ಬೆಂಗಳೂರು: Tulu Times | ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಹಾಗೂ ತಂಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಾ ಇದ್ದಾರೆ. ಇದೀಗ ರೇಣುಕಾಸ್ವಾಮಿ ತಾಯಿ ಮಹತ್ತ್ವದ ಹೇಳಿಕೆ ನೀಡಿ ಈ ಕೇಸ್ ಗೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.
ಇದನ್ನೂ ಓದಿ: ಮನೆ ಕೋರಿ ಕರ್ನಾಟಕದ ಅರ್ಜಿ ಸಲ್ಲಿಸಿದವರ ಗತಿ ಏನು?: ಶೋಭಾ ಕರಂದ್ಲಾಜೆ
ರೇಣುಕಾಸ್ವಾಮಿ ತಾಯಿ ಗೊಂದಲದ ಹೇಳಿಕೆ !
ಸೆಷನ್ಸ್ ಕೋರ್ಟ್‌ನಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ರೇಣುಕಾಸ್ವಾಮಿ ತಂದೆ-ತಾಯಿಯ ಸಾಕ್ಷಿಗಳನ್ನಾಗಿ ಪರಿಗಣಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ತಾಯಿ ರತ್ನಪ್ರಭಾ ಪ್ರಾಸಿಕ್ಯೂಷನ್ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ರತ್ನಪ್ರಭಾ,ಪ್ರಾಸಿಕ್ಯೂಷನ್ ವಿರುದ್ಧವೇ ಹೇಳಿಕೆ ಕೊಟ್ಟಿದ್ದಾರೆ. ಮಗನ ಮೊಬೈಲ್ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಮೊದಲು ತನಿಖಾಧಿಕಾರಿಗಳ ಎದುರು ಪುತ್ರನ ಮೊಬೈಲ್ ನಂಬರ್ ಗೊತ್ತು ಎಂದು ಹೇಳಿದ್ದರು. ಹತ್ಯೆ ದಿನ 2 ಬಾರಿ ಕರೆ ಮಾಡಿದ್ದಾಗಿ ಹೇಳಿದ್ದರು. ಆದರೆ, ಇದೀಗ ಮೊಬೈಲ್ ನಂಬರ್ ಗೊತ್ತಿಲ್ಲ, ಕರೆ ಮಾಡಿಲ್ಲ ಅಂತ ಹೇಳಿದ್ದಾರೆ. ಈ ಎಲ್ಲ ಹೇಳಿಕೆಗಳ ಆಧಾರದಲ್ಲಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಕೋರಲಾಗಿದೆ.
ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸುವವರು ಈ ಕಾನೂನನ್ನು ಪಾಲಿಸದಿದ್ರೆ ದಂಡ : ಹೊಸ ರೂಲ್ಸ್ ನಲ್ಲಿ ಏನೇನಿದೆ ?
ಇನ್ನು ಜೈಲಿನಲ್ಲಿರುವ ಪವಿತ್ರಾ ಗೌಡಗೆ, ಮನೆ ಊಟ ನೀಡಲು ಕೋರ್ಟ್ ಆದೇಶಿಸಿದೆ. ಆರೋಪಿಗಳಾದ ಪವಿತ್ರಾ ಗೌಡ, ಲಕ್ಷ್ಮಣ್, ದರ್ಶನ್ ಮ್ಯಾನೇಜರ್ ನಾಗರಾಜ್‌ಗೆ ಮನೆ ಊಟ ಕೊಡಲು ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ಆರೋಪಿಗಳ ಪರ ವಕೀಲರ ಮನವಿ ಮೇರೆಗೆ ಈ 3 ಆರೋಪಿಗಳಿಗೆ ಮನೆ ಊಟ ನೀಡಲು ಕೋರ್ಟ್ ಆದೇಶಿಸಿದೆ. ಜೈಲು ಅಧಿಕಾರಿಗಳು ತಮಗೆ ಸರಿಯಾದ ಆಹಾರ ನೀಡುತ್ತಿಲ್ಲ. ಅದರಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು 3 ಆರೋಪಿಗಳು ತಮ್ಮ ಪರ ವಕೀಲರ ಮೂಲಕ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಕೋರ್ಟ್, ಜೈಲಿನ ಕೈಪಿಡಿ ಪ್ರಕಾರ ಮನೆಯ ಆಹಾರ ಕೊಡಲು ಸೂಚಿಸಿದೆ. ಈ ಕೊಲೆ ಕೇಸ್ ಪ್ರತೀ ದಿನ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ.
Big twist in Chitradurga Renukaswamy murder case! What is it?- ತುಳುಟೈಮ್ಸ್
ಇದನ್ನೂ ಓದಿ: ಉತ್ತರ ಕರ್ನಾಟಕ ಸೊಗಡಿನ ಸೂರ್ಯ ಟ್ರೈಲರ್ ರಿಲೀಸ್ !











