ಮಂತ್ರಾಲಯ : Tulu Times | ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇದು ಮಹಾನ್ ಸಂತ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಇರುವ ಪವಿತ್ರ ಸ್ಥಳವಾಗಿ ದೇಶಾದ್ಯಂತ ಪ್ರಸಿದ್ಧವಾಗಿದೆ. ತುಂಗಭದ್ರಾ ನದಿಯ ತೀರದಲ್ಲಿರುವ ಮಂತ್ರಾಲಯವು ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ಭಕ್ತಿ ಭಾವವನ್ನು ನೀಡುವ ಕೇಂದ್ರವಾಗಿದೆ. ಇಲ್ಲಿಗೆ ದೇಶದ ನಾನಾ ಕಡೆಗಳಿಂದಲೂ ಸಾವಿರಾರು ಭಕ್ತರು ಬಂದು ಹೋಗುವುದು ವಿಶೇಷ.
ಶ್ಲೋಕದ ಫಲಕಕ್ಕೆ ತೆಲುಗು ಭಾಷಿಕರು ವಿರೋಧ ;
ಈ ಮಂತ್ರಾಲಯದ ಪ್ರಮುಖ ಆಕರ್ಷಣೆ ಎಂದರೆ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿ ದರ್ಶನ ಪಡೆಯಲು ಆಗಮಿಸುತ್ತಾರೆ. ವೃಂದಾವನದ ಸುತ್ತಲಿನ ವಾತಾವರಣವು ಶಾಂತ, ಪವಿತ್ರ ಮತ್ತು ಧ್ಯಾನಮಯವಾಗಿರುತ್ತದೆ. ಜೊತೆಗೆ ಮಂತ್ರಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜೆಗಳು, ಹೋಮಗಳು ಮತ್ತು ಪ್ರವಚನಗಳು ನಿಯಮಿತವಾಗಿ ನಡೆಯುತ್ತವೆ. ಆದರೆ, ಇಲ್ಲಿ ಸದ್ಯಕ್ಕೆ ಸಣ್ಣ ಸಮಸ್ಯೆಯೊಂದು ತಲೆಯೆತ್ತಿದೆ. ಆಂಧ್ರ ಮತ್ತು ರಾಯಚೂರು ಗಡಿಯ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಾಷಾ ವಿವಾದ ತಟ್ಟಿದ್ದು, ಮಠದ ಮುಖ್ಯ ದ್ವಾರದಲ್ಲಿ ಕನ್ನಡದಲ್ಲಿ ಬರೆಯಲಾಗಿರುವ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಎಂಬ ಶ್ಲೋಕದ ಫಲಕಕ್ಕೆ ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗೆ ಸೇರಿದ್ದರಿಂದ, ಇಲ್ಲಿ ತೆಲುಗು ಭಾಷೆಯಲ್ಲಿ ಫಲಕ ಇರಬೇಕು ಎಂದು ಅವರು ವಾದಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಂಧ್ರಪ್ರದೇಶ ಸಿಎಂ ಮತ್ತು ಉಪಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಫಲಕ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದಲೂ ಕನ್ನಡದಲ್ಲಿಯೇ ಇದೆ ಆದರೆ ಇದೀಗ ಒಮ್ಮಿಂದೊಮ್ಮೆಗೆ ಈ ಫಲಕದ ಬಗ್ಗೆ ವಾದ ವಿವಾದಗಳು ನಡರಯುತ್ತಿರುವುದು ಭಾಷಾ ವಿವಾದಕ್ಕೆ ಕಾರಣವಾಗುತ್ತಾ ಎಂಬ ಆತಂಕ ಶುರುವಾಗಿದೆ.
ಒಟ್ಟಿನಲ್ಲಿ, ಮಂತ್ರಾಲಯವು ಕೇವಲ ಧಾರ್ಮಿಕ ಸ್ಥಳವಾಗಿರದೆ ಅದು ಭಕ್ತಿ, ಸೇವೆ ಮತ್ತು ಶಾಂತಿಯ ಸಂಕೇತವಾಗಿದೆ. ಜೀವನದಲ್ಲಿ ಸಂಕಟ, ಅಶಾಂತಿ ಅಥವಾ ದಿಕ್ಕು ತಪ್ಪಿದ ಸಂದರ್ಭಗಳಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡುವುದು ಅನೇಕ ಭಕ್ತರಿಗೆ ಆತ್ಮಬಲ ಮತ್ತು ನಂಬಿಕೆಯನ್ನು ನೀಡುತ್ತದೆ. ಹಾಗಾಗಿ, ಫಲಕದ ವಿಷಯವಾಗಿ ಜನರು ಕಿತ್ತಾಡಿಕೊಳ್ಳದೆ ಮಂತ್ರಾಲಯದಲ್ಲಿ ಶಾಂತಿ ಕಾಪಾಡಿಕೊಂಡರೆ ಉತ್ತಮವೆನಿಸುತ್ತದೆ.
Language controversy in Mantralaya, known for spiritual peace and devotion! – ತುಳು ಟೈಮ್ಸ್
ಇದನ್ನೂ ಓದಿ :ಮೋದಿ ಸರ್ಕಾರ ಜೀವನೋಪಾಯದ ಹಕ್ಕು ಕಸಿದಿದೆ: ಪ್ರಿಯಾಂಕ್ ಖರ್ಗೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c3Lml4k6wi4?si=Y2Bvz2kVYsMjARVU











