ಶಿಕ್ಷಣ : Tulu Times | ಡಿಜಿಟಲ್ ತಂತ್ರಜ್ಞಾನಗಳಿಲ್ಲದೆ ಜೀವನವೇ ಇಲ್ಲ ಎನ್ನುವ ಪರಿಸ್ಥಿತಿ ನಮ್ಮದು. ಪ್ರತಿಯೊಂದಕ್ಕೂ ಡಿಜಿಟಲ್ ನ್ನೇ ಅವಲಂಬಿಸಿರುವ ಜನರು ಇದೀಗ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಈ ಹಾದಿಯಲ್ಲೇ ಹೊಸ ಹೆಜ್ಜೆ ಇಟ್ಟಿದೆ. ಹೌದು… ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಆಯಾಮವನ್ನು ಪಡೆದುಕೊಂಡಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಸ್ಥಿರಗೊಳಿಸಲು ಮತ್ತು ತಂತ್ರಜ್ಞಾನದ ಮೂಲಕ ಕಲಿಕೆಯನ್ನು ಉತ್ತೇಜಿಸಲು ಪಿಎಂ ಇ-ವಿದ್ಯಾ ಎಂಬ ನವೀನ ಉಪಕ್ರಮವನ್ನು ಜಾರಿಗೆ ತಂದಿದೆ. ಇದು ಶಾಲಾ ಮಟ್ಟದಲ್ಲಿ ಕಲಿಕೆ ಮತ್ತು ಬೋಧನೆಯನ್ನು ಸುಲಭಗೊಳಿಸಲು ಡಿಜಿಟಲ್, ಆನ್‌ಲೈನ್ ಮತ್ತು ರೇಡಿಯೋ ಮಾಧ್ಯಮಗಳನ್ನು ಒಳಗೊಂಡ ಒಂದು ವಿಶಿಷ್ಟ ವೇದಿಕೆಯಾಗಿದೆ.
‘ಒಂದು ರಾಷ್ಟ್ರ, ಒಂದು ಡಿಜಿಟಲ್ ಪ್ಲಾಟ್‌ಫಾರ್ಮ್’
ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಇ-ವಿದ್ಯಾ ಯೋಜನೆಯು ‘ಒಂದು ರಾಷ್ಟ್ರ, ಒಂದು ಡಿಜಿಟಲ್ ಪ್ಲಾಟ್‌ಫಾರ್ಮ್’ ಎಂಬ ಉದ್ದೇಶದೊಂದಿಗೆ ದೇಶದ ಎಲ್ಲಾ ಡಿಜಿಟಲ್ ಶಿಕ್ಷಣ ವೇದಿಕೆಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಈ ಯೋಜನೆಯು ನಗರ ಪ್ರದೇಶಗಳಿಂದ ಹಿಡಿದು ದೂರದ ಹಳ್ಳಿಗಳವರೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ತಲುಪುವುದನ್ನು ಖಚಿತಪಡಿಸುತ್ತದೆ. ಇದಕ್ಕಾಗಿ ಇಂಟರ್ನೆಟ್ ಸೌಲಭ್ಯವಿರುವವರಿಗೆ ಆನ್‌ಲೈನ್ ಪೋರ್ಟಲ್‌ಗಳು ಮತ್ತು ಮೊಬೈಲ್ ಆ್ಯಪ್‌ಗಳ ಮೂಲಕ ಹಾಗೂ ಇಂಟರ್ನೆಟ್ ಇಲ್ಲದವರಿಗೆ 200ಕ್ಕೂ ಹೆಚ್ಚು ಮೀಸಲಾದ ಡಿಜಿಟಲ್ ಟಿವಿ ಚಾನಲ್‌ಗಳು ಮತ್ತು ರೇಡಿಯೋ ಮಾಧ್ಯಮಗಳ ಮೂಲಕ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಸಮಗ್ರ ಶಿಕ್ಷಣವನ್ನು ಗುರಿಯಾಗಿಟ್ಟುಕೊಂಡಿರುವ ಈ ಉಪಕ್ರಮವು ಪಠ್ಯಪುಸ್ತಕಗಳ ಕ್ಯೂಆರ್ ಕೋಡ್‌ಗಳಿಂದ ಹಿಡಿದು ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದ ಸಂಕೇತ ಭಾಷೆಯ ವಿಷಯಗಳವರೆಗೆ ಎಲ್ಲವನ್ನೂ ಒಳಗೊಂಡಿದ್ದು, ಯಾವುದೇ ಅಡೆತಡೆಯಿಲ್ಲದೆ ಎಲ್ಲರಿಗೂ ಸಮಾನವಾಗಿ ಶಿಕ್ಷಣ ಲಭ್ಯವಾಗುವಂತೆ ಮಾಡುತ್ತದೆ ಎಂದು ಹೇಳಲಾಗಿದೆ.
‘ಒಂದು ತರಗತಿ, ಒಂದು ಚಾನಲ್’ ಉಪಕ್ರಮದಡಿ ಮೊದಲು 12 ಚಾನಲ್‌ಗಳಿದ್ದವು, ಈಗ ಅವುಗಳನ್ನು 200 ಚಾನಲ್‌ಗಳಿಗೆ ವಿಸ್ತರಿಸಲಾಗಿದೆ. ಇದು 1 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡುತ್ತದೆ ಹಾಗೂ 9 ರಿಂದ 12ನೇ ತರಗತಿ ಮತ್ತು ಉನ್ನತ ಶಿಕ್ಷಣಕ್ಕಾಗಿ ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ಇಲ್ಲಿ ಪಡೆಯಬಹುದಾಗಿದೆ.ದೃಷ್ಟಿಹೀನರಿಗಾಗಿ ಆಡಿಯೋ ಪುಸ್ತಕಗಳು ಮತ್ತು ಶ್ರವಣದೋಷವುಳ್ಳವರಿಗಾಗಿ ಭಾರತೀಯ ಸಂಕೇತ ಭಾಷೆಯಲ್ಲಿ ವಿಶೇಷ ಪಠ್ಯಕ್ರಮ ಲಭ್ಯವಿದೆ. ವಿಜ್ಞಾನ ಮತ್ತು ಗಣಿತಕ್ಕಾಗಿ 750 ವರ್ಚುವಲ್ ಲ್ಯಾಬ್‌ಗಳು ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು 75 ಕೌಶಲ್ಯ ಇ-ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ.
One classroom, one channel: ‘Education’ towards the digital age – ತುಳು ಟೈಮ್ಸ್
ಇದನ್ನೂ ಓದಿ :ಸೊಳ್ಳೆ ಕಾಯಿಲ್ ಉಪಯೋಗಿಸುವ ಮುನ್ನ ಎಚ್ಚರ : ಇದಕ್ಕೆ ಪರ್ಯಾಯ ಮಾರ್ಗ ಇಲ್ಲಿವೆ !
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=xC7Gn2poEks_yXdS











