ಬೆಳ್ತಂಗಡಿ: Tulu Times | ಲಾಯಿಲ ಗ್ರಾಮದ ಅಲೆಕ್ಕಿ ರಸ್ತೆಯಲ್ಲಿ ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ ಮಾಡಿದ ಘಟನೆ ನಡೆದಿದೆ. ಬೈಕ್ ನಲ್ಲಿದ್ದ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದದ್ದು ಹೇಗೆ..?
ಬೈಕ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ ಸುಕೇಶ್ ಎಂಬಾತ ಕೆಲಸ ಮುಗಿಸಿ, ಬೆಳ್ತಂಗಡಿಯಿಂದ ಕೆಲಸ ಮುಗಿಸಿ ಡಿ.26 ರಂದು ರಾತ್ರಿ ಸುಮಾರು 8:45 ಕ್ಕೆ ಮನೆ ಕಡೆ ಬೈಕ್ ನಲ್ಲಿ ಬರುತ್ತಿದ್ದಾಗ ಲಾಯಿಲ ಗ್ರಾಮದ ಅಲೆಕ್ಕಿ ರಸ್ತೆಯಲ್ಲಿ ಕಾಡುಕೋಣ ಕಾಡಿನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲೆ ಏಕಾಏಕಿ ದಾಳಿ ಮಾಡಿದ್ದು, ಬೈಕ್ ನಲ್ಲಿದ್ದ ಸುಕೇಶ್ ಕಾಲು ಹಾಗೂ ಕೈಗೆ ಗಂಭೀರವಾದ ಗಾಯಗಳಾಗಿವೆ. ಜೊತೆಗೆ ದೇಹದ ವಿವಿಧ ಭಾಗಗಳಿಗೆ ಪೆಟ್ಟಾಗಿದೆ.ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಪಾಯದಿಂದ ಸುಕೇಶ್ ಪಾರಾಗಿದ್ದಾರೆ. ಕಾಡುಕೋಣ ದಾಳಿಗೆ ಬೈಕ್ ಗೆ ಹಾನಿಯಾಗಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕೂಡೇಲು ನಿವಾಸಿ ವೆಂಕಪ್ಪ ಪೂಜಾರಿಯ ಮಗ ಸುಕೇಶ್(31) ಎಂಬಾತನ ಮೇಲೆ ಗಂಭೀರವಾದ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಗಳು ಮತ್ತು ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹೊಸ ವರ್ಷ 2026 ಏನೇನು ರೂಲ್ಸ್..?
ಪ್ರತೇಕ ಪ್ರಕರಣದಲ್ಲಿ,ಇನ್ನೇನು 2025 ರ ಡಿಸೆಂಬರ್ ತಿಂಗಳು ನೋಡು ನೋಡುತ್ತಿದ್ದಂತೆ ಮುಗಿಯೋ ಹಂತದಲ್ಲಿದೆ. ದಿನಗಳು ಉರುಳಿ, ಸಮಯ ಸಾಗ್ತಾ ಇದ್ದರೂ ಕ್ಯಾಲೆಂಡರ್ ನ ದಿನಾಂಕ ಹಾಗೂ ಇಸವಿ ಮಾತ್ರ ಓಡುತ್ತಲೇ ಇವೆ. ಈ ಹೊಸ ಇಸವಿಯ ಆಗಮನಕ್ಕೆ ಕಾಯುತ್ತಿರುವವರು ಹಾಗೂ 2026 ನ್ನು ಭರ್ಜರಿಯಾಗಿ ವೆಲ್‌ಕಂ ಮಾಡಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಇತ್ತ ಕಡೆ ಪೊಲೀಸರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇಂದು (ಡಿಸೆಂಬರ್ 26) ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ನೇತೃತ್ವದಲ್ಲಿ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರ ಜೊತೆ ಸಭೆ ನಡೆಯಿತು. ಸಿಸಿಕ್ಯಾಮರಾ ಅಳವಡಿಕೆ, ಶಬ್ದ ಮಾಲಿನ್ಯ ಮತ್ತು ಹೆಣ್ಮಕ್ಕಳ ಸುರಕ್ಷತೆ ಸೇರಿದಂತೆ 30 ಸೂಚನೆಗಳನ್ನು ಕೊಟ್ಟಿದ್ದಾರೆ. ಇನ್ನು ಬಾರ್ ಮತ್ತು ಪಬ್‌ಗಳಿಗೆ ರಾತ್ರಿ 1 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
ಕಾರ್ಯಕ್ರಮದ ಪ್ಲಾನ್ ಬಗ್ಗೆ ಪೊಲೀಸರಿಗೆ ತಿಳಿಸಬೇಕು!
ಪ್ರಚೋದನಕಾರಿ ಹಾಡುಗಳನ್ನು ಹಾಕಬಾರದು. ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಬೇರೆ ವ್ಯವಸ್ಥೆ ಇರಬೇಕು. ಲಿಕ್ಕರ್ ಸ್ಟಾಕ್ ಬಗ್ಗೆ ಎಲ್ಲಾ ನೀಟಾಗಿ ಇರಬೇಕು. ಕಾರ್ಯಕ್ರಮದ ವ್ಯಾನ್ ಬಗ್ಗೆ ಪೊಲೀಸರಿಗೆ ತಿಳಿಸಬೇಕು. ಬಾರ್, ಪಬ್‌ನವರು ಹೆಚ್ಚುವರಿ ಸಮಯ ಕೇಳಿದ್ದರು. ಆದರೆ ರಾತ್ರಿ 1 ಗಂಟೆಗೆ ಬಂದ್ ಆಗಬೇಕೆಂದು ಸೂಚಿಸಿದ್ದೇನೆ. ಜವಾಬ್ದಾರಿಯಿಂದ ಹೊಸ ವರ್ಷಾಚರಣೆ ಮಾಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸೂಚನೆ ನೀಡಿದ್ದಾರೆ.
Wild boar attacks biker in Belthangady!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











