ವಾಯುಮಾಲಿನ್ಯ : Tulu Times | ಕೈಗಾರಿಕಾ ವಿಸ್ತರಣೆ, ವಾಹನಗಳ ಹೆಚ್ಚಳ ಮತ್ತು ಪರಿಸರ ನಿರ್ಲಕ್ಷ್ಯದಿಂದ ಗಾಳಿಯ ಮಾಲಿನ್ಯ ಮಾನವನ ಆರೋಗ್ಯಕ್ಕೆ ಗಂಭೀರ ಸಮಸ್ಯೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಗರಗಳು ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿರುವುದು ದೊಡ್ಡ ಚಿಂತೆಯ ವಿಷಯವಾಗಿದೆ. ನಾವು ಉಸಿರಾಡುವ ಗಾಳಿ ಶುದ್ಧವಾಗಿರಬೇಕು ಎಂಬುದು ಜೀವಮಾನಕ್ಕೆ ಅತ್ಯಗತ್ಯವಾದ ಅಂಶ.
ದೀರ್ಘಕಾಲದ ಮಾಲಿನ್ಯ ಮಾನಸಿಕ ಆರೋಗ್ಯಕ್ಕೂ ಹಾನಿ ;
ಕುಸಿದ ಗಾಳಿಯ ಗುಣಮಟ್ಟದಿಂದ ಉಸಿರಾಟದ ತೊಂದರೆಗಳು, ಅಸ್ತಮಾ, ಹೃದಯ ಸಂಬಂಧಿ ರೋಗಗಳು, ಕಣ್ಣು ಮತ್ತು ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಿದ್ದಾರೆ. ದೀರ್ಘಕಾಲದ ಮಾಲಿನ್ಯ ಮಾನಸಿಕ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು.
ಇತ್ತೀಚೆಗೆ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಇಂದಿನ ಗಾಳಿಯ ಗುಣಮಟ್ಟ ಕಡಿಮೆ ಇದ್ದು, ನಗರದ ಹಲವು ಭಾಗಗಳಲ್ಲಿ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.
ಉಸಿರಾಡಲು ಗಾಳಿಯೇ ದೊರೆಯದ ಪರಿಸ್ಥಿತಿ ಎದುರಾಗಬಹುದು ;
2025 ರಲ್ಲಿ, ಬೆಂಗಳೂರು ನಗರದಲ್ಲಿ ವಾಯು ಗುಣಮಟ್ಟ ಹಂತ ಹಂತವಾಗಿ ಹಾನಿಕರ ದಿಕ್ಕಿನಲ್ಲಿ ಬದಲಾಗಿದೆ. ವರ್ಷಾಂತ್ಯದ ಅಂಕಿಅಂಶಗಳನ್ನು ನೋಡಿದರೆ 2025 ರಲ್ಲಿ ನಗರವು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕೆಟ್ಟ ವಾಯು ಗುಣಮಟ್ಟವನ್ನು ದಾಖಲಿಸಿದೆ . ವರ್ಷದಲ್ಲಿ ಬಹುತೇಕ ದಿನಗಳು ಮಧ್ಯಮದಿಂದ ಅನಾರೋಗ್ಯಕರ ಮಟ್ಟದವರೆಗೆ ತಲುಪಿದ್ದು, 2024 ರೊಂದಿಗೆ ಹೋಲಿಸಿದರೆ ಗುಣಮಟ್ಟದಲ್ಲಿ ಬಹುದೊಡ್ಡ ಕುಸಿತ ಕಂಡಿದೆ. ನಗರದಲ್ಲಿ ವಾಹನಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗಿದೆ. ರಸ್ತೆಯಿಂದ ಹೊಮ್ಮುವ ಧೂಳು, ಕಟ್ಟಡ ನಿರ್ಮಾಣದ ಧೂಳು ಮತ್ತು ಚಳಿಗಾಲದ ಮಂಜಿನ ಪರಿಣಾಮಗಳು ಈ ಕಳಪೆ ಗುಣಮಟ್ಟಕ್ಕೆ ಕಾರಣವಾಗಿದೆ ಎಂದು ವಾಯು ಗುಣಮಟ್ಟ ತಜ್ಞರು ಹೇಳುತ್ತಾರೆ.
ಗಾಳಿಯ ಗುಣಮಟ್ಟ ಕುಸಿತವು ಕೇವಲ ಪರಿಸರ ಸಮಸ್ಯೆಯಲ್ಲ, ಇದು ಮಾನವ ಜೀವನದ ಗುಣಮಟ್ಟವನ್ನು ನೇರವಾಗಿ ತಟ್ಟುವ ಜೀವಂತ ಸಮಸ್ಯೆ. ಇಂದು ನಾವು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ನಾಳೆ ಉಸಿರಾಡಲು ಗಾಳಿಯೇ ದೊರೆಯದ ಪರಿಸ್ಥಿತಿ ಎದುರಾಗಬಹುದು. ಶುದ್ಧ ಗಾಳಿ ನಮ್ಮ ಹಕ್ಕು ಮಾತ್ರವಲ್ಲ, ನಮ್ಮ ಹೊಣೆಗಾರಿಕೆಯೂ ಹೌದು.
Air quality is deteriorating sharply: Health problems are likely to increase – ತುಳು ಟೈಮ್ಸ್
ಇದನ್ನೂ ಓದಿ :ಧರ್ಮಶಾಲಾದಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ರ‍್ಯಾಗಿಂಗ್
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=odtczmtszn91Oug8











