ಸುಳ್ಯ : Tulu Times | ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪ್ರತೀ ವರ್ಷ ನಡೆಯುವ ಸುಳ್ಯ ಜಾತ್ರೆ ಕರಾವಳಿ ಭಾಗದ ಪ್ರಮುಖ ಉತ್ಸವವಾಗಿದೆ. ಗ್ರಾಮೀಣ ಸಂಸ್ಕೃತಿ, ಭಕ್ತಿ ಮತ್ತು ಜನಸ್ತೋಮವನ್ನು ಒಂದಾಗಿ ಕಾಣುವ ಈ ಜಾತ್ರೆ ಸ್ಥಳೀಯರಷ್ಟೇ ಅಲ್ಲದೆ ದೂರದ ಊರುಗಳಿಂದಲೂ ಭಕ್ತರನ್ನು ಆಕರ್ಷಿಸುತ್ತದೆ. ಮುಖ್ಯವಾಗಿ ಸಂತೆ ತಿರುಗಲೆಂದೇ ಹಲವಾರು ಜನರು ಬರೋದರ ಜೊತೆಗೆ ಜಾತ್ರೆಯ ಕೇಂದ್ರಬಿಂದುವಾಗಿರುವ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗುವ ಸಲುವಾಗಿ ದೂರದೂರಿನಿಂದ ಬರುತ್ತಾರೆ. ಇಲ್ಲಿ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದೇ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಜಾತ್ರೆಯ ಸಮಯದಲ್ಲಿ ದೇವಸ್ಥಾನ ಆವರಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿವಿಧ ಅಂಗಡಿ ಮಳಿಗೆಗಳು, ತಿನಿಸು, ಆಟಿಕೆಗಳು, ವಸ್ತುಗಳ ಮೇಳ ನಡೆಯುತ್ತದೆ. ಮಕ್ಕಳಿಗೆ ಆಟವಾಡುವ ಸಾಧನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿರುತ್ತವೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಸಂಭ್ರಮ ;
ಭಕ್ತರ ಸುರಕ್ಷತೆ ಹಾಗೂ ವ್ಯವಸ್ಥೆಗಳಿಗಾಗಿ ದೇವಸ್ಥಾನ ಆಡಳಿತ, ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಸ್ವಚ್ಛತೆ, ಕುಡಿಯುವ ನೀರು, ವೈದ್ಯಕೀಯ ನೆರವು ಮತ್ತು ಸಂಚಾರ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಬಾರಿಯ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜ.02 ರಂದು ಪ್ರಾರಂಭಗೊಂಡಿದ್ದು ಜ.12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಸಂಭ್ರಮದಿಂದ ನಡೆಯಲಿದೆ.
ಮಕ್ಕಳ ಪಾಲಿಗಂತೂ ಸುಳ್ಯ ಜಾತ್ರೆ ಅನ್ನೋದು ಹಬ್ಬ ;
ಸುಳ್ಯ ಜಾತ್ರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಜನರನ್ನು ಒಂದಾಗಿಸುವ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಹಬ್ಬವಾಗಿದೆ. ಇಲ್ಲಿ ಒಂದೇ ಕಡೆ ಒಂದೇ ದಿನ ವಿಭಿನ್ನ ಕಡೆಗಳಿಂದ ಜನರು ಬಂದು ಒಟ್ಟಾಗಿ ಸೇರುವುದರಿಂದ ಸುಳ್ಯ ಜಾತ್ರೆ ಬರುವುದಕ್ಕಾಗಿ ಶಾಲಾ ಮಕ್ಕಳು ಕಾದು ಕೂರುವ ಸಂಭ್ರವೂ ಇನ್ನೊಂದೊಡೆಯಿರುತ್ತದೆ. ಇಲ್ಲಿ ಆಸುಪಾಸಿನ ಶಾಲಾ ಮಕ್ಕಳಿಗೆ ಸುಳ್ಯ ಜಾತ್ರೆಗೆಂದು ರಜಾದಿನವನ್ನೂ ಕೊಡಲಾಗುತ್ತದೆ. ಹಾಗಾಗಿ, ಮಕ್ಕಳ ಪಾಲಿಗಂತೂ ಸುಳ್ಯ ಜಾತ್ರೆ ಅನ್ನೋದು ಹಬ್ಬದ ತರ. ಮನೆಯವರ ಜೊತೆ ಅಥವಾ ಸ್ನೇಹಿತರ ಜೊತೆ ಜಾತ್ರೆಯಲ್ಲಿ ಸುತ್ತಾಡೋದು ಅಂದ್ರೆ ತುಂಬಾನೇ ಇಷ್ಟ ಪಡ್ತಾರೆ. ಹೀಗಾಗಿ, ಈ ಬಾರಿಯ ಸುಳ್ಯ ಜಾತ್ರೆಗೆ ಚಾಲನೆಯಾಗಿದ್ದು, 1 2 ರ ತನಕ ಸುಳ್ಯ ಜನತೆಗೂ ಹಬ್ಬದ ವಾತಾವರಣವೆಂದೇ ಹೇಳಬಹುದು.
The hustle and bustle of the ‘Sulya Jatre’ spreads a sense of celebration to the surrounding towns. – ತುಳು ಟೈಮ್ಸ್
ಇದನ್ನೂ ಓದಿ :ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ : ಆರೋಗ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/wM3G9Pp9fy0?si=ac6xCWVuYD8L6bNl











