ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಒಂದೇ ದಿನ ಸಾವಿರಕ್ಕಿಂತಲೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಪಯಣ !

ಬೆಂಗಳೂರು : Tulu Times| ಇತ್ತೀಚೆಗೆ ದಿನೇದಿನೇ ಹೆಚ್ಚುತ್ತಿರುವ ವಾಹನ ಸಂಚಾರ, ವಾಯುಮಾಲಿನ್ಯ ಹಾಗೂ ಸಮಯ ನಷ್ಟಕ್ಕೆ ಪರಿಣಾಮಕಾರಿ ಪರಿಹಾರವಾಗಿ ನಮ್ಮ ಮೆಟ್ರೋ ರೂಪುಗೊಂಡಿದ್ದು, ಸಾವಿರಾರು ಜನರ ಪಾಲಿಗೆ ಇದು ಉತ್ತಮ ಬೇಡಿಕೆಯುಳ್ಳ ಸಾರಿಗೆಯಾಗಿದೆ. ಇದರ ನಿರ್ವಹಣೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮಾಡುತ್ತಿದ್ದು, ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದಲ್ಲಿ ಉತ್ತರ–ದಕ್ಷಿಣ ಹಾಗೂ ಪೂರ್ವ–ಪಶ್ಚಿಮ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಯಿತು. ನಂತರ ಹಂತ–2 ಹಾಗೂ ಮುಂದಿನ ಹಂತಗಳಲ್ಲಿ ನಗರದ ವ್ಯಾಪ್ತಿ ಹೆಚ್ಚುವಂತೆ ಹೊಸ ಮಾರ್ಗಗಳನ್ನು ಸೇರಿಸಲಾಗುತ್ತಿದೆ. ಇದರಿಂದ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಸಾಮಾನ್ಯ ನಾಗರಿಕರು ಸುಲಭವಾಗಿ ಸಂಚಾರ ಮಾಡಲು ಸಾಧ್ಯವಾಗಿದೆ.

ಒಂದೇ ದಿನ 3 ಕೋಟಿ ಆದಾಯ ;

ಇದೀಗ ಹೊಸ ವರ್ಷಾಚರಣೆ ದಿನ (2026) ‘ನಮ್ಮ ಮೆಟ್ರೋ’  ಭರ್ಜರಿ ಕಲೆಕ್ಷನ್ ಮಾಡಿದ್ದು, ಒಂದೇ ದಿನ 3 ಕೋಟಿ ಆದಾಯ ಗಳಿಸಿದೆ ಎಂಬ ಮಾಹಿತಿ ವರದಿಯಾಗಿದೆ. ಹೌದು… ನಿನ್ನೆ ಒಂದೇ ದಿನ ಸಾವಿರಕ್ಕಿಂತಲೂ ಹೆಚ್ಚು ಮಂದಿ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದು, ಒಂದೇ ದಿನ 3 ಕೋಟಿ 8 ಲಕ್ಷ ಆದಾಯ ಗಳಿಸಿದೆ ಎಂದು ಹೇಳಲಾಗಿದೆ. ಅತೀ ವೇಗದ ಹಾಗೂ ಸಮಯ ಉಳಿಕೆಗೆ ಸಹಾಯ ಮಾಡುವ ಈ ಸಾರಿಯಲ್ಲಿ ಹೆಚ್ಚು ಜನರು ಅವಲಂಬಿತರಾಗಿದ್ದಾರೆ. ಹಾಗಾಗಿ, ಹೊಸ ವರ್ಷಾಚರಣೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂಬುವುದು ವರದಿಯಾಗಿದೆ.

ಈ ಸಲುವಾಗಿ ಮೆಟ್ರೋ ಕಡೆಯಿಂದ ಹೊಸ ವರ್ಷದ ಶುಭಾಶಯ ಕೋರಲಾಗಿದ್ದು, ಹೊಸ ವರ್ಷಾಚರಣೆ ಪ್ರಯುಕ್ತ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ರೈಲು ಸೇವೆ ಅವಧಿಯನ್ನು ವಿಸ್ತರಣೆ ಮಾಡಿತ್ತು. ಪ್ರತಿ 8 ನಿಮಿಷಕ್ಕೊಂದು ರೈಲು ಬಿಡಲಾಗಿತ್ತು. ಅಲ್ಲದೇ ಮೆಟ್ರೋ ತನ್ನ ಪ್ರಯಾಣಿಕರಿಗೆ ಧನ್ಯವಾದವನ್ನೂ ತಿಳಿಸಿದೆ ಎಂದು ಬಿಎಂಆರ್ ಸಿಎಲ್ ಹೇಳಿಕೆ ನೀಡಿದೆ.

More than a thousand passengers travel on the metro in a single day! – ತುಳು ಟೈಮ್ಸ್

ಇದನ್ನೂ ಓದಿ :ವಾವ್.. ದಕ್ಷಿಣ ಕನ್ನಡ ಜನರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್‌ !

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=Id8I47Jb32eujgtm

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page