ಉಡುಪಿ: Tulu Times | ಕಾಪು ತಾಲೂಕಿನ ಹೆಜಮಾಡಿ ಸಮುದ್ರ ತೀರದಲ್ಲಿ ಬೂತಾಯಿ ಮೀನುಗಳ ರಾಶಿ ಕಂಡು ಬಂದಿದ್ದು, ಜನ ಮೀನುಗಳನ್ನು ನೋಡಿ ಶಾಕ್ ಆಗಿದ್ದಾರೆ.
ಮೀನು ಹಿಡಿದುಕೊಂಡು ಮನೆಗೆ ಹೋದ ಜನರು!
ಕಡಲ ತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಲಕ್ಷಾಂತರ ಬೂತಾಯಿ ಮೀನುಗಳು ಸಿಕ್ಕಿವೆ. ಸಮುದ್ರದ ದಡಕ್ಕೆ ಮೀನುಗಳ ರಾಶಿ ಅಪ್ಪಳಿಸಿದೆ. ಇನ್ನು ಸಮುದ್ರದ ಹತ್ತಿರದಲ್ಲಿರುವ ಜನ ಮೀನುಗಳ ರಾಶಿ ಕಂಡು ಫುಲ್ ಖುಷಿಯಾಗಿದ್ದಾರೆ. ಮೀನಿನ ರಾಶಿಯನ್ನು ಕಂಡು ಖುಷಿಯಾದ ಜನ ಕೈಗೆ ಸಿಕ್ಕಿದಷ್ಟು ಮೀನುಗಳನ್ನು ಮನೆಗೆ ಹಿಡಿದುಕೊಂಡು ಹೋಗಿದ್ದಾರೆ. ಕಡಲ ತೀರದಲ್ಲಿ ಮೀನುಗಳ ಜಿಗಿಯುತ್ತಿರುವ ಮತ್ತು ಜನರು ಮೀನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉಡುಪಿಯ ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥರು ಮಂಗಳೂರಿಗೆ ಪುರ ಪ್ರವೇಶ
ಮಂಗಳೂರು: ಜ.4ರಂದು ಸಂಜೆ 4 ಗಂಟೆಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಉಡುಪಿಯ ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥರು ಮಂಗಳೂರಿಗೆ ಪುರ ಪ್ರವೇಶ ಮಾಡಲಿದ್ದಾರೆ.
ವೇದವರ್ಧನ ತೀರ್ಥರನ್ನು ಪರ್ಯಾಯದ ಮಂಗಳೂರು ಸ್ವಾಗತ ಸಮಿತಿ ಹಾಗೂ ಭಕ್ತ ಸಮೂಹದಿಂದ ಉರ್ವಸ್ಟೋರ್ ಮಜ ಗಣಪ ಮ ದೇವಸ್ಥಾನದ ಆವರಣದಲ್ಲಿ ಶ್ರೀಗಳನ್ನು ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಗುತ್ತದೆ. ಶೀರೂರು ಮಠಾಧೀಶರು ಪ್ರಥಮ ಬಾರಿಗೆ ವರ್ಯಾಮ ಸರ್ವಜ್ಞ ಪೀಠವನ್ನು ಅಲಂಕರಿಸುತ್ತಿದ್ದಾರೆ.
ಉಡುಪಿ ಶೀರೂರು ಪರ್ಯಾಯ 2026 ಸ್ವಾಗತ ಸಮಿತಿಯ ಮಂಗಳೂರು ಗೌರವಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಸುದ್ದಿಗೋಷ್ಠಿ ನಡೆಸಿ, ಬಿ. 4ರಿಂದ 8 ರವರೆಗೆ ಶ್ರೀಗಳು ಜ. 4ರಿಂದ 8ತನಕ ಮಂಗಳೂರಿನ ಭಕ್ತಾದಿಗಳ ಮನೆಗೆ ಭೇಟಿ, ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ನಂತರ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರ್ಯಾಯ ರಾಯಸವನ್ನು ಭಕ್ತಾದಿಗಳಿಗೆ ನೀಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಮಿತಿ ಕಾರ್ಯಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಪ್ರಧಾನ ಸಂಚಾಲಕ ಗುರುಪ್ರಸಾದ್ ಕಡಂಬಾರ್, ಕೋಶಾಧಿಕಾರಿ ಬಿ. ಸುಬ್ರಹ್ಮಣ್ಯ ರಾವ್, ಉಪಾಧ್ಯಕ್ಷ ಎಂ. ರವೀಂದ್ರ ಶೇಟ್ ಇನ್ನಿತರರು ಉಪಸ್ಥಿತರಿದ್ದರು.
Udupi: People are shocked to see heaps of Buthai fish on the beach!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











