ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಯುಗಾದಿ ನಂತರ ಸಾವು‌ – ನೋವು ಹೆಚ್ಚಾಗಲಿದೆಯಾ ?

ಭವಿಷ್ಯ : Tulu Times l ಹಾವೇರಿಯಲ್ಲಿ ಕೋಡಿಮಠದ ಶ್ರೀಗಳು  ಆತಂಕಕಾರಿ ಭವಿಷ್ಯ ನುಡಿದಿದ್ದು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಈ ಹಿಂದೆ 2024 ಹಾಗೂ 2025 ರ ಭವಿಷ್ಯವನ್ನು ನುಡಿದಿದ್ದ ಶ್ರೀಗಳು ಎಲ್ಲಾ ಘಟನೆಯು ಒಂದಕ್ಕೊಂದು ಸಂಬಂಧವಿತ್ತು ಮತ್ತು ಹೇಳಿಕೆ ನಿಜವಾಗಿದ್ದು ಇದೀಗ 2026 ಇನ್ನೂ ಆಘಾತಕಾರಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಯುಗಾದಿ ನಂತರ ಸಾವು-ನೋವು ಹೆಚ್ಚಾಗುವ ಎಚ್ಚರಿಕೆ ;

ಇನ್ನು ಬಜೆಟ್ ನಂತರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಏಳುವ ಸೂಚನೆ ನೀಡಿದ್ದಾರೆ. ಇಬ್ಬರು ಪ್ರಭಾವಿ ನಾಯಕರ ಅಂತ್ಯದ ಮುನ್ಸೂಚನೆ ಹಾಗೂ ಯುಗಾದಿ ನಂತರ ಸಾವು-ನೋವು ಹೆಚ್ಚಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಇವರು ಶಿವಯೋಗಿ ಶಿವಾನಂದ ಸ್ವಾಮೀಜಿ (ಕೋಡಿಶ್ರೀ) ಎಂದು ಪರಿಚಿತರಾಗಿ, ಕಾಲಜ್ಞಾನದ ಆಧಾರದ ಮೇಲೆ ರಾಜಕಾರಣ, ಪ್ರಕೃತಿ ವಿಕೋಪ (ಮಳೆ, ಸುನಾಮಿ, ಅಗ್ನಿ ಅವಘಡ), ದೇಶದ ಸಂಘರ್ಷಗಳು ಮತ್ತು ಮಹತ್ವದ ಘಟನೆಗಳ ಬಗ್ಗೆ ಭವಿಷ್ಯ ಹೇಳುತ್ತಾರೆ.

ಪ್ರಕೃತಿಯ ಅಸಮತೋಲನ, ಮಾನವನ ಅತಿಯಾದ ಲೋಭ, ಅಧರ್ಮ ಮತ್ತು ನೈತಿಕ ಕುಸಿತವೇ ಈ ಕಷ್ಟಗಳಿಗೆ ಮೂಲ ಕಾರಣವಾಗಬಹುದು ಎಂಬುದು ಅವರ ನುಡಿ. ಇದರ ಪರಿಣಾಮವಾಗಿ ಕೆಲವೊಂದು ಪ್ರದೇಶಗಳಲ್ಲಿ ರೋಗಗಳು, ಅಪಘಾತಗಳು, ಪ್ರಕೃತಿ ವಿಕೋಪಗಳು ಹಾಗೂ ಅಕಾಲಿಕ ಸಾವು-ನೋವುಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಅಲ್ಲದೇ ಅರಮನೆಗೆ ಕಾರ್ಮೋಡ ಕವಿಯಲಿದೆ ಎಂದು ಈ ಹಿಂದೆಯೇ ಎಚ್ಚರಿಸಿದ್ದನ್ನು ಅವರು ಪುನರುಚ್ಚರಿಸಿದ್ದಾರೆ. ಕೇವಲ ರಾಜಕೀಯ ಮಾತ್ರವಲ್ಲದೆ ಪ್ರಕೃತಿ ವಿಕೋಪದ ಬಗ್ಗೆಯೂ ಶ್ರೀಗಳು ಎಚ್ಚರಿಸಿದ್ದಾರೆ. ಡಿಸೆಂಬರ್ ನಂತರ ಸಾವು-ನೋವುಗಳು ಹೆಚ್ಚಾಗಲಿವೆ. ಯುಗಾದಿ ಕಳೆದ ಮೇಲೆ ಇದು ಇನ್ನೂ ಭೀಕರವಾಗಲಿದೆ. 2026ರ ವೇಳೆಗೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದಿದ್ದಾರೆ. ಚೀನಾದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿದ ಅವರು, ಅಲ್ಲಿ ಪ್ರಧಾನಮಂತ್ರಿಗಳು ಬದುಕುಳಿದಿದ್ದೇ ದೊಡ್ಡ ವಿಷಯ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Will death and suffering increase after Ugadi? – ತುಳುಟೈಮ್ಸ್

ಇದನ್ನೂ ಓದಿ :ಸ್ಕೂಟರ್ ರಸ್ತೆ ಡಿವೈಡರ್ ಗೆ ಡಿಕ್ಕಿ: ಸವಾರ ಮೃತ್ಯು

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=NWdjkTPwP9yOOJxb

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page