ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಾಸರಗೋಡು: ಬೇಕಲ್ ಬೀಚ್ ಉತ್ಸವದಲ್ಲಿ ಕಾಲ್ತುಳಿತ.. ಓರ್ವ ಮೃತ್ಯು

ಕಾಸರಗೋಡು: Tulu Times | ಕಾಸರಗೋಡು ಜಿಲ್ಲೆಯ ಬೇಕಲ್ ಬೀಚ್ ಉತ್ಸವದಲ್ಲಿ ಕಾಲ್ತುಳಿತ ಉಂಟಾಗಿ, ಓರ್ವ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.

ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ್ ಬೀಚ್ ಉತ್ಸವದಲ್ಲಿ  ಮಲಯಾಳಂ ರ‍್ಯಾಪರ್ ವೇದನ್ ಅವರ ಸಂಗೀತ ಕಚೇರಿಯ ಸಂದರ್ಭ ಕಾಲ್ತುಳಿತ ಉಂಟಾಗಿದೆ. ಮಕ್ಕಳು ಸೇರಿದಂತೆ ಹಲವು ಗಾಯಗೊಂಡಿದ್ದಾರೆ.  ಇದೇ ವೇಳೆ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನಪ್ಪಿದ್ದಾನೆ ಎಂದು ವರದಿಯಾಗಿದೆ. ಮಕ್ಕಳು , ಹಿರಿಯರು ಸೇರಿದಂತೆ ಹಲವು ಮಂದಿ ಕುಸಿದು ಬಿದ್ದಿದ್ದಾರೆ. ಘಟನೆ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಮೃತಪಟ್ಟವರನ್ನು ಪೊಯಿನಾಚಿಯ ಶಿವಾನಂದ (19) ಎಂದು ಗುರುತಿಸಲಾಗಿದೆ.

ಭಾರೀ ಜನಸಂದಣಿ ಉಂಟಾಗಿ ನೂಕುನುಗ್ಗಲು!

ಬೇಕಲ್ ಪಾರ್ಕ್ ಪಕ್ಕದದಲ್ಲಿ  ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದನ್ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ಬಹಳ ತಡವಾಗಿ ಆಗಮಿಸಿದ ಹಿನ್ನಲೆ  ದೊಡ್ಡ ಜನಸಮೂಹ ಜಮಾಯಿಸಿತ್ತು.  25,000 ಕ್ಕೂ ಹೆಚ್ಚು ಜನ ಸೇರಿದ್ದರು. ಭಾರೀ ಸಂಖ್ಯೆಯ ಪ್ರೇಕ್ಷಕರು ತಲುಪಿದ್ದರಿಂದ ಜನಸಂದಣಿಯು ಪಾರ್ಕ್ ಸಮೀಪದ ರೈಲ್ವೆ ಹಳಿ ತನಕ ತಲುಪಿತ್ತು. ಈ ಸಂದರ್ಭದಲ್ಲಿ ರೈಲು ಬಡಿದು ಶಿವಾನಂದ ಮೃತಪಟ್ಟಿದ್ದಾರೆ. ಶಿವಾನಂದ ಅವರ ಜೊತೆಗಿದ್ದ ಇನ್ನೋರ್ವನಿಗೂ ರೈಲು ಬಡಿದಿದೆ. ಪರಿಸ್ಥಿತಿಯನ್ನು ನಿರ್ವಹಿಸಲು  ತುರ್ತು ಸೇವೆಗಳು ಕಾರ್ಯಾಚರಣೆ ನಡೆಸಿದರು, ಬೇಕಲ್ ಬೀಚ್ ಉತ್ಸವದ ಭಾಗವಾಗಿ ಬೇಕಲ್ ಪಾರ್ಕ್ ಬಳಿ ಈ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: ಪುತ್ತೂರಿನ ಅಕ್ಷಯ ಪದವಿ ಕಾಲೇಜಿನ ಸಂಸ್ಕೃತ ಭಾಷಾ ವಿದ್ಯಾರ್ಥಿಗಳಿಗೆ ಲಭಿಸಿದ ವಿದ್ಯಾರ್ಥಿವೇತನ

ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೆ ಯಾವಾಗ..?

ಇತಿಹಾಸದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದ ಹೆಮ್ಮೆಯ ಯೋಜನೆ ವಂದೇ ಭಾರತ್ ಎಕ್ಸ್‌ಪ್ರೆಸ್. ಇದು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸಲಾದ ಮೊದಲ ಹೈಸ್ಪೀಡ್ ರೈಲು ಆಗಿದ್ದು, ಇದರಿಂದ ವ್ಯಾಪಾರ, ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರಕಿದೆ. ಪ್ರಯಾಣಿಕರಿಗೂ ಬಹಳ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗೋದಿಕ್ಕೆ ಈ ಸಾರಿಗೆ ಉತ್ತಮ ವ್ಯವಸ್ಥೆಯೆಂದು ಹೇಳಲಾಗಿದೆ.

ಇದನ್ನೂ ಓದಿ: ಆರೋಗ್ಯಕರ ಜೀವನಶೈಲಿ ಕ್ಯಾನ್ಸರ್ ವಿರುದ್ಧದ ಮೊದಲ ಹೆಜ್ಜೆ

ಇದು ಗಂಟೆಗೆ ಸುಮಾರು 160 ಕಿಲೋ ಮೀಟರ್ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಅಲ್ಲದೇ, ವೇಗದ ಜೊತೆಗೆ ಪ್ರಯಾಣಿಕರ ಆರಾಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಂದೇ ಭಾರತ್ ರೈಲು ವಿದ್ಯುತ್ ಚಾಲಿತ ರೈಲಾಗಿದ್ದು, ಈ ರೈಲಿನಲ್ಲಿ ವಿಮಾನಮಟ್ಟದ ಸೀಟುಗಳು, ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ, ವೈ-ಫೈ ಸಿಸಿ ಟಿವಿ ಕ್ಯಾಮೆರಾ, ಜೈವಿಕ ಶೌಚಾಲಯಗಳು ಹಾಗೂ ಉತ್ತಮ ಬೆಳಕು ವ್ಯವಸ್ಥೆ ಅಳವಡಿಸಲಾಗಿದೆ ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ಸೌಲಭ್ಯಗಳೂ ಲಭ್ಯವಿರುತ್ತವೆ.

ಈ ರೈಲು ಕಡಿಮೆ ಶಕ್ತಿಯ ಬಳಕೆಯೊಂದಿಗೆ ಕಾರ್ಯನಿರ್ವಹಿಸುವುದರಿಂದ ಪರಿಸರ ಸ್ನೇಹಿ ಎಂದು ಹೇಳಲಾಗಿದೆ. ವಂದೇ ಭಾರತ್ ರೈಲು ಇಂದು ದೇಶದ ಅನೇಕ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತಿದ್ದು, ಕಡಿಮೆ ಸಮಯದಲ್ಲಿ ದೀರ್ಘ ಪ್ರಯಾಣ ಮುಗಿಸುವ ಸೌಲಭ್ಯವನ್ನು ನೀಡುತ್ತಿದೆ. ಮುಖ್ಯವಾಗಿ, ಈ ಹೈ ಸ್ಪೀಡ್ ರೈಲು ಇನ್ನು ಮುಂದೆ ಮಂಗಳೂರಿಗೆ ಬರೋದಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಈ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಅದಷ್ಟು ಬೇಗ ಈ ರೈಲು ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಬೆಂಗಳೂರು, ತುಮಕೂರು, ಹಾಸನ ಮತ್ತು ಮಂಗಳೂರು ಎಂಬ ನಾಲ್ಕು ಜಿಲ್ಲೆಗಳಿಗೆ ಇದು ಅನುಕೂಲವಾಗಲಿದೆ ಎನ್ನಲಾಗಿದೆ.

Kasaragod: Stampede at Bekal Beach Festival- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page