ಬೆಂಗಳೂರು: Tulu Times | ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಶಾಸಕ ಜನಾರ್ದನ ರೆಡ್ಡಿಯವರಿಗೆ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಜನಾರ್ದನ ರೆಡ್ಡಿಯವರ ಮೇಲೆ ನಡೆದ ಹಲ್ಲೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಕರ್ನಾಟಕದಲ್ಲಿ ಮಾದಕವಸ್ತು (ಡ್ರಗ್) ಮಾಫಿಯ ಹೆಚ್ಚಾಗಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕರ್ನಾಟಕದಲ್ಲಿ ಗೂಂಡಾರಾಜ್ಯ ತಾಂಡವವಾಡುತ್ತಿದೆ. ಕಾಂಗ್ರೆಸ್ ಪ್ರೇರಿತ ಗೂಂಡಾ ವ್ಯವಸ್ಥೆಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕರೇ ಪೊಲೀಸ್ ಠಾಣೆಗೆ ತೆರಳಿ ಬೆದರಿಸಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಜನಾರ್ದನ ರೆಡ್ಡಿಯವರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದ್ದಾರೆ. ಹಲ್ಲೆ ಆರೋಪಿಗಳನ್ನು ಮತ್ತು ಇದರ ಹಿಂದಿರುವ ದುಷ್ಟ ಶಕ್ತಿಗಳನ್ನು ತಕ್ಷಣವೇ ಬಂಧಿಸುವಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಆಗ್ರಹಿಸಿದ್ದಾರೆ. ಈ ಸಮಸ್ಯೆಯನ್ನು ಸಿದ್ದರಾಮಯ್ಯನವರು ತಕ್ಷಣವೇ ಬಗೆಹರಿಸಬೇಕು. ಇದಕ್ಕಾಗಿ ಜನಾರ್ದನ ರೆಡ್ಡಿಯವರಿಗೆ ಭದ್ರತಾ ವ್ಯವಸ್ಥೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಮುಂದೆ ಆಗುವ ಸಮಸ್ಯೆಗಳಿಗೆ ಸಿದ್ದರಾಮಯ್ಯರ ನೇತೃತ್ವದ ಸರಕಾರವೇ ಹೊಣೆ ಹೊರಬೇಕು ಎಂದು ಎಚ್ಚರಿಸಿದ್ದಾರೆ.
ಕ್ಯಾನ್ಸರ್ ವಿರುದ್ಧ ಮೊದಲ ಹೆಜ್ಜೆ !
ಜನರು ಭಯಭೀತರಾಗುವ ಒಂದೇ ಒಂದು ಕಾಯಿಲೆ ಕ್ಯಾನ್ಸರ್. ಒಮ್ಮೆ ಒಂದು ವ್ಯಕ್ತಿಗೆ ಈ ರೋಗ ತಗುಲಿತ್ತೆಂದರೆ ಆತ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಜೊತೆಗಿದ್ದವರೂ ಮರುಗುತ್ತಾರೆ. ಹೌದು…! ಕ್ಯಾನ್ಸರ್ ಎಂಬುದು ಇಂದು ಜಗತ್ತಿನಾದ್ಯಂತ ಅನೇಕ ಜನರನ್ನು ಕಾಡುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ದೇಹದ ಕೆಲವು ಕೋಶಗಳು ನಿಯಂತ್ರಣವಿಲ್ಲದೆ ಬೆಳೆಯಲು ಆರಂಭಿಸಿದಾಗ ಕ್ಯಾನ್ಸರ್ ಉಂಟಾಗುತ್ತದೆ. ಈ ಅಸಾಮಾನ್ಯ ಕೋಶಗಳು ದೇಹದ ಬೇರೆ ಭಾಗಗಳಿಗೆ ಹರಡುವ ಸಾಮರ್ಥ್ಯ ಹೊಂದಿರುತ್ತವೆ. ಇದನ್ನು ಸದ್ಯಕ್ಕೆ ನಿಖರವಾಗಿ ಹೀಗೇ ಗುಣಪಡಿಸಬಹುದೆಂಬ ಯಾವುದೇ ಔಷಧಿಗಳು ಇಲ್ಲವಾದ್ದರಿಂದ ಕೆಲವೊಮ್ಮೆ ಪ್ರಾರಂಭದಲ್ಲಿ ತಿಳಿಯದ ಈ ಕಾಯಿಲೆ ಕೊನೆಯ ಹಂತದಲ್ಲಿ ಗೊತ್ತಾಗುವಾಗ ಕೈಕಾಲುಗಳೇ ಆಡೋದಿಲ್ಲ.
ಈ ಕಾಯಿಲೆ ಬರೋದಿಕ್ಕೆ ಧೂಮಪಾನ ಮತ್ತು ತಂಬಾಕು ಸೇವನೆ, ಮದ್ಯಪಾನ, ಅನಾರೋಗ್ಯಕರ ಆಹಾರ ಪದ್ಧತಿ, ವಾಯು ಮಾಲಿನ್ಯ ಮತ್ತು ರಾಸಾಯನಿಕಗಳ ಸಂಪರ್ಕ, ವಂಶಪಾರಂಪರ್ಯ ಕಾರಣಗಳು, ಅತಿಯಾದ ಒತ್ತಡ ಮತ್ತು ಜೀವನಶೈಲಿ ದೋಷಗಳು, ಸೂರ್ಯನ ಅತಿಯಾದ ಕಿರಣಗಳು (ಚರ್ಮ ಕ್ಯಾನ್ಸರ್) ಇತ್ಯಾದಿಗಳು ಮುಖ್ಯ ಕಾರಣಗಳೆಂದು ಹೇಳಲಾಗಿದೆ. ಇದರಿಂದ ದೇಹಕ್ಕೆ ದೀರ್ಘಕಾಲದ ದಣಿವು, ಕಾರಣವಿಲ್ಲದ ತೂಕ ಇಳಿಕೆ, ದೇಹದ ಯಾವುದಾದರೂ ಭಾಗದಲ್ಲಿ ಗಡ್ಡೆ, ದೀರ್ಘಕಾಲ ಗುಣವಾಗದ ಗಾಯ, ನಿರಂತರ ನೋವು ಅಥವಾ ರಕ್ತಸ್ರಾವ, ಆಹಾರ ಜೀರ್ಣವಾಗದಿರುವುದು ಇತ್ಯಾದಿ… ಇನ್ನು ಈ ರೋಗದ ಹಂತದ ಮೇಲೆ ಚಿಕಿತ್ಸೆಯ ವಿಧಾನ ನಿರ್ಧರಿಸಲಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
A goon state is rampant in Karnataka: Sudhakar Reddy- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











