ಬ್ರೇಕಿಂಗ್ ನ್ಯೂಸ್
ಕರಾವಳಿಬಂಟ್ವಾಳ

Bantwal: ತಲೆಮರೆಸಿಕೊಂಡಿದ್ದ ಮೋಸ್ಟ್‌ ವಾಟೆಂಡ್‌ ಆರೋಪಿಯ ಬಂಧನ

Bantwal: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಯಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಉಮ್ಮರ್ ಫಾರೂಕ್‌ನನ್ನು ಬಂಟ್ವಾಳ ತಾಲೂಕು ಪೊಲೀಸರು ಬಂಧಿಸಿದ್ದಾರೆ.

ಸಜಿಪ ಮೂಡ ಗ್ರಾಮದ ನಿವಾಸಿ ಫಾರೂಕ್ @ ಉಮ್ಮರ್ ಫಾರೂಕ್ (32) ಬಂಧಿತ ಆರೋಪಿ. ಅ.15 ರಂದು ಬಂಟ್ವಾಳ ತಾಲೂಕಿನ ಮದ್ವ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಈತನ ಮೇಲೆ ಕಡಬ ಪೊಲೀಸ್ ಠಾಣಾ ಅ.ಕ್ರ 43/2020, 44/2020, 45/2020, 46/2020 ಕಲಂಃ 457,380 IPC, ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ ನಂ:38/20 ಕಲಂ: 457,380 IPC ,39/2020 ಕಲಂಃ 380,201, 34 IPC , 48/2012 ಕಲಂಃ 379, 201, 34 IPC, 119/2020 ಕಲಂಃ 457,380 IPC , ಮತ್ತು ವಿಟ್ಲ, ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ, ಕೋಣಾಜೆ, ಬರ್ಕೆ, ಬಜಪೆ ಪೊಲೀಸ್ ಠಾಣೆಗಳಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಪೊಲೀಸರು ಈತನನ್ನು ಬಂಧಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: Mangaluru: ಖ್ಯಾತ ಯಕ್ಷಗಾನ ಭಾಗವತ ದಿನೇಶ್‌ ಅಮ್ಮಣ್ಣಾಯ ಅಸ್ತಂಗತ 

===============================

ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 32

You cannot copy content of this page