Karnataka ಕಡೆಗೂ ರಾಜ್ಯ ಸರ್ಕಾರ ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಮನ್ನಣೆ ಕೊಟ್ಟಿದೆ.ಒಂದು ವಾರದಿಂದ ಆರ್ ಎಸ್ ಎಸ್ ಬ್ಯಾನ್ ಕುರಿತಾದ ಚರ್ಚೆ ಜೋರಾಗ್ತಿತ್ತು.ಇಂದು ನಡೆದ ಸಂಚಿವ ಸಂಪುಟ ಸಭೆಯಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ನಿಷೇಧ ಹೇರಿ ನಿರ್ಣಯ ಕೈಗೊಳ್ಳಲಾಗಿದೆ.
ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಸಂಘದ ಚಟುವಟಿಕೆ ನಡೆಸುವುದ್ಕಕೆ ಅವಕಾಶ ಇರುವುದಿಲ್ಲ.ಆರ್ ಎಸ್ ಎಸ್ ನ ಕಾರ್ಯಕ್ರಮಕ್ಕೆ ಅನುಮತಿ ಪಡೆದೇ ಮಾಡಬೇಕಾಗುತ್ತದೆ.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸರ್ಕಾರಕ್ಕೆ ಒಳಪಟ್ಟ ಪಾರ್ಕ್,ಗ್ರೌಂಡ್,ಅನುದಾನಿತ ಶಾಲೆ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನ ಆರ್ ಎಸ್ ಎಸ್ ಹೀಗೆ ರಾಜ್ಯ ಸರ್ಕಾರ ವ್ಯಾಪ್ತಿಗೆ ಬರುವ ಯಾವುದೇ ಸ್ಥಳಗಳಲ್ಲಿ ಆರ್ ಎಸ್ ಎಸ್ ಯಾವುದೇ ಚಟುವಟಿಕೆ ನಡೆಸದಂತೆ ಕರ್ನಾಟಕದಲ್ಲಿ ಸರ್ಕಾರ ನಿಷೇಧ ಹೇರಿದೆ.ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ ಬರೆದು ಸಂಘದ ಚಟುವಟಿಕೆಯನ್ನು ನಿಷೇಧಿಸುವಂತೆ ಪತ್ರ ಬರೆದಿದ್ದರು.
ಪ್ರಿಯಾಂಕ ಖರ್ಗೆ ಬರೆದ ಪತ್ರದಲ್ಲಿ ಸಂಘವೂ ಅಶಾಂತಿಗೆ ಕಾರಣವಾಗ್ತಿದೆ.ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆಯ ಗ್ರೌಂಡ್ ಗಳಲ್ಲಿ ಶಾಖೆ ನಡೆಸಲಾಗ್ತಿದೆ.ಜೊತೆಗೆ ಜೋರಾಗಿ ಘೋಷಣೆಗಳನ್ನು ಕೂಗಿ ಯುವಕರ ಮನಸ್ಸಿನಲ್ಲಿ ಭಾರತದ ಏಕತೆಯ ವಿರುದ್ದವಾಗಿ ಸಂವಿಧಾನದ ವಿಚಾರಗಳ ವಿರುದ್ದವಾಗಿ ಸಮಾಜದಲ್ಲಿ ನಕಾರಾತ್ಮಕ ವಿಚಾರಗಳನ್ನು ತುಂಬುತ್ತಿದೆ.ಪೊಲೀಸರ ಅನುಮತಿಯಿಲ್ಲದೆ.ದೊಣ್ಣೆಗಳನ್ನು ಹಿಡಿದು ಅಕ್ರಮಣಕಾರಿ ಪ್ರದರ್ಶನ ನಡೆಸ್ತಾರೆ.ಇದರಿಂದಾಗಿ ಮುಗ್ಧ ಮಕ್ಕಳು ಮತ್ತು ಯುವಜನರ ಮೇಲೆ ದುಷ್ಟರಿಣಾಮ ಬೀರಲಾಗ್ತಿದೆ.ನಾಡಿನ ಮಕ್ಕಳು ಯುವ ಸಮುದಾಯ ಸಾರ್ವಜನಿಕರು ಸಮಾಜದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು,ಅನುದಾನಿತ ಶಾಲೆಗಳು ಗ್ರೌಂಡ್ ಗಳು,ಮುಜರಾಯಿ ಇಲಾಖೆಯ ದೇವಸ್ಥಾನ,ಪುರಾತತ್ವ ಇಲಾಖೆಯ ಸ್ಥಳಗಳಲ್ಲಿ ಸಂಘದ ಶಾಖೆ,ಬೈಠಕ್ ಇನ್ನಿತರ ಆರ್ ಎಸ್ ಎಸ್ ನ ಚಟುವಟಿಕೆಗಳನ್ನು ನಡೆಸದಂತೆ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿಯವರಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ರು.
ಪ್ರಿಯಾಂಕ್ ಖರ್ಗೆ ಬರೆದ ಪತ್ರಕ್ಕೆ ಮನ್ನಣೆ ನೀಡಿ ಇದೀಗ ಸಚಿವ ಸಂಪುಟ ಕ್ರಮ ಕೈಗೊಂಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರದ ಪ್ರದೇಶಗಳಲ್ಲಿ ಇನ್ನುಂದೆ ಅವಕಾಶವಿರುವುದಿಲ್ಲ.ಅಂದರೆ ಕರ್ನಾಟಕದಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಗಳನ್ನು ಬ್ಯಾನ್ ಮಾಡಲಾಗಿದೆ.
ಇದನ್ನೂ ಓದಿ:kanthara chapter1 ನೋಡಿದವರಿಗೆ ಪ್ರತಿಕ್ರಿಯಿಸುವ ಹಕ್ಕಿರುತ್ತದೆ-ರಿಷಬ್ ಶೆಟ್ಟಿ!
.………………………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











