ಕರ್ನಾಟಕ: Tulu Times | ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಗ್ರಾಮಸ್ಥರ ಗುಂಪೊಂದು ದಂಪತಿಯನ್ನು ಆಯುಧಗಳಿಂದ ಹೊಡೆದು ಜೀವಂತವಾಗಿ ಸುಟ್ಟುಹಾಕಿರುವ ಘಟನೆ ನಡೆದಿದೆ.
ಕಾರಣ ಕೇಳಿದರೆ ಶಾಕ್ ಆಗ್ತಿರಾ..!
ಅಸ್ಸಾಂನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ದಂಪತಿಗಳಿಬ್ಬರು ಮಾಟಮಂತ್ರ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಹೀಗಾಗಿ, ಅವರನ್ನು ಸುಟ್ಟು ಹಾಕಲಾಗಿದೆ. ಮೃತರನ್ನು ಗಾರ್ಡಿ ಬಿರೋವಾ (43) ಮತ್ತು ಅವರ ಪತ್ನಿ ಮೀರಾ ಬಿರೋವಾ (33) ಎಂದು ಗುರುತಿಸಲಾಗಿದ್ದು, ಇದೊಂದು ಅಮಾನವೀಯ ಘಟನೆಯಾಗಿದೆ. ಮಂಗಳವಾರ ಸಂಜೆ ಈ ಭೀಕರ ಘಟನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪರಾಜ್ ಸಿಂಗ್, ರಾತ್ರಿ 9 ಗಂಟೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. “ಈ ಕೃತ್ಯ ಎಸಗಲು ಬಹುತೇಕ ಇಡೀ ಗ್ರಾಮದ ಜನರು ಒಗ್ಗೂಡಿದ್ದರು. ಹೀಗಾಗಿ ಅವರು ಯಾರೂ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ನಮ್ಮ ಆರಂಭಿಕ ತನಿಖೆಯ ಪ್ರಕಾರ, ಪತಿ ಮತ್ತು ಪತ್ನಿಯನ್ನು ಮೊದಲು ಥಳಿಸಿ ನಂತರ ಬೆಂಕಿ ಹಚ್ಚಲಾಯಿತು. ಅವರ ಮೂಳೆಗಳನ್ನು ಸಹ ನಮಗೆ ಪಡೆಯಲು ಸಾಧ್ಯವಾಗಲಿಲ್ಲ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸರಕಾರ ಟೋಪಿ ಸರಕಾರ: ಆರ್. ಅಶೋಕ್
ಸೊಳ್ಳೆ ಕಾಯಿಲ್ ಬಳಸುವ ಮುನ್ನ ಎಚ್ಚರಿಕೆ!
ಪ್ರತ್ಯೇಕ ಪ್ರಕರಣದಲ್ಲಿ, ಸೊಳ್ಳೆಗಳು ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯಕಾರಿ ಅಂಶ ಹಾಗೂ ಡೆಂಗ್ಯೂ ಮಲೇರಿಯಾ ಚಿಕನ್‌ಗುನ್ಯಾ ಮುಂತಾದ ರೋಗಗಳನ್ನು ಹರಡುವಲ್ಲಿ ಸೊಳ್ಳೆಗಳ ಪಾತ್ರ ಬಹಳ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸಾಮಾನ್ಯವಾಗಿ ಬಳಸುವ ಸಾಧನವೇ ಸೊಳ್ಳೆ ಕಾಯಿಲ್.
ಇತ್ತೀಚೆಗೆ ಜನ ಸೊಳ್ಳೆ ಕಾಯಿಲ್ ನ್ನು ಹೆಚ್ಚಾಗಿ ಉಪಯೋಗಿಸೋದಕ್ಕೆ ಮುಖ್ಯ ಕಾರಣ ಇದಕ್ಕೆ ವಿದ್ಯುತ್ ಅವಶ್ಯಕತೆ ಇಲ್ಲ. ಬಳಸಲು ಸುಲಭ. ದೀರ್ಘಕಾಲ ಹೊಗೆ ಬಿಡುತ್ತದೆ. ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಇತ್ಯಾದಿ. ಇವೆಲ್ಲಾ ಒಂದೆಡೆಯಾದ್ರೆ, ಇನ್ನೊಂದಡೆ ಸೊಳ್ಳೆ ಕಾಯಿಲ್. ಉಪಯೋಗದಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಇನ್ನು ಈ ಹೊಗೆಯನ್ನು ದೀರ್ಘಕಾಲ ಉಸಿರಾಡಿದರೆ ಉಸಿರಾಟದ ತೊಂದರೆ, ಮಕ್ಕಳಿಗೆ ಮತ್ತು ವೃದ್ಧರಿಗೆ ಹಾನಿಕಾರಕ, ಕಣ್ಣುಗಳಲ್ಲಿ ಉರಿ, ತಲೆನೋವು ಉಂಟಾಗುವ ಸಾಧ್ಯತೆ ಅಲ್ಲದೇ, ಮುಚ್ಚಿದ ಕೋಣೆಯಲ್ಲಿ ಬಳಸಿದರೆ ಅಪಾಯ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ, ಸೊಳ್ಳೆ ಕಾಯಿಲ್ ಬಳಸುವಾಗ ಕೆಲವೊಂದು ಎಚ್ಚರಿಕೆಗಳನ್ನು ಬಳಸಬೇಕಾಗುತ್ತದೆ. ಉದಾಹರಣೆಗೆ, ಕೋಣೆಗೆ ಸರಿಯಾದ ಗಾಳಿಚಲನೆ ಇರಬೇಕು, ಮಕ್ಕಳಿಂದ ದೂರ ಇಡಿ, ಮಲಗುವ ಸ್ಥಳದ ಹತ್ತಿರ ನೇರವಾಗಿ ಇಡಬೇಡಿ, ಸಾಧ್ಯವಾದರೆ ಪರ್ಯಾಯ ವಿಧಾನಗಳನ್ನು ಬಳಸಿ.
ಪರ್ಯಾಯ ಸೊಳ್ಳೆ ನಿಯಂತ್ರಣ ವಿಧಾನಗಳು!
ಸೊಳ್ಳೆ ಕಾಯಿಲ್ ಬದಲಾಗಿ, ಮಸ್ಕಿಟೋ ನೆಟ್ ಬಳಕೆ ಮಾಡಿದರೆ ಉತ್ತಮ. ದ್ರವ ಸೊಳ್ಳೆ ನಿವಾರಕ ಯಂತ್ರಗಳು, ನೈಸರ್ಗಿಕ ತೈಲಗಳು (ನೀಮ್, ಲೆಮನ್ ಗ್ರಾಸ್), ಪರಿಸರ ಸ್ವಚ್ಛತೆ ಮತ್ತು ನೀರು ನಿಲ್ಲದಂತೆ ನೋಡಿಕೊಳ್ಳುವುದು ಇತ್ಯಾದಿಗಳಾಗಿವೆ. ಒಟ್ಟಿನಲ್ಲಿ ಮನೆಗಳಲ್ಲಿ ಸೊಳ್ಳೆ ಕಾಯಿಲ್ ಅಜಾಗರೂಕತೆಯಿಂದ ಬಳಸುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲವರು ಸೊಳ್ಳೆ ಕಾಯಿಲ್ ಹತ್ತಿಸಿ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಮಲಗುತ್ತಾರೆ. ಇದು ಹೊರಸೂಸುವ ಅಪಾಯಕಾರಿ ರಾಸಾಯನಿಕಗಳು ಕೋಣೆಯಲ್ಲಿ ಹರಡಲು ಕಾರಣವಾಗಬಹುದು ಮತ್ತು ಅದೇ ಗಾಳಿಯನ್ನು ಉಸಿರಾಡುವುದರಿಂದ ಸಾವು ಸಂಭವಿಸಬಹುದು. ಆಕಸ್ಮಿಕ ಬೆಂಕಿಯೂ ಸಂಭವಿಸುತ್ತದೆ ಹಾಗಾಗಿ ಎಚ್ಚರ ವಹಿಸಿ,
Villagers burn husband and wife alive…you’ll be shocked to hear the reason!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











