ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸ್ವರ್ಗದ ದ್ವಾರವೆಂದೇ ಹೆಸರುವಾಸಿ ವೈಕುಂಠದ ಬಾಗಿಲುಗಳು : ಏಕಾದಶಿ ಸಂಭ್ರಮ

ತಿರುಪತಿ : Tulu Times l ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅತ್ಯಂತ ಪವಿತ್ರ ಹಾಗೂ ಮಹತ್ವಪೂರ್ಣ ಹಬ್ಬವಾಗಿ ಆಚರಿಸಲಾಗುತ್ತದೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನ ಬರುವ ಈ ಹಬ್ಬವನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಸ್ವರ್ಗದ ದ್ವಾರವಾದ ವೈಕುಂಠದ ಬಾಗಿಲುಗಳು ತೆರೆಯಲ್ಪಡುತ್ತವೆ ಎಂಬ ನಂಬಿಕೆಯಿದೆ.

ವೆಂಕಟೇಶ್ವರನಿಗೆ ಅತ್ಯಂತ ಪ್ರಿಯವಾದ ದಿನ 

ವೈಕುಂಠ ಏಕಾದಶಿಯಂದು ಭಕ್ತರು ಉಪವಾಸ ವ್ರತವನ್ನು ಪಾಲಿಸಿ, ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಹಾಗೂ ಧ್ಯಾನದಲ್ಲಿ ತೊಡಗುತ್ತಾರೆ. ಈ ದಿನ ಧರ್ಮ, ದಾನ ಹಾಗೂ ಸೇವೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ತಿರುಪತಿ ದೇವಸ್ಥಾನದಲ್ಲಿ ಟಿಟಿಡಿ ವತಿಯಿಂದ ಭಕ್ತರಿಗೆ ಅನ್ನದಾನ ವ್ಯವಸ್ಥೆಯೂ ಭರ್ಜರಿಯಾಗಿ ನಡೆಯುತ್ತದೆ. ಹೌದು… ವೈಕುಂಠ ಏಕಾದಶಿ ವೆಂಕಟೇಶ್ವರನಿಗೆ ಅತ್ಯಂತ ಪ್ರಿಯವಾದ ದಿನ. ಈ ದಿನ ವೆಂಕಟೇಶ್ವರನಿಗೆ ತಿರುಮಂಜನ, ವಜ್ರ ಹಾಗೂ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗುತ್ತದೆ.

ದೇಶಾದ್ಯಂತ ಪೂಜೆ ಮತ್ತು ಪುನಸ್ಕಾರದ ಸಡಗರ ;

ತೋಮಾಲ ಸೇವೆ, ಧರ್ನುಮಾಸ ಆರಾಧನೆ ಬಳಿಕ ಉತ್ಸವ ಮೂರ್ತಿಯ ಮೆರವಣಿಗೆ ನಡೆಯುತ್ತದೆ. ವೈಕುಂಠ ಏಕಾದಶಿಯಂದು ವೈಕುಂಠ ದ್ವಾರದಲ್ಲಿ ಭಕ್ತರಿಗೆ ದರ್ಶನ ಪ್ರಾಪ್ತಿಯಾಗುತ್ತದೆ ಎಂಬ ಐತಿಹ್ಯವಿದೆ. ಹಾಗಾಗಿ ಉತ್ಸವದ ಬಳಿಕ ಮೂರ್ತಿಯನ್ನು ದೇವಾಲಯಕ್ಕೆ ಕರೆತಂದು ವೈಕುಂಠ ದ್ವಾರದಲ್ಲಿ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನ ನೀಡಲಾಗುತ್ತದೆ.
ವೈಕುಂಠ ಏಕಾದಶಿ 2025 ರ ಹಿನ್ನೆಲೆಯಲ್ಲಿ ದೇಶಾದ್ಯಂತ ಪೂಜೆ ಮತ್ತು ಪುನಸ್ಕಾರದ ಸಡಗರ ಆವರಿಸಿದೆ. ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಿಗೆ ಭಕ್ತ ಸಾಗರವೇ ಹರಿದುಬರುತ್ತಿದೆ. ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದ ಶ್ರೀನಿವಾಸ ದೇಗುಲಗಳಲ್ಲಿ ಹಬ್ಬದ ಕಳೆಗಟ್ಟಿದೆ.

ಒಟ್ಟಾರೆಯಾಗಿ ಹೇಳೋದಾದ್ರೆ, ತಿರುಪತಿಯಲ್ಲಿ ವೈಕುಂಠ ಏಕಾದಶಿ ಕೇವಲ ಹಬ್ಬವಲ್ಲ,‌ ಅದು ಭಕ್ತಿ, ಶ್ರದ್ಧೆ ಮತ್ತು ಆಧ್ಯಾತ್ಮಿಕ ಅನುಭವದ ಮಹಾಸಂಗಮವಾಗಿದೆ. ಈ ದಿನದ ದರ್ಶನ ಭಕ್ತರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಆತ್ಮೋನ್ನತಿಯನ್ನು ತರುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಗಟ್ಟಿಯಾಗಿ ನೆಲೆಸಿದೆ.

The gates of Vaikuntha, known as the gateway to heaven: Ekadashi Sambhram – ತುಳುಟೈಮ್ಸ್

ಇದನ್ನೂ ಓದಿ :ಉತ್ತರ ಕರ್ನಾಟಕ ಸೊಗಡಿನ ಸೂರ್ಯ ಟ್ರೈಲರ್ ರಿಲೀಸ್‌ !

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yek8Z0SdHr4?si=GwSReb0C_lc8S0TD

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page