ಬೆಳ್ತಂಗಡಿ:ತುಳುಟೈಮ್ಸ್| ತಾಲೂಕಿನ ಇತಿಹಾಸ ಪ್ರಸಿದ್ದ ಕರಾಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಅತುಲ್ ಕುಮಾರ್ ಕೆ,ಎನ್ ಆಯ್ಕೆಯಾಗಿದ್ದಾರೆ.
ಉದ್ಯಮಿಯಾಗಿರುವ ಅತುಲ್ ಕುಮಾರ್ ಕೆ.ಎನ್ ಹಲೇಜಿಯ ನಿವಾಸಿಯಾಗಿದ್ದಾರೆ.ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಅತುಲ್ ಕುಮಾರ್ ಗುರುತಿಸಿಕೊಂಡಿದ್ದು,ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿಶೇಷ ಒಲವನ್ನು ಇಟ್ಟುಕೊಂಡಿದ್ದಾರೆ.
ಈಗಾಗಲೇ ಕರಾಯ ದೇವಾಸ್ಥಾನದ ಜೀರ್ಣೋದ್ದಾರಕ್ಕೆ ವಿಶೇಷವಾದ ಸೇವೆಗಳನ್ನು ಅತುಲ್ ಕುಮಾರ್ ಹಲೇಜಿ ನೀಡಿಕೊಂಡು ಬಂದಿದ್ದಾರೆ.ಕರಾಯ ದೇವಸ್ಥಾನಕ್ಕೆ ಅತುಲ್ ಕುಮಾರ್ ನೀಡಿರುವ ಕೊಡುಗೆ ಮತ್ತು ಸೇವೆಗಳನ್ನು ಗಮನಿಸಿರುವ ಗ್ರಾಮಸ್ಥರು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ವಹಿಸಿದ್ದಾರೆ.

ಕರಾಯ ದೇವಾಸ್ಧಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಅತುಲ್ ಕುಮಾರ್ ಹಲೇಜಿಯವರನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ದೇವಾಸ್ಥಾನದಲ್ಲಿ ನಡೆದ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಪಾಲ್ಗೊಂಡಿದ್ದರು.ಹರೀಶ್ ಪೂಂಜ ಕರಾಯ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿದ್ದಾರೆ.ನಾಗಾರ್ಜುನ ಬೆಂಗಳೂರು ಇವರನ್ನು ಕೂಡ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಉಪಸಮಿತಿಗಳನ್ನು ಮುಂದಕ್ಕೆ ಆಯ್ಕೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸುದರ್ಶನ್ ಕೊಲ್ಲಿ,ಆಡಳಿತ ಸಮಿತಿಯ ಅನಂತಕೃಷ್ಣ ಕುದ್ದಣ್ಣಾಯ,ಜಗದೀಶ್ ಮೈರ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಅಶೋಕ್.ಸುರೇಶ್ ಕರಾಯ,ಜಯವಿಕ್ರಮ,ಕುಶಾಲಪ್ಪ ಗೌಡ,ತೇಜಸ್ವಿ,ಅಣ್ಣುಗೌಡ ಕಡ್ತಿಮಾರು,ಯುವರಾಜ ಅನಾರು,ದರ್ಣಪ್ಪ ಗೌಡ ಕಿನ್ನಾಜೆ,ಜಯಾನಂದ ಕಲ್ಲಾಪು ಸೇರಿದಂತೆ ಹಲವಾರು ಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
Atul Kumar K.N. elected as Karaya Brahmakalashotsava Committee President tulu times
ಇದನ್ನೂ ಓದಿ :ಬ್ಯಾಂಕ್ ಶಾಖೆಯಲ್ಲಿ ಭಾರೀ ವಂಚನೆ : ನಕಲಿ ಗೋಲ್ಡ್ ಲೋನ್ ಸೃಷ್ಟಿ
……………………………………………………………………………………………………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











