ಸುಳ್ಯ : Tulu Times | ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಇಂದು ಬೆಳಗ್ಗೆ (ಡಿ.27) ಉದ್ಘಾಟನೆಗೊಂಡು ಸತತ ಮೂರು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮಗಳ ಜೊತೆ ಮೂಡಿ ಬರಲಿದೆ. ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ ಸಂಸ್ಥೆ ಅಮೃತ ಮಹೋತ್ಸವಕ್ಕೆ ಕಾಲಿಟ್ಟಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ಸುಳ್ಯದ ಎಲ್ಲಾ ಮುಖಂಡರುಗಳು, ಹಾಗೂ ಸಂಸ್ಥೆಯ ಶಿಕ್ಷಕ ವೃಂದ, ಉಪನ್ಯಾಸಕರು ಹಗಲಿರುಳು ಶ್ರಮಪಡುತಿದ್ದು ಊರಿನ ಸಮಸ್ತ ಬಾಂಧವರು, ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಿಕೊಡಲು ಸಿದ್ಧರಾಗಿದ್ದಾರೆ. ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಶಾಲೆಗೆ ಶಾಶ್ವತವಾದ ಯೋಜನೆಯನ್ನು ರೂಪಿಸಬೇಕೆಂದು ಆಲೋಚಿಸಿದಾಗ ಈ ಆಲೋಚನೆಗಳಿಗೆ ಪೂರಕವಾಗಿ ಸುಳ್ಯದ ಮಹಾನ್ ಧಾನಿಗಳು ಸಹಕಾರ ನೀಡಿರುವುದು ವರದಿಯಾಗಿದೆ.
ಈ ಅಮೃತ ಮಹೋತ್ಸವವು ಕಾಲೇಜಿನ ಇತಿಹಾಸದಲ್ಲಿ ಒಂದು ವಿಶೇಷ ಘಟ್ಟ ;
ಸುಳ್ಯದ ಅಮರಶಿಲ್ಪಿ ದಿ. ಕುರುಂಜಿ ವೆಂಕಟ್ರಮಣ ಗೌಡ ರವರ ಪುತ್ರ ಡಾ. ಕೆ ವಿ ಚಿದಾನಂದರವರು ಶಾಲೆಗೆ ಒಂದು ಕೋಟಿ ರೂ ವೆಚ್ಚದಲ್ಲಿ ನೂತನ ತರಗತಿ ಕೊಠಡಿ ನಿರ್ಮಿಸಿ ಕೊಡಲು ಇಚ್ಛಿಸಿದ್ದು, ಅದೇ ರೀತಿ ನಿರ್ಮಾಣ ಹಂತದಲ್ಲಿರುವ ಶಾಲೆಯ ನೂತನ ಭೋಜನಾಲಯ ಕಟ್ಟಡಕ್ಕೆ 13 ಲಕ್ಷ ರೂಪಾಯಿ ಸಹಕಾರವನ್ನು ನೀಡಿ ಸಹಕರಿಸಿದ ನಿವೃತ್ತ ಮುಖ್ಯ ಶಿಕ್ಷಕರಾದ ಕೃಷ್ಣ ನಾವಡ ಅವರ ಕುಟುಂಬದ ಸದಸ್ಯರ ಸಹಕಾರ ಶ್ಲಾಘನೀಯ ಎಂದು ಹೇಳಲಾಗಿದೆ. ಇವೆಲ್ಲದರ ಜೊತೆ 60 ಕ್ಕಿಂತಲೂ ಹೆಚ್ಚು ಸ್ಟಾಲ್ ಗಳು ಮೈದಾನದಲ್ಲಿದ್ದು, ವಿವಿಧ ರೀತಿಯಲ್ಲಿ ಜನರನ್ನು ಕಣ್ಮನ ಸೆಳೆಯಲಿದೆ. ಅಲ್ಲದೇ, ಸುಳ್ಯದ ಜೂನಿಯರ್ ಕಾಲೇಜ್ನಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಪ್ರಯುಕ್ತ ಮಕ್ಕಳ ‘ಮನೋರಂಜನೆಗಾಗಿ’ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ಆಟಿಕೆ ಅಮ್ಯೂಸ್ಮೆಂಟ್ ಗಳನ್ನಿಡಲಾಗಿದೆ.
ಕಾಲೇಜಿನ 75 ವರ್ಷಗಳ ಪಯಣವನ್ನು ಸ್ಮರಿಸುವ ಮತ್ತು ಮುಂದಿನ ಅಭಿವೃದ್ಧಿಗೆ ನಾಂದಿ ಹಾಡುವ ವೈಭವದ ಕಾರ್ಯಕ್ರಮವಾಗಿದೆ. ಇಲ್ಲಿ ಶೈಕ್ಷಣಿಕ ಮತ್ತು ಇತರ ವೈವಿಧ್ಯಮಯ ವಸ್ತು ಪ್ರದರ್ಶನ, ನೂತನ ಭೋಜನಾಲಯ ಉದ್ಘಾಟನೆ, ಹಿರಿಯ ಶಿಕ್ಷಕರಿಗೆ ಗೌರವ ಸಮರ್ಪಣೆ. 1.05 ಕೋಟಿ ರೂ.ಗಳ ಕಾಮಗಾರಿಗಳ ಉದ್ಘಾಟನೆಯನ್ನು ಹಮ್ಮಿಕೊಂಡಿರಲಾಗಿದೆ. ಈ ಅಮೃತ ಮಹೋತ್ಸವವು ಕಾಲೇಜಿನ ಇತಿಹಾಸದಲ್ಲಿ ಒಂದು ವಿಶೇಷ ಘಟ್ಟವಾಗಿದ್ದು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯರು ಒಟ್ಟಾಗಿ ಸೇರಿ ಕಾಲೇಜಿನ ಸಾಧನೆಗಳನ್ನು ಸ್ಮರಿಸುವ ಹಾಗೂ ಭವಿಷ್ಯದತ್ತ ಹೆಜ್ಜೆ ಹಾಕುವ ದೊಡ್ಡ ಸಂಭ್ರಮವಾಗಿದೆ.
Amrutha Mahotsav at S.P.P. College, Sullia from today (December 27) – ತುಳು ಟೈಮ್ಸ್
ಇದನ್ನೂ ಓದಿ :ಉಡುಪಿ ಜಿಲ್ಲಾ INTUC ಯುವ ಘಟಕ ಸ್ಥಾಪನೆ : ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c3Lml4k6wi4?si=Y2Bvz2kVYsMjARVU











