ಮೈಸೂರು : Tulu Times l ಚಿನ್ನವು ಭಾರತೀಯ ಸಮಾಜದಲ್ಲಿ ಅಪಾರ ಮೌಲ್ಯ ಹೊಂದಿರುವ ಅಮೂಲ್ಯ ಲೋಹ. ಇತ್ತೀಚೆಗಂತೂ ಏರಿಕೆಯಾದ ಚಿನ್ನದ ಬೆಲೆಗೆ ಕಳ್ಳರು ಯಾವಾಗ, ಹೇಗೆ ಚಿನ್ನ ಕದಿಯೋದು ಅಂತ ಪಕ್ಕಾ ಪ್ಲಾನ್ ಮಾಡಿಕೊಂಡಿರ್ತಾರೆ. ಗಂಡು – ಹೆಣ್ಣು ಅಂತ ಇಲ್ಲದೆ ಕೆಲವರು ಕಳ್ಳತನದ ದಾರಿ ಹಿಡಿದಿರುವುದು ವಿಪರ್ಯಾಸದ ಸಂಗತಿ. ಮದುವೆ, ಹಬ್ಬಗಳು, ಹೂಡಿಕೆ ಹಾಗೂ ಕುಟುಂಬದ ಭದ್ರತೆಗೆ ಚಿನ್ನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದೇ ಕಾರಣದಿಂದ ಚಿನ್ನ ಕಳ್ಳತನ ಎಂಬ ಅಪರಾಧವು ದಿನೇ ದಿನೇ ಹೆಚ್ಚಾಗುತ್ತಿದೆ. ಚಿನ್ನ ಕಳ್ಳರು ಸಮಾಜದ ಶಾಂತಿ ಮತ್ತು ಜನರ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ.
ಹೌದು… ಮೈಸೂರಿನ ಹುಣಸೂರು ಚಿನ್ನದಂಗಡಿ ದರೋಡೆ ನಡೆಸಿ ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ದೃಶ್ಯ ಲಭ್ಯವಾಗಿದ್ದು ಕೇವಲ ಐದೇ ಐದು ನಿಮಿಷಗಳಲ್ಲಿ ಗೋಲ್ಡ್ ಶಾಪ್ ಕಳ್ಳತನ ನಡೆಸಲಾಗಿದ್ದು, ಕೆಜಿಗಟ್ಟಲೆ ಚಿನ್ನ ಕದ್ದು ಚಾಲಾಕಿಗಳು ಪರಾರಿಯಾಗಿದ್ದಾರೆ. ಚಿನ್ನ ಕದಿಯೋ ಮುಂಚೇನೇ ಎಲ್ಲಾ ತೆರನಾದ ಪ್ಲಾನ್ ಮಾಡಲಾಗಿತ್ತು.
ಮಧ್ಯಾಹ್ನ 2 ಗಂಟೆ 4 ನಿಮಿಷದ ಸಮಯಕ್ಕೆ ಅಂಗಡಿಗೆ ಎಂಟ್ರಿಕೊಟ್ಟಿದ್ದ ಗ್ಯಾಂಗ್ 2 ಗಂಟೆ 9 ನಿಮಿಷಕ್ಕೆ ಶಾಪ್ನಿಂದ ತೆರಳಿರುವುದು ವಿಶೇಷ. ಅಂದ್ರೆ ಚಿನ್ನ ತೆಗೆದುಕೊಂಡು ಹೋಗಲು ಎರಡು ಚೀಲದಂತಹ ಬ್ಯಾಗ್ ತಂದಿದ್ದ ದರೋಡೆಕೋರರು, ಚಿನ್ನದಂಗಡಿಯ ಶೋಕೆಸ್ನಲ್ಲಿಟ್ಟಿದ್ದ ದೊಡ್ಡ ದೊಡ್ಡ ಗಾತ್ರದ ಆಭರಣವನ್ನ ಕೆಲವೇ ಕೆಲವು ನಿಮಿಷದಲ್ಲಿ ಒಂದು ಕಡೆ ಗುಡ್ಡೆ ಹಾಕಿದ್ದಾರೆ. ಬಳಿಕ ಮತ್ತೆರಡು ನಿಮಿಷದಲ್ಲಿ ದೊಡ್ಡ ಬ್ಯಾಗ್ಗೆ ಅವನ್ನು ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಹೆಚ್ಚು ಸಮಯ ತೆಗೆದುಕೊಳ್ಳದೆ ಚಾಲಾಕಿ ಕಳ್ಳರು ಚಿನ್ನದೊಂದಿಗೆ ಪರಾರಿಯಾಗಿರುವುದು ವರದಿಯಾಗಿದೆ.
Gold disappears in five minutes: Clever thieves – ತುಳು ಟೈಮ್ಸ್
ಇದನ್ನೂ ಓದಿ : ಮಂಗಳೂರಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಿದ ಕಳ್ಳ!
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/P32eyH-HgoY?si=twfZUnzHH85Fi4j0











