ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

ಮಂಗಳೂರಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಿದ ಕಳ್ಳ!

ಮಂಗಳೂರು: Tulu Times | ಮಂಗಳೂರಿನ ಕೊಂಚಾಡಿ ಕೊಪ್ಪಲಕಾಡಿನಲ್ಲಿ ಮಹಿಳೆಯೊಬ್ಬಳು ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ  ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಿ ಕಳ್ಳ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಡಿಮೆ ಹೆರಿಗೆ ಆಗುವ ಆಸ್ಪತ್ರೆಗಳಿಂದ ವೈದ್ಯರ ಶಿಫ್ಟ್ : ಆರೋಗ್ಯ ಇಲಾಖೆಯಿಂದ ಆದೇಶ

ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಚಿನ್ನದ ಸರವನ್ನು ಕಳ್ಳ ಕುತ್ತಿಗೆಗೆ ಕೈ ಹಾಕಿ ಕಿತ್ತಿದ್ದಾನೆ, ತಕ್ಷಣ  ಮಹಿಳೆಯ ಬೊಬ್ಬೆ ಕೇಳಿ ಅಕ್ಕಪಕ್ಕದ ಮನೆಯವರೆಲ್ಲಾ ಓಡಿ ಬಂದಿದ್ದಾರೆ. ನಂತರ ಕಳ್ಳ ಸಮೀಪದ ಮನೆಯ ಕಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ನಂತರ ಆ ಸ್ಥಳದಿಂದ ಬೇರೆ ಕಡೆ ತೆರಳಿ ಬಟ್ಟೆ ಬದಲಾಯಿಸಿ ಅನುಮಾನ ಬಾರದಂತೆ ತೆರಳಿದ್ದಾನೆ.

ಇದನ್ನೂ ಓದಿ: ಆಧ್ಯಾತ್ಮಿಕ ಶಾಂತಿ ಹಾಗೂ ಭಕ್ತಿಗೆ ಹೆಸರಾದ ಮಂತ್ರಾಲಯದಲ್ಲಿ ಭಾಷಾ ವಿವಾದ !

ಸಮೀಪದ ಮನೆಯ ಸಿಸಿ ಕ್ಯಾಮರಾದಲ್ಲಿ  ಕಳ್ಳನ ಚಲನ ವಲನಗಳ ದೃಶ್ಯ ಕಂಡುಬಂದಿದೆ. ಸರ ಕಳೆದುಕೊಂಡ ಮಹಿಳೆಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಳ್ಳಯ್ಯನಗಿರಿಗೆ ಟ್ರಿಪ್ ಹೋಗಿದ್ದದವರ ಜೀಪ್ ಪಲ್ಟಿ!

ಪ್ರತ್ಯೇಕ ಪ್ರಕರಣದಲ್ಲಿ, ಮುಳ್ಳಯ್ಯನಗಿರಿಗೆ ಟ್ರಿಪ್ ಹೋಗಿದ್ದದವರ ಜೀಪ್ ಪಲ್ಟಿಯಾಗಿ 7ಮಂದಿಗೆ ಗಾಯಗಳಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೋದಿ ಸರ್ಕಾರ ಜೀವನೋಪಾಯದ ಹಕ್ಕು ಕಸಿದಿದೆ: ಪ್ರಿಯಾಂಕ್ ಖರ್ಗೆ

ಪುತ್ತೂರಿನಿಂದ ಜೀಪ್ ಮೂಲಕ ಮುಳ್ಳಯ್ಯನಗಿರಿಗೆ ಟ್ರಿಪ್ ಹೋಗಿದ್ದ 7 ಮಂದಿಗೆ ಗಾಯಗಳಾಗಿರುವ ಘಟನೆ ಮುಳ್ಳಯ್ಯನಗಿರಿ ಮಾರ್ಗದ ತಿಪ್ಪನಹಳ್ಳಿ ಎಸ್ಟೇಟ್ ಬಳಿ ಸಂಭವಿಸಿದೆ. ಜೀಪು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪುತ್ತೂರಿನಿಂದ ಜೀಪ್ ನಲ್ಲಿಯೇ ಆಗಮಿಸಿದ್ದ 7ಮಂದಿ ಮುಳ್ಳಯ್ಯನಗಿರಿಗೆ ಬಂದಿದ್ದರು. ಈ ವೇಳೆ ಅಪಘಾತವಾಗಿದೆ. ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಂಕು ಡೊಂಕಿನ ರಸ್ತೆಯಲ್ಲಿ ಪ್ರಯಾಣಿಸುವುದೂ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ.

Thief snatches chain from woman’s neck in Mangalore!- ತುಳುಟೈಮ್ಸ್

ಇದನ್ನೂ ಓದಿ: ಸರ್ಕಾರ ಜನರ ಜೀವ ರಕ್ಷಿಸುವಲ್ಲಿ ಸಂಪೂರ್ಣ ವಿಫಲ : ಅರುಣ್ ಕುಮಾರ್ ಪುತ್ತಿಲ

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page