Puttur: ತಿಂಡಿ ಪಾರ್ಸೆಲ್ ಗೆ ಬಂದಿದ್ದ ಸಮಯದ್ದಲ್ಲಿ ಅಪರಿಚಿತ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದೆ ಎಂದು ಕೆಮ್ಮಾಯಿ ನಿವಾಸಿ ಪ್ರವೀಣ್ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೆಮ್ಮಾಯಿ ನಿವಾಸಿ ಪ್ರವೀಣ್ ತನ್ನ ಅಕ್ಕನ ಕಾರಿನಲ್ಲಿ ಕಾವೇರಿಕಟ್ಟೆ ಬಳಿ ಬಂದು ಅಲ್ಲಿ ತಿಂಡಿ ಪಾರ್ಸೆಲ್ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭ ಅಲ್ಲಿಯೇ ನಿಂತಿದ್ದ ನಾಲ್ಕರಿಂದ ಐದು ಮಂದಿ ಅಪರಿಚಿತರೊಂದಿಗೆ ಮಾತಿಗೆ ಮಾತು ಬೆಳೆದಿತ್ತು.
ಬಳಿಕ ಅವರು ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಪ್ರವೀಣ್ ಅವರ ಜೊತೆಯಲ್ಲಿದ್ದ ಪ್ರಜ್ವಲ್ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಕುರಿತು ಪ್ರವೀಣ್ ಅವರು ನೀಡಿದ ದೂರಿನನ್ವಯ ಪುತ್ತೂರು ನಗರ ಠಾಣೆ ಪೊಲೀಸರು ಕಲಂ:115, 126(2), 352, 351(2),324 ಜೊತೆಗೆ 3 (5) BNS 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:Bantwal: ತಲೆಮರೆಸಿಕೊಂಡಿದ್ದ ಮೋಸ್ಟ್ ವಾಟೆಂಡ್ ಆರೋಪಿಯ ಬಂಧನ
==========================================
ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4











