್ನ ಜೊತೆಗೆ ಬಾ, ಮದುವೆ ಮಾಡಿಸುತ್ತೇನೆ,” ಎಂದು ಹೇಳಿರುವುದು ವೀಡಿಯೊದಲ್ಲಿ ಕೇಳಿಬರುತ್ತದೆ. ಈ ಹೇಳಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಹಾರ ರಾಜ್ಯ ಮಹಿಳಾ ಆಯೋಗವೂ ಇದನ್ನು ಖಂಡಿಸಿದೆ.ಈ ಹೇಳಿಕೆ ದೇಶದ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತದ್ದು ಎಂದು ಕಾಂಗ್ರೆಸ್ ಆರೋಪಿಸಿದೆ. ವಿವಾದ ಭುಗಿಲೆದ್ದ ಬಳಿಕ ಗಿರ್ಧಾರಿ ಲಾಲ್ ಸಾಹು ಅವರು ಕ್ಷಮೆಯಾಚನಾ ವೀಡಿಯೊ ಬಿಡುಗಡೆ ಮಾಡಿ, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. “ನಾನು ಸ್ನೇಹಿತನೊಬ್ಬರ ಮದುವೆ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ, ಕೈಮುಗಿದು ಕ್ಷಮೆ ಕೇಳುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿ ರೌತೆಲಾ, “ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅವರ ಪತಿಯಿಂದ ಇಂತಹ ಹೇಳಿಕೆ ಬಂದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇದು ಮಹಿಳೆಯರ ಗೌರವಕ್ಕೆ ದಾಳಿ ಮಾಡುತ್ತದೆ ಮತ್ತು ಮಾನವ ಕಳ್ಳಸಾಗಣೆ, ಬಾಲ್ಯವಿವಾಹ, ಮಹಿಳಾ ಶೋಷಣೆ ಮುಂತಾದ ಸಾಮಾಜಿಕ ಕೆಡುಕುಗಳಿಗೆ ಉತ್ತೇಜನ ನೀಡುತ್ತದೆ,” ಎಂದು ಹೇಳಿದ್ದಾರೆ.
Bihar girls available for marriage for Rs. 20,000: Controversial statement -ತುಳು ಟೈಮ್ಸ್
ಇದನ್ನೂ ಓದಿ :ಸುತ್ತಲ ಊರಿಗೂ ಸಂಭ್ರಮದ ಕಂಪನ್ನು ಸೂಸುವ ‘ಸುಳ್ಯ ಜಾತ್ರೆ’ಯ ಸಡಗರ
==
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/bVV7PCunwKI?si=h36aCV8OxDA9lwiY











