ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಆರೋಗ್ಯಕರ ಜೀವನಶೈಲಿ ಕ್ಯಾನ್ಸರ್ ವಿರುದ್ಧದ ಮೊದಲ ಹೆಜ್ಜೆ

ಕ್ಯಾನ್ಸರ್ : Tulu Times | ಜನರು ಭಯಭೀತರಾಗುವ ಒಂದೇ ಒಂದು ಕಾಯಿಲೆ ಕ್ಯಾನ್ಸರ್.‌ ಒಮ್ಮೆ ಒಂದು ವ್ಯಕ್ತಿಗೆ ಈ ರೋಗ ತಗುಲಿತ್ತೆಂದರೆ ಆತ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಜೊತೆಗಿದ್ದವರೂ ಮರುಗುತ್ತಾರೆ. ಹೌದು…! ಕ್ಯಾನ್ಸರ್ ಎಂಬುದು ಇಂದು ಜಗತ್ತಿನಾದ್ಯಂತ ಅನೇಕ ಜನರನ್ನು ಕಾಡುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ದೇಹದ ಕೆಲವು ಕೋಶಗಳು ನಿಯಂತ್ರಣವಿಲ್ಲದೆ ಬೆಳೆಯಲು ಆರಂಭಿಸಿದಾಗ ಕ್ಯಾನ್ಸರ್ ಉಂಟಾಗುತ್ತದೆ. ಈ ಅಸಾಮಾನ್ಯ ಕೋಶಗಳು ದೇಹದ ಬೇರೆ ಭಾಗಗಳಿಗೆ ಹರಡುವ ಸಾಮರ್ಥ್ಯ ಹೊಂದಿರುತ್ತವೆ. ಇದನ್ನು ಸದ್ಯಕ್ಕೆ ನಿಖರವಾಗಿ ಹೀಗೇ ಗುಣಪಡಿಸಬಹುದೆಂಬ ಯಾವುದೇ ಔಷಧಿಗಳು ಇಲ್ಲವಾದ್ದರಿಂದ ಕೆಲವೊಮ್ಮೆ ಪ್ರಾರಂಭದಲ್ಲಿ ತಿಳಿಯದ ಈ ಕಾಯಿಲೆ ಕೊನೆಯ ಹಂತದಲ್ಲಿ ಗೊತ್ತಾಗುವಾಗ ಕೈಕಾಲುಗಳೇ ಆಡೋದಿಲ್ಲ.

ದೀರ್ಘಕಾಲ ಗುಣವಾಗದ ಗಾಯ ;

ಈ ಕಾಯಿಲೆ ಬರೋದಿಕ್ಕೆ ಧೂಮಪಾನ ಮತ್ತು ತಂಬಾಕು ಸೇವನೆ‌, ಮದ್ಯಪಾನ,‌ ಅನಾರೋಗ್ಯಕರ ಆಹಾರ ಪದ್ಧತಿ, ವಾಯು ಮಾಲಿನ್ಯ ಮತ್ತು ರಾಸಾಯನಿಕಗಳ ಸಂಪರ್ಕ, ವಂಶಪಾರಂಪರ್ಯ ಕಾರಣಗಳು, ಅತಿಯಾದ ಒತ್ತಡ ಮತ್ತು ಜೀವನಶೈಲಿ ದೋಷಗಳು, ಸೂರ್ಯನ ಅತಿಯಾದ ಕಿರಣಗಳು (ಚರ್ಮ ಕ್ಯಾನ್ಸರ್) ಇತ್ಯಾದಿಗಳು ಮುಖ್ಯ ಕಾರಣಗಳೆಂದು ಹೇಳಲಾಗಿದೆ. ಇದರಿಂದ ದೇಹಕ್ಕೆ ದೀರ್ಘಕಾಲದ ದಣಿವು, ಕಾರಣವಿಲ್ಲದ ತೂಕ ಇಳಿಕೆ, ದೇಹದ ಯಾವುದಾದರೂ ಭಾಗದಲ್ಲಿ ಗಡ್ಡೆ,‌ ದೀರ್ಘಕಾಲ ಗುಣವಾಗದ ಗಾಯ, ನಿರಂತರ ನೋವು ಅಥವಾ ರಕ್ತಸ್ರಾವ, ಆಹಾರ ಜೀರ್ಣವಾಗದಿರುವುದು ಇತ್ಯಾದಿ…‌ ಇನ್ನು ಈ ರೋಗದ ಹಂತದ ಮೇಲೆ ಚಿಕಿತ್ಸೆಯ ವಿಧಾನ ನಿರ್ಧರಿಸಲಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ‌.

ಆರೋಗ್ಯಕರ ಜೀವನಶೈಲಿ ಕ್ಯಾನ್ಸರ್ ವಿರುದ್ಧದ ಮೊದಲ ಹೆಜ್ಜೆ ;

ಕ್ಯಾನ್ಸರ್ ಒಂದು ಭಯಾನಕ ರೋಗವಾಗಿದ್ದರೂ, ಸಮಯಕ್ಕೆ ಸರಿಯಾದ ಪತ್ತೆ ಮತ್ತು ಸರಿಯಾದ ಚಿಕಿತ್ಸೆಯಿಂದ ಇದನ್ನು ಜಯಿಸಬಹುದು. ಕ್ಯಾನ್ಸರ್ ಬಗ್ಗೆ ಅರಿವು ಹೆಚ್ಚಿದಂತೆ, ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ ಸುಲಭವಾಗುತ್ತದೆ. ಆರೋಗ್ಯಕರ ಜೀವನಶೈಲಿ ಕ್ಯಾನ್ಸರ್ ವಿರುದ್ಧದ ಮೊದಲ ಹೆಜ್ಜೆಯಾಗಿರುವುದರಿಂದ ಅನೇಕ ಆರೋಗ್ಯ ಸಲಹೆಗಳನ್ನು ಕ್ಯಾನ್ಸರ್ ವಿರುದ್ಧ ಹೋರಾಡಲು ಜನರಿಗೆ ಮಾಹಿತಿ ಕಾರ್ಯಾಗಾರಗಳನ್ನು ನೀಡಲಾಗುತ್ತದೆ.

A healthy lifestyle is the first step against cancer – ತುಳು ಟೈಮ್ಸ್

ಇದನ್ನೂ ಓದಿ :ಹೆಚ್ಚಾದ ಮಂಗಗಳ ಕಾಟ : ಬೆವರು ಹರಿಸಿ ಬೆಳೆಸಿದ ಬೆಳೆಗಳು ಕೈಗೇ ಸಿಗುತ್ತಿಲ್ಲ !

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=Id8I47Jb32eujgtm

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page