ಉಡುಪಿ: Tulu Times | ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಕನ್ನಂಗಾರ್ ಗರೊಡಿ ಬಳಿ ಗೂಡ್ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ವಿಶ್ವ ಟ್ರಾಸ್ಪೋರ್ಟ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಂಜತೋಟ ಇಸ್ಮಾಯಿಲ್ ಎಂಬವರ ಮನೆಗೆ ಢಿಕ್ಕಿ ಹೊಡೆದಿದೆ. ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಮನೆಯ ಮಂದಿ ಕೋಣೆಯಲ್ಲಿದ್ದ ಕಾರಣ ಪವಾಡ ಸದೃಶ್ಯದಿಂದ ಪಾರಾಗಿದ್ದಾರೆ. ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ.
ಹೊಸ ವರ್ಷಕ್ಕೆ ಮೆಟ್ರೋದಲ್ಲಿ ರೂಲ್ಸ್ ಗಳೇನು..?
ಪ್ರತ್ಯೇಕ ಪ್ರಕರಣದಲ್ಲಿ, ಬೆಂಗಳೂರು ನಗರವು ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿ ಒಂದಾಗಿದ್ದು, ದಿನೇ ದಿನೇ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ ನಗರಕ್ಕೆ ಶಿಸ್ತುಬದ್ಧ ವೇಗವಾದ ಹಾಗೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿ ‘ನಮ್ಮ ಮೆಟ್ರೋ’ ರೂಪುಗೊಂಡಿದೆ. ನಮ್ಮ ಮೆಟ್ರೋ ಪ್ರಯಾಣವು ವೇಗ, ಸುರಕ್ಷತೆ ಮತ್ತು ಸಮಯಪಾಲನೆಗಾಗಿ ಹೆಸರುವಾಸಿಯಾಗಿದೆ. ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ಜನರಿಗೆ ದೊಡ್ಡ ನೆರವಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಮೆಟ್ರೋವನ್ನು ಬಳಸುತ್ತಿದ್ದಾರೆ. ಮೆಟ್ರೋ ರೈಲುಗಳಲ್ಲಿ ಸ್ವಚ್ಛತೆ, ಶಿಸ್ತು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳಿವೆ.
ಹೀಗಿರುವಾಗ, ಪ್ರಯಾಣಿಕರು ಇನ್ನುಂದೆ ಮೆಟ್ರೋದಲ್ಲಿ ಪ್ರಯಾಣಿಸುವಾಗ ಈ ಸೂಚನೆಯನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಪಾಲಿಸದಿದ್ದರೆ ಕೇಸ್ ದಾಖಲಾಗುತ್ತದೆ. ಹೌದು… ನೀವು ಇನ್ನು ಮುಂದೆ ಮೆಟ್ರೋದಲ್ಲಿ ರೀಲ್ಸ್ ನೋಡುವುದು, ಫೋನ್‌ನಲ್ಲಿ ಜೋರಾಗಿ ಮಾತನಾಡುವುದು, ತಿಂಡಿ, ಊಟ ಮಾಡಿದ್ರೆ ದಂಡದ ಜತೆಗೆ ಪ್ರಕರಣ ಕೂಡ ದಾಖಲು ಮಾಡಲಾಗುತ್ತದೆ. ಏಕೆಂದರೆ, ಕಳೆದ 20 ದಿನದಲ್ಲಿ ಮೆಟ್ರೋ ಪ್ರಯಾಣಿಕರ ವಿರುದ್ಧ 7,429 ಕೇಸ್ ದಾಖಲಾಗಿದೆ. ಈ ಕ್ರಮವನ್ನು ತರಲು ಒಂದು ಕಾರಣವಿದೆ. ಹೌದು ಮೆಟ್ರೋದಲ್ಲಿ ಇತ್ತೀಚೆಗೆ ಜೋರಾಗಿ ಸೌಂಡ್ ಇರುವುದನ್ನು ತಡೆಯಲು ಹಾಗೂ ಇತರ ಸಹ ಪ್ರಯಾಣಿಕರಿಗೆ ತೊಂದರೆ ಆಗುವುದನ್ನು ತಡೆಯಲು ವಿಭಿನ್ನ ಕ್ರಮವನ್ನು ತರಲಾಗಿದೆ. ಒಂದು ವೇಳೆ ಈ ನಿಯಮವನ್ನು ಮೀರಿದ್ರೆ ದಂಡಾಸ್ತ್ರ ಪ್ರಯೋಗ ಮಾಡಲಾಗುವುದು ಎಂದು ಹೇಳಲಾಗಿದೆ.
ಮೊಬೈಲ್ ಅಲ್ಲಿ ಗಟ್ಟಿಯಾಗಿ ವಾಲ್ಯೂಮ್ ಜಾಸ್ತಿ ಕೊಡುವುದು, ಬ್ಲೂಟೂತ್ ಬಳಕೆ ಮಾಡಿ ಗಟ್ಟಿಯಾಗಿ ಮಾತನಾಡಿ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು, ಅಲ್ಲಲ್ಲಿ ಊಟ-ತಿಂಡಿ ಮಾಡುವುದು, ತಂಬಾಕು ಸೇವನೆ ಮಾಡುವ ದೂರುಗಳು ಬರುತ್ತಿದೆ. ಮೆಟ್ರೋದಲ್ಲಿ ಲಕ್ಷಾಂತರ ಜನ ಓಡಾಡುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆ ವೇಗವಾಗಿ ಹೋಗಲು ಮೆಟ್ರೋವನ್ನು ಬಳಸುತ್ತಾರೆ. ಈ ಹೊತ್ತಿನಲ್ಲಿ ಸುಮ್ಮನೆ ಕೂರುವ ಬದಲು ಟೈಮ್ ಪಾಸ್ ಮಾಡಲು ಬಹುತೇಕ ಜನ ಮೊಬೈಲ್ ಬಳಕೆ ಮಾಡುತ್ತಾರೆ. ಹೆರ್ ಫೋನ್ ಹಾಕಿಕೊಳ್ಳದೇ ರಿಲ್ಸ್ ಯೂಟ್ಯೂಬ್ ನೋಡುತ್ತಾರೆ. ಈ ಹಿಂದೆಯೇ ಮೆಟ್ರೋ ಈ ರೀತಿ ಮಾಡಬಾರದು ಎಂಬ ರೂಲ್‌ಸ್ ಮಾಡಿತ್ತು. ಆದರೆ ಇದನ್ನು ಮೀರಿ ಅನೇಕರ ಈ ತಪ್ಪುಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ದಂಡಾಸ್ತ್ರ ಚಿಂತನೆ ಮಾಡಲಾಗಿದೆ.
Udupi: Goods tempo crashes into house after driver loses control- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











