ಸಿನಿಮಾ: Tulu Times | ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಕ್ರಿಸ್ಮಸ್ ಬ್ಲಾಕ್ಬಸ್ಟರ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕ್ರಿಸ್ಮಸ್ ಗೆ ಬಿಡುಗಡೆಯಾದ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಾರ್ಕ್ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಕಮಾಯಿ ಮಾಡಿದೆ. ಕ್ರಿಸ್ಮಸ್ ಬ್ಲಾಕ್ ಬಸ್ಟರ್ ಆಗಿ ಹೊರ ಹೊಮ್ಮಿದ ಮಾರ್ಕ್.. ಮೊದಲ ವಾರಾಂತ್ಯದಲ್ಲಿ ₹35 ಕೋಟಿ ಗಳಿಕೆ ಕಂಡಿದೆ ಕಿಚ್ಚನ ಸಿನಿಮಾ.
ಮಾರ್ಕ್ ಸಿನಿಮಾ ಮೊದಲ ವಾರಾಂತ್ಯದಲ್ಲಿಯೇ 35ಕೋಟಿ ಗಳಿಕೆ ಮಾಡಿದೆ. ವೀಕೆಂಡ್ ನಲ್ಲಿ ಮಾತ್ರವಲ್ಲದೆ ಸೋಮವಾರವೂ ಕಿಚ್ಚನ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ವಿಮರ್ಶಕರು ಹಾಗೂ ವಿತರಕರು ಮಾರ್ಕ್ ಸಿನಿಮಾವನ್ನು ಕಮರ್ಷಿಯಲ್ ಹಿಟ್ ಎಂದು ಶ್ಲಾಘಿಸಿದ್ದಾರೆ. ಹಿಂದಿ ಹಾಗೂ ಹಾಲಿವುಡ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ದೊಡ್ಡ ಮಟ್ಟದ ಗೆಲುವನ್ನು ಕಿಚ್ಚನ ಸಿನಿಮಾ ಪಡೆದುಕೊಂಡಿದೆ.
ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು, ದಾವಣಗೆರೆ ಮತ್ತು ಚಾಮರಾಜನಗರದಾದ್ಯಂತದ ಹಲವಾರು ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳು ನಾಲ್ಕನೇ ದಿನವೂ ಹೌಸ್ಫುಲ್ ಪ್ರದರ್ಶನಗಳನ್ನು ಕಂಡಿದೆ. ಕಿಚ್ಚನ ಸ್ವಾಗ್, ಸ್ಟೈಲು, ಆಟಿಟ್ಯೂಡ್ ಕಂಡು ಚಿತ್ರರಸಿಕರು ಫಿದಾ ಆಗಿದ್ದಾರೆ. ಮ್ಯಾಕ್ಸ್ ಬಳಿಕ ಮತ್ತೊಮ್ಮೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಜೋಡಿ ಬೆಳ್ಳಿಪರದೆ ಮೇಲೆ ಮೋಡಿ ಮಾಡಿದೆ.
ಮೊದಲ ದಿನದ ಗಳಿಕೆ ಎಷ್ಟು…?
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಮಾರ್ಕ್ ಸಿನಿಮಾದ ಒಟ್ಟು ಗಳಿಕೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ. ಕಳೆದ ವರ್ಷ ಮ್ಯಾಕ್ಸ್ ಮೂಲಕ ಗೆದ್ದಿದ್ದ ಈ ಜೋಡಿ ಈ ಬಾರಿ ಅಂತಹದ್ದೇ ಪ್ರಯತ್ನ ಮಾಡಿದೆ.
ಒಂದೇ ದಿನ ಮಾರ್ಕ್ ಹಾಗೂ ಕನ್ನಡದ ಮತ್ತೊಂದು ಸ್ಟಾರ್ ಸಿನಿಮಾ 45 ಬಿಡುಗಡೆಯಾದ ಕಾರಣ ಈ ಎರಡೂ ಚಿತ್ರಗಳಿಗೂ ಸಾಮಾನ್ಯ ಪ್ರದರ್ಶನಗಳು ಲಭಿಸಿದ್ದವು. ಹೀಗಾಗಿ ಮೊದಲ ದಿನ ಮಾರ್ಕ್ಗೆ ನಿರೀಕ್ಷಿಸಿದ್ದ ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಪ್ರದರ್ಶನಗಳು ಸಿಕ್ಕಿಲ್ಲ ಮಾರ್ಕ್ ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ತಮಿಳುನಾಡಿನಲ್ಲಿ ಮಾರ್ಕ್ ತಮಿಳು ಡಬಿಂಗ್ ಸಹ ಬಿಡುಗಡೆಯಾಗಿದೆ. ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾದ ಪರಿಣಾಮ ಮಾರ್ಕ್ ಮೊದಲ ದಿನ ಹೇಳಿಕೊಳ್ಳುವ ಗಳಿಕೆ ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರು ನಗರದಲ್ಲಿ ಒಟ್ಟು 471 ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್ಸೈಟ್ ಸ್ಯಾಕ್ನಿಲ್ಕ್ ಮಾರ್ಕ್ ಮೊದಲ ದಿನದ ಗಳಿಕೆಯನ್ನು ಪ್ರಕಟವಾಗಿದೆ. ಮೊದಲ ದಿನ ಅಂದಾಜು 6.28 ಕೋಟಿ ರೂ ನೆಟ್ ಗಳಿಕೆ ಮಾಡಿದೆ. ಇದು ನೆಟ್ ಕಲೆಕ್ಷನ್ ಆಗಿದ್ದು ಗ್ರಾಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಹತ್ತಿರತ್ತಿರ 8 ಕೋಟಿ ಗಳಿಕೆ ಆದಂತಾಗಲಿದೆ.
Do you know the first week collection of Kichchan’s film ‘Mark’, which won the Christmas race?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











