ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸೊಳ್ಳೆ ಕಾಯಿಲ್ ಉಪಯೋಗಿಸುವ ಮುನ್ನ ಎಚ್ಚರ : ಇದಕ್ಕೆ ಪರ್ಯಾಯ ಮಾರ್ಗ ಇಲ್ಲಿವೆ !

ಸೊಳ್ಳೆ ಕಾಯಿಲ್ : Tulu Times | ಸೊಳ್ಳೆಗಳು ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯಕಾರಿ ಅಂಶ ಹಾಗೂ ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾ ಮುಂತಾದ ರೋಗಗಳನ್ನು ಹರಡುವಲ್ಲಿ ಸೊಳ್ಳೆಗಳ ಪಾತ್ರ ಬಹಳ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸಾಮಾನ್ಯವಾಗಿ ಬಳಸುವ ಸಾಧನವೇ ಸೊಳ್ಳೆ ಕಾಯಿಲ್.

ಇತ್ತೀಚೆಗೆ ಜನ ಸೊಳ್ಳೆ ಕಾಯಿಲ್ ನ್ನು ಹೆಚ್ಚಾಗಿ ಉಪಯೋಗಿಸೋದಕ್ಕೆ ಮುಖ್ಯ ಕಾರಣ ಇದಕ್ಕೆ ವಿದ್ಯುತ್ ಅವಶ್ಯಕತೆ ಇಲ್ಲ, ಬಳಸಲು ಸುಲಭ, ದೀರ್ಘಕಾಲ ಹೊಗೆ ಬಿಡುತ್ತದೆ, ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಇತ್ಯಾದಿ. ಇವೆಲ್ಲಾ ಒಂದೆಡೆಯಾದ್ರೆ, ಇನ್ನೊಂದೆಡೆ ಸೊಳ್ಳೆ ಕಾಯಿಲ್ ಉಪಯೋಗದಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಇನ್ನು ಈ ಹೊಗೆಯನ್ನು ದೀರ್ಘಕಾಲ ಉಸಿರಾಡಿದರೆ ಉಸಿರಾಟದ ತೊಂದರೆ, ಮಕ್ಕಳಿಗೆ ಮತ್ತು ವೃದ್ಧರಿಗೆ ಹಾನಿಕಾರಕ, ಕಣ್ಣುಗಳಲ್ಲಿ ಉರಿ, ತಲೆನೋವು ಉಂಟಾಗುವ ಸಾಧ್ಯತೆ ಅಲ್ಲದೇ,‌ ಮುಚ್ಚಿದ ಕೋಣೆಯಲ್ಲಿ ಬಳಸಿದರೆ ಅಪಾಯ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ, ಸೊಳ್ಳೆ ಕಾಯಿಲ್ ಬಳಸುವಾಗ ಕೆಲವೊಂದು ಎಚ್ಚರಿಕೆಗಳನ್ನು ಬಳಸಬೇಕಾಗುತ್ತದೆ. ಉದಾಹರಣೆಗೆ, ಕೋಣೆಗೆ ಸರಿಯಾದ ಗಾಳಿಚಲನೆ ಇರಬೇಕು, ಮಕ್ಕಳಿಂದ ದೂರ ಇಡಿ, ಮಲಗುವ ಸ್ಥಳದ ಹತ್ತಿರ ನೇರವಾಗಿ ಇಡಬೇಡಿ, ಸಾಧ್ಯವಾದರೆ ಪರ್ಯಾಯ ವಿಧಾನಗಳನ್ನು ಬಳಸಿ.

ಪರ್ಯಾಯ ಸೊಳ್ಳೆ ನಿಯಂತ್ರಣ ವಿಧಾನಗಳು ;
ಸೊಳ್ಳೆ ಕಾಯಿಲ್ ಬದಲಾಗಿ, ಮಸ್ಕಿಟೋ ನೆಟ್ ಬಳಕೆ ಮಾಡಿದರೆ ಉತ್ತಮ. ದ್ರವ ಸೊಳ್ಳೆ ನಿವಾರಕ ಯಂತ್ರಗಳು, ನೈಸರ್ಗಿಕ ತೈಲಗಳು (ನೀಮ್, ಲೆಮನ್ ಗ್ರಾಸ್),‌ ಪರಿಸರ ಸ್ವಚ್ಛತೆ ಮತ್ತು ನೀರು ನಿಲ್ಲದಂತೆ ನೋಡಿಕೊಳ್ಳುವುದು ಇತ್ಯಾದಿಗಳಾಗಿವೆ. ಒಟ್ಟಿನಲ್ಲಿ, ಮನೆಗಳಲ್ಲಿ ಸೊಳ್ಳೆ ಕಾಯಿಲ್ ಅಜಾಗರೂಕತೆಯಿಂದ ಬಳಸುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲವರು ಸೊಳ್ಳೆ ಕಾಯಿಲ್ ಹತ್ತಿಸಿ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಮಲಗುತ್ತಾರೆ. ಇದು ಹೊರಸೂಸುವ ಅಪಾಯಕಾರಿ ರಾಸಾಯನಿಕಗಳು ಕೋಣೆಯಲ್ಲಿ ಹರಡಲು ಕಾರಣವಾಗಬಹುದು ಮತ್ತು ಅದೇ ಗಾಳಿಯನ್ನು ಉಸಿರಾಡುವುದರಿಂದ ಸಾವು ಸಂಭವಿಸಬಹುದು. ಆಕಸ್ಮಿಕ ಬೆಂಕಿಯೂ ಸಂಭವಿಸುತ್ತದೆ ಹಾಗಾಗಿ ಎಚ್ಚರ ವಹಿಸಿ.

Be careful before using mosquito coils: Here are alternatives! – ತುಳು ಟೈಮ್ಸ್

ಇದನ್ನೂ ಓದಿ :ರಿಷಭ್‌ ಶೆಟ್ಟಿ ಫ್ಯಾಮಿಲಿ ಜೊತೆ ಗೋವಾ ಟ್ರಿಪ್..! ನ್ಯೂ ಈಯರ್‌ ಗೆ ಹೆಂಡ್ತಿಗೆ ಕೊಟ್ಟ ಗಿಫ್ಟ್‌ ಏನು ಗೊತ್ತಾ..?

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=xC7Gn2poEks_yXdS

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page