ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಗಿಗ್ ಕಾರ್ಮಿಕರು ಎಂದರೆ ಯಾರು? : ಕೆಲಸ ಮಾಡಿದಕ್ಕೆ ಮಾತ್ರ ಆದಾಯ

ಗಿಗ್ ಕಾರ್ಮಿಕರು : Tulu Times | ಗಿಗ್ ಕಾರ್ಮಿಕರು ಎಂದರೆ, ಶಾಶ್ವತ ಉದ್ಯೋಗದ ಬದಲು ತಾತ್ಕಾಲಿಕ, ಒಪ್ಪಂದ ಆಧಾರಿತ ಅಥವಾ ಕೆಲಸಕ್ಕೆ ವೇತನ ಪಡೆಯುವವರು. ಇವರು ಸಾಮಾನ್ಯವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಅಥವಾ ಮೊಬೈಲ್ ಆ್ಯಪ್‌ಗಳ ಮೂಲಕ ಕೆಲಸ ಮಾಡುತ್ತಾರೆ. ಉದಾಹರಣೆಗೆ : ಆಹಾರ ಮತ್ತು ವಸ್ತು ವಿತರಕರು – ಜೊಮ್ಯಾಟೋ, ಸ್ವಿಗ್ಗಿ, ಬ್ಲಿಂಕಿಟ್, ಡುನ್ಜೋ ಡೆಲಿವರಿ ಪಾಲುದಾರರು ಕ್ಯಾಬ್ ಮತ್ತು ಬೈಕ್ ಟ್ಯಾಕ್ಸಿ ಚಾಲಕರು – ಊಬರ್, ಓಲಾ ಆನ್‌ಲೈನ್ ಫ್ರೀಲಾನ್ಸರ್‌ಗಳು – ಡಿಸೈನ್, ಬರವಣಿಗೆ, ಡಿಜಿಟಲ್ ಮಾರ್ಕೆಟಿಂಗ್, ಡೇಟಾ ಎಂಟ್ರಿ, ಗೃಹ ಸೇವಾ ಕಾರ್ಮಿಕರು ಮೂಲಕ ಕೆಲಸ ಮಾಡುವವರು ಆನ್‌ಲೈನ್ ಟ್ಯೂಟರ್‌ಗಳು, ತಂತ್ರಜ್ಞಾನ ಸೇವಾ ಕಾರ್ಮಿಕರು ಇತ್ಯಾದಿಗಳಾಗಿವೆ.

ಶಾಶ್ವತ ಉದ್ಯೋಗದ ಭದ್ರತೆ ಇಲ್ಲ ;

ಗಿಗ್ ಕಾರ್ಮಿಕರ ಪ್ರಮುಖ ಲಕ್ಷಣಗಳು ಏನಂದ್ರೆ, ಇವರಿಗೆ ಇಂತಹದ್ದೇ ಅನ್ನೋ ಶಾಶ್ವತ ಉದ್ಯೋಗದ ಭದ್ರತೆ ಇಲ್ಲ, ಕೆಲಸದ ಸಮಯ ನಿಶ್ಚಿತವಾಗಿರುವುದಿಲ್ಲ. ಹಾಗೂ ಪಿಂಚಣಿ, ಪಿಎಫ್, ಆರೋಗ್ಯ ವಿಮೆ ಮುಂತಾದ ಸಾಂಪ್ರದಾಯಿಕ ಸೌಲಭ್ಯಗಳು ಇರುವುದಿಲ್ಲ. ಕೆಲಸ ಮಾಡಿದಷ್ಟಕ್ಕೆ ಮಾತ್ರ ಆದಾಯ ದೊರೆಯುತ್ತದೆ. ಇನ್ನೂ ಸರಳವಾಗಿ ಹೇಳಬೇಕಂದ್ರೆ, ಆ್ಯಪ್ ಅಥವಾ ಪ್ಲಾಟ್‌ಫಾರ್ಮ್ ನಿಯಂತ್ರಣದಡಿ ಕೆಲಸ. ಸಾರಾಂಶವಾಗಿ ಹೇಳುವುದಾದರೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಾತ್ಕಾಲಿಕವಾಗಿ ಕೆಲಸ ಮಾಡಿ ಆದಾಯ ಗಳಿಸುವವರನ್ನೇ ಗಿಗ್ ಕಾರ್ಮಿಕರು ಎಂದು ಕರೆಯಲಾಗುತ್ತದೆ.

ವರ್ಷದ ಕೊನೆಯಲ್ಲಿ ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದ ಸುರಕ್ಷತಾ ಕ್ರಮಗಳು, ತುರ್ತು ರಜೆ ಮತ್ತು ಸಮಗ್ರ ಮಾತೃತ್ವ ರಕ್ಷಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದರು. ಮುಖ್ಯವಾಗಿ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 – 20 ನಿಮಿಷದ ಸೇವೆಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದು, ವಿಪರೀತ ಟ್ರಾಫಿಕ್ ಜಾಮ್ ಸಮಸ್ಯೆಗಳ ನಡುವೆ ಅತ್ಯಂತ ಕಡಿಮೆ ಸಮಯದಲ್ಲಿ ಡೆಲಿವರಿ ಕಷ್ಟ ಎಂದು ಗಿಗ್‌ ನೌಕರರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

Who are gig workers? : Income only for working – ತುಳು ಟೈಮ್ಸ್

ಇದನ್ನೂ ಓದಿ :ವಿಟ್ಲ: ಎಲೆಕ್ರ್ಟಾನಿಕ್ಸ್‌ ಅಂಗಡಿಯಲ್ಲಿ ಬೆಂಕಿ ಅವಘಡ..ಹೊತ್ತಿ ಉರಿದ ಶಾಪ್‌ !

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=odtczmtszn91Oug8

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page