ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಿಂತಲ್ಲಿ ನಿಲ್ಲೋಕಾಗ್ದೇ ಕೂತಲ್ಲಿ ಕೂರೋಕಾಗ್ದೇ ನಡುರೋಡಲ್ಲಿ ತೂರಾಡಿದ ಯುವಕ ಯುವತಿಯರು

ಬೆಂಗಳೂರು : Tulu Times | ರಾಜ್ಯಾದ್ಯಂತ ಸಂಭ್ರಮಾಚರಣೆ ಹೆಚ್ಚಾಗಿತ್ತು. ಜಿಲ್ಲೆ ಜಿಲ್ಲೆಯಲ್ಲಿಯೂ ವರ್ಷ ಕಳೆದಂತೆ‌ ಜನರ ಸಂಭ್ರಮವೂ ಹೆಚ್ಚಾಗ್ತಾ ಇದೆ. ಇವತ್ತು ಮಧ್ಯರಾತ್ರಿ ಡಿ.ಜೆ ಸೌಂಡ್ ಗೆ ಯುವಕ‌ ಯುವತಿಯರು ಕುಣಿಯುತ್ತಾ, ಮದ್ಯ ಸೇವನೆ ಮಾಡ್ತಾ ತಮ್ಮದೇ ಲೋಕದಲ್ಲಿ ಕಾಲ ಕಳೆದಿರುತ್ತಾರೆ. ಅಲ್ಲದೇ ಅರಮನೆ ನಗರಿ ಮೈಸೂರಿನಲ್ಲೂ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಲಾಗಿತ್ತು.

ಇನ್ನು ಬೆಂಗಳೂರಿನಲ್ಲಿ ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಬಿದ್ದ ಯುವಕ ಯುವತಿಯರ ವಿಡಿಯೋ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕಿರಿಕ್ ಮಾಡಿದ ಪುಂಡರಿಗೆ ಪೋಲಿಸರಿಂದ ಲಾಠಿ ಚಾರ್ಜ್ ಕೂಡಾ ಆಗಿರುತ್ತದೆ. ಎಂ.ಜಿ ರೋಡ್, ಬ್ರಿಗೇಡ್ ರಸ್ತೆಯಲ್ಲಿ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಇನ್ನು ಈ ಹೊಸವರ್ಷಕ್ಕೆ ಸ್ವಾಗತ ಮಾಡುವ ಭರದಲ್ಲಿ‌ ಬೆಂಗಳೂರಿನಲ್ಲಿ ಸಾಲು ಸಾಲು ಅವಾಂತರಗಳು ನಡೆದಿರುವುದು ಕಂಡುಬಂದಿದೆ. ಪಬ್, ಕ್ಲಬ್ ಗಳಲ್ಲಿ ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ತೂರಾಡಿಕೊಂಡು ಹೋಗುತ್ತಿರುವ ಯುವಕ ಯುವತಿಯರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗ್ತಾ ಇದೆ.

ಯಾಕೆ ಬೇಕಿತ್ತು ಹೊಸ ವರ್ಷಕ್ಕೆ ಇಷ್ಟೊಂದು ನಶೆ ?

ಇನ್ನು ಕೆಲ ಯುವಕರು, ಯುವತಿಯರ ತಂಟೆಗೆ ಹೋಗಿ ಪೋಲಿಸರ ಕೈಯಿಂದ ಲಾಠಿ ರುಚಿಯನ್ನು ಕಂಡಿರುತ್ತಾರೆ. ಆದರೆ ಈ ಸಮಯ ಪೋಲಿಸರ ಸಮಯಪ್ರಜ್ಞೆ, ಕರ್ತವ್ಯ ಮಾತ್ರ ಮೆಚ್ಚುವಂತದ್ದು. ಜೊತೆಗೆ, ಪೋಲಿಸರು ರಸ್ತೆಯಲ್ಲಿ ಪಟಾಕಿ ಸಿಡಿಸಿದವನಿಗೂ ಲಾಠಿ ಚಾರ್ಜ್ ಮಾಡಿರುತ್ತಾರೆ.
ನಿಂತಲ್ಲಿ ಸರಿಯಾಗಿ ನಿಲ್ಲೋದಕ್ಕೆ ಆಗದೆ, ಕೂತಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ಆಗದೆ ಯಾಕೆ ಬೇಕಿತ್ತು ಹೊಸ ವರ್ಷಕ್ಕೆ ಇಷ್ಟೊಂದು ನಶೆ ಎಂಬುದಾಗಿ ನೋಡುಗರು ಹೇಳುತ್ತಾರೆ. ಕೋರಮಂಗಲದಲ್ಲಿ ಯುವತಿಯೊಬ್ಬಳು ಫುಲ್ ಟೈಟ್ ಆಗಿ ನಡೆಯೋದಕ್ಕೂ ಆಗದೆ ಪೋಲಿಸರೇ ಸ್ವತಃ ಈಕೆಯನ್ನು ಆಟೋಕ್ಕೆ ಹತ್ತಿ ಕಳುಹಿಸಿದ್ದಾರೆ.

ಇನ್ನು ಹಲವು ಕಡೆ ನಶೆಯಲ್ಲಿ ನಡೆಯಲೂ ಆಗದೆ ತೂರಾಡುತ್ತಿದ್ದ ಯುವತಿಯರನ್ನು ಅವರ ಬಾಯ್ ಫ್ರೆಂಡ್ ಗಳು ಕರೆದೊಯ್ಯುತ್ತಿದ್ದ ವೀಡಿಯೋಗಳು ಸಹ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸ್ನೇಹಿತರ ಜೊತೆ ಪಾರ್ಟಿಗೆ ಅಂತ ಬಂದಿರುವ ಯುವಕ ಯುವತಿಯರು ಹೇಗೇಗೋ ವರ್ತಿಸಿಕೊಂಡು ಎಲ್ಲೆಲ್ಲೋ ಬಿದ್ದುಕೊಂಡು ಇದ್ದವರನ್ನು ಸ್ನೇಹಿತರೇ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಕುಡಿದ ಮತ್ತಿನಲ್ಲಿ ಗೆಳೆಯನ ಮೇಲೆ ಹಲ್ಲೆ ಮಾಡಿದ ಯುವತಿ, ಪೋಲಿಸರ ಮುಂದೆಯೇ ಈ ರೀತಿ ಹೊಡೆದಿರುವುದು ಕಂಡು ಬಂದಿದೆ. ಇನ್ನು ಪಾರ್ಟಿ ಮುಗಿಸಿ ಬಂದವರು ದಾರಿಯುದ್ದಕ್ಕೂ ಮದ್ಯ ಸೇವಿಸುತ್ತಾ , ತೂರಾಡಿಕೊಂಡೇ ತೆರಳಿರುತ್ತಾರೆ. ಫುಟ್ಪಾತ್, ರಸ್ತೆ ಹೀಗೇ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆದಿದ್ದ ದೃಶ್ಯ ಕಂಡುಬಂದಿದೆ. ಈ ಕಾರಣ ಜನರ ನಿಯಂತ್ರಣಕ್ಕೆ ಕುದ್ದು ಪೊಲೀಸ್ ಕಮಿಷನರ್ ರಸ್ತೆಗೆ ಇಳಿದಿದ್ದರು. ಇಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಎಲ್ಲಾ ಕಡೆ ಬಂದೋಬಸ್ತ್ ಮಾಡಿದ್ದರು. ಲಕ್ಷಲಕ್ಷ ಜನ ಸೇರಿದ್ರೂ ಈ ಬಾರಿ ಬ್ಯಾರಿಕೇಟ್ ಹಾಕಿ ಜನರ ನಿರ್ವಹಣೆ ಮಾಡಲಾಗಿದೆ ಎಂದು ವರದಿಯಾಗಿದೆ.

Young men and women were wandering in the middle of the road, unable to stand or sit. – ತುಳು ಟೈಮ್ಸ್

ಇದನ್ನೂ ಓದಿ :ಕಾಂಗ್ರೆಸ್ ಸರಕಾರ ಟೋಪಿ ಸರಕಾರ: ಆರ್. ಅಶೋಕ್

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=Id8I47Jb32eujgtm

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page