ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಿರುತೆರೆ ಸೀರಿಯಲ್ ನಟಿ ಆತ್ಮಹತ್ಯೆ : ಕನ್ನಡ ಧಾರವಾಹಿಗಳಲ್ಲಿಯೂ ನಟಿಸಿದ್ದ ‘ನಂದಿನಿ’

ಬೆಂಗಳೂರು : Tulu Times l ಇತ್ತೀಚೆಗೆ ಆತ್ಮಹತ್ಯೆ ಕೇಸ್ ಗಳು ಹೆಚ್ಚಾಗ್ತಾ ಇವೆ. ಅದ್ರಲ್ಲೂ ವಿದ್ಯಾವಂತರೇ ಮನನೊಂದು ಆತ್ಮಹತ್ಯೆಗೆ ಶರಣಾಗೋದು ವಿಪರ್ಯಾಸವೆಂದೇ ಹೇಳಬಹುದು. ಹೌದು… ಕಿರುತೆರೆಯ ಸೀರಿಯಲ್ ನಲ್ಲಿ‌ ನಟಿಸುತ್ತಿದ್ದ ನಟಿಯೊಬ್ಬರು ಇಂದು (ಡಿ.29) ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ಬೆಂಗಳೂರಿನ ಆರ್​.ಆರ್​ ನಗರದಲ್ಲಿ ಆತ್ಮಹತ್ಯೆ ;

ಕಿರುತೆರೆ ಸೀರಿಯಲ್​ಗಳ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ನಂದಿನಿ ಅವರು, ಕನ್ನಡದ ಧಾರಾವಾಹಿಗಳು ಮಾತ್ರವಲ್ಲದೇ ತಮಿಳಿನ ಸೀರಿಯಲ್​​ನಲ್ಲೂ ಅವಕಾಶ ಪಡೆದಿದ್ದರು. ಆದರೆ ಈಗ ಅವರು ಬೆಂಗಳೂರಿನ ಆರ್​.ಆರ್​ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಧಾರಾವಾಹಿಗಳಲ್ಲಿ ನಂದಿನಿ ಅವರು ನಟಿಸಿದ್ದರು. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ನಂದಿನಿ ಅವರು ನಾಯಕಿಯ ಪಾತ್ರ ಮಾಡುತ್ತಿದ್ದರು. ದುರ್ಗಾ ಮತ್ತು ಕನಕ ಎಂಬ ಪಾತ್ರಗಳ ಮೂಲಕ ಅವರು ವೀಕ್ಷಕರಿಗೆ ಪರಿಚಿತರಾಗಿದ್ದರು. ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಮೌನ ಆವರಿಸಿದೆ. ಎಳೆ ವಯಸ್ಸಿನಲ್ಲಿಯೇ ಅಭಿಮಾನಿಗಳನ್ನು ಗಳಿಸಿಕೊಂಡ ನಟಿಗೆ ಸಡನ್ ಆಗಿ ಯಾವ ನೋವು ಆವರಿಸಿತೋ ಗೊತ್ತಿಲ್ಲ!

ಬಣ್ಣದ ಲೋಕದಲ್ಲಿ ಮಿಂಚುವ ಕನಸು ಕಂಡಿದ್ದ ನಂದಿನಿ ;

‘ಗೌರಿ’ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡುವ ಅವಕಾಶವನ್ನು ನಂದಿನಿ ಅವರು ಪಡೆದಿದ್ದರು. ಅವರ ನಟನೆಗೆ ವೀಕ್ಷಕರಿಗೆ ಮೆಚ್ಚುಗೆ ಸಿಕ್ಕಿತ್ತು. ಕಿರುತೆರೆ ಲೋಕದಲ್ಲಿ ಹೊಸ ಹೊಸ ಅವಕಾಶಗಳು ಅವರಿಗೆ ಸಿಗುವ ಸಾಧ್ಯತೆ ದಟ್ಟವಾಗಿತ್ತು. ಈ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಸಿಗಬೇಕಿದೆ.ಅ ವರ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಬಣ್ಣದ ಲೋಕದಲ್ಲಿ ಮಿಂಚುವ ಕನಸು ಕಂಡಿದ್ದ ನಂದಿನಿ ಅವರು ಈ ರೀತಿ ದುರಂತ ಅಂತ್ಯ ಕಂಡಿರುವುದು ನೋವಿನ ಸಂಗತಿ.

Television serial actress commits suicide: ‘Nandini’, who also acted in Kannada serials – ತುಳುಟೈಮ್ಸ್

ಇದನ್ನೂ ಓದಿ :ಐದೇ ನಿಮಿಷದಲ್ಲಿ ಚಿನ್ನ ಕಣ್ಮರೆ : ಚಾಲಾಕಿ ಕಳ್ಳರು

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=EegERTAU8QPripud

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page