ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಆಹಾರ ವ್ಯಾಪಾರ ಸಂಸ್ಥೆಗಳಿಗೆ 2026, ಜನವರಿ 01 ರಿಂದ ಹೊಸ ನಿಯಮ‌ ಜಾರಿ

ಆಹಾರ : Tulu Times | ಆಹಾರವು ಮಾನವನ ಜೀವನಕ್ಕೆ ಅತ್ಯಂತ ಅಗತ್ಯವಾದ ಅಂಶ. ಆದರೆ ನಾವು ಸೇವಿಸುವ ಆಹಾರ ಸುರಕ್ಷಿತವಾಗಿದ್ದರೆ ಮಾತ್ರ ಅದು ಆರೋಗ್ಯಕ್ಕೆ ಲಾಭಕರವಾಗುತ್ತದೆ. ಅಶುದ್ಧ, ಕಲಬೆರಕೆ ಅಥವಾ ರಾಸಾಯನಿಕಗಳಿಂದ ದೂಷಿತವಾದ ಆಹಾರ ಹಲವು ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಆಹಾರ ಸುರಕ್ಷತೆ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಮುಖ್ಯ ವಿಷಯವಾಗಿದೆ.

ಹೌದು…. 2026 ಆರಂಭವಾಗುತ್ತಿದ್ದಂತೆ ದೇಶದಲ್ಲಿ ಹೊಸ ಆಹಾರ ಸುರಕ್ಷತಾ ನಿಯಮಗಳು ಜಾರಿಗೆ ಬರುತ್ತಿವೆ. ಜನವರಿ 1, 2026 ರಿಂದ, ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆಹಾರ ಉತ್ಪನ್ನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ, ವಿಜ್ಞಾನ-ಆಧಾರಿತ ಪರಿಶೀಲನೆಗಳನ್ನು ಜಾರಿಗೆ ತರುತ್ತಿದೆ. ಆಹಾರ ಉತ್ಪನ್ನಗಳಲ್ಲಿ ಭಾರತೀಯರ ಆಹಾರ ಪದ್ಧತಿ ಮತ್ತು ಸೇವಿಸುವ ಪ್ರಮಾಣಕ್ಕೆ ಅನುಗುಣವಾಗಿ ಮಿಶ್ರಣವಾಗಿರುವ ಪದಾರ್ಥಗಳು ಹೊಂದಿಕೆಯಾಗಿದ್ದು, ಸುರಕ್ಷಿತವೇ ಎಂಬುದನ್ನು ಸಂಪೂರ್ಣ ದತ್ತಾಂಶದೊಂದಿಗೆ ಸಾಬೀತುಪಡಿಸಬೇಕು.

ವೈಜ್ಞಾನಿಕ ಸಂಶೋಧನೆಗಳ ದತ್ತಾಂಶ ಕಡ್ಡಾಯ ;

ಹೊಸ ನಿಯಮಗಳ ಅಡಿಯಲ್ಲಿ, ಆಹಾರ ವ್ಯಾಪಾರ ಸಂಸ್ಥೆಗಳು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಅಥವಾ ಮಾನದಂಡಗಳನ್ನು ಬದಲಾಯಿಸಲು ಸಂಪೂರ್ಣ ವೈಜ್ಞಾನಿಕ ಪುರಾವೆಗಳ ಪ್ಯಾಕೇಜ್ ಅನ್ನು ಸಲ್ಲಿಸಬೇಕು. ಇದರಲ್ಲಿ ಮುಖ್ಯವಾಗಿ ಇರಬೇಕಾದ ಅಂಶಗಳು ಯಾವುವು ಅಂದ್ರೆ,
ಉತ್ಪನ್ನದ ಪೌಷ್ಟಿಕಾಂಶದ ವಿವರಗಳು,‌ ಜನರು ಎಷ್ಟು ಪ್ರಮಾಣದಲ್ಲಿ ಅದನ್ನು ಸೇವಿಸುತ್ತಾರೆ ಎಂಬುದರ ಡೇಟಾ ವಿಷಕಾರಿ ಅಂಶಗಳಿರುವ ಬಗೆಗಿನ ಅಧ್ಯಯನಗಳ ಫಲಿತಾಂಶಗಳು, ಅಲರ್ಜಿ ಉಂಟುಮಾಡುವ ಸಾಧ್ಯತೆಗಳ ವಿವರಗಳು ಹಾಗೂ ಇತರ ಸಂಬಂಧಿತ ವೈಜ್ಞಾನಿಕ ಸಂಶೋಧನೆಗಳ ದತ್ತಾಂಶಗಳನ್ನು ಕಡ್ಡಾಯ ಮಾಡಲಾಗಿದೆ.

ಆಹಾರಸಂಸ್ಥೆ ಸಲ್ಲಿಸಿದ ಈ ಮಾಹಿತಿಯನ್ನು FSSAI ಯ ವಿಜ್ಞಾನ ಮತ್ತು ಮಾನದಂಡಗಳ ವಿಭಾಗವು ಪರಿಶೀಲಿಸುತ್ತದೆ. ಇದು ಆರೋಗ್ಯವನ್ನು ರಕ್ಷಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಭಾರತೀಯರ ಆಹಾರ ಪದ್ಧತಿ, ಸೇವಿಸುವ ಪ್ರಮಾಣ ಮತ್ತು ಸೂಕ್ಷ್ಮತೆಗಳು ಇತರ ದೇಶಗಳಿಗಿಂತ ಬಹಳ ಭಿನ್ನವಾಗಿರುವುದರಿಂದ, ದೀರ್ಘಕಾಲೀನ ಸುರಕ್ಷತೆಯ ಬಗ್ಗೆ ಸರಿಯಾದ ಪುರಾವೆಗಳನ್ನು ಕೇಳುವುದು ಹಾಗೂ ಆಹಾರ ನಿಯಮಗಳನ್ನು ಭಾರತೀಯ ಗ್ರಾಹಕರಿಗೆ ಹೆಚ್ಚು ಪ್ರಾಯೋಗಿಕ, ವಿಜ್ಞಾನ-ಆಧಾರಿತ ಮತ್ತು ಸುರಕ್ಷಿತವಾಗಿಸಲು ಸಹಾಯ ಮಾಡುತ್ತದೆ ಆಹಾರ ತಜ್ಞರು ತಿಳಿಸುತ್ತಾರೆ. ಹಾಗಾಗಿ, ಆಹಾರ ಸುರಕ್ಷತೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ನಾವು ಎಚ್ಚರಿಕೆಯಿಂದ ಆಹಾರ ಆಯ್ಕೆ ಮಾಡಿ, ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಆರೋಗ್ಯಕರ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಬಹುದು.

New rules for food business establishments to come into effect from January 1, 2026 – ತುಳು ಟೈಮ್ಸ್

ಇದನ್ನೂ ಓದಿ :ಮಡಿಕೇರಿ ಹನಿ ಟ್ರ್ಯಾಪ್ ಪ್ರಕರಣ: ಬಲೆಗೆ ಬಿದ್ದರೆ ಸಮಾಜದ ಗಣ್ಯರು ಯಾರು..?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=xC7Gn2poEks_yXdS

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page