ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಮಧುವೇಹಿಗಳೂ ಸ್ವೀಟ್‌ ತಿನ್ನಬಹುದು.! ಹಬ್ಬದಂದು ಬಾಯಿ ಸಿಹಿ ಮಾಡಿಕೊಳ್ಳಿ..

KMF Deepawali Gift: ಭಾರತದಲ್ಲಿ ಹಬ್ಬ ಅಂದಾಕ್ಷಣ ನೆನಪಾಗುವುದು ವಿಧವಿಧದ ಸಿಹಿತಿನಿಸುಗಳು. ಆದರೆ ಮಧುಮೇಹಿಗಳಿಗೆ ಸಿಹಿ ತಿನಿಸುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿ. ಡಯಾಬಿಟಿಸ್ ಇರುವವರಿಗೆ ಎಂದೇ ಕೆಎಂಎಫ್ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿ, ಆ ಮೂಲಕ ದೀಪಾವಳಿ ಉಡುಗೊರೆ ನೀಡಲಿದೆ. ಇದರಿಂದ ಮಧುಮೇಹಿಗಳು ಯಾವುದೇ ಭಯವಿಲ್ಲದೆ ಸ್ವೀಟ್‌ ತಿನ್ನಬಹುದು.

ಕರುನಾಡಿನ ಹೆಮ್ಮೆಯ ನಂದಿನಿ ಬ್ರ್ಯಾಂಡ್​ ಮಧುಮೇಹಿಗಳಿಗೆಂದೇ ಸಕ್ಕರೆ ರಹಿತ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಿದೆ. ಇವುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆರೋಗ್ಯ ಕಾಳಜಿಯಿಂದ ಹಬ್ಬದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಪೂರಕವಾಗಿ ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಹೇಳಿಕೊಂಡಿದ್ದಾರೆ.

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಈ ಕಾಲದಲ್ಲಿ, ಸಕ್ಕರೆ ರಹಿತ ಸಿಹಿತಿನಿಸುಗಳನ್ನು ಮೆಚ್ಚಿ ಸೇವಿಸುತ್ತಿದ್ದಾರೆ. ಸಕ್ಕರೆ ರಹಿತ ನಂದಿನಿ ಸಿಹಿತಿಂಡಿಗಳು ಮಧುಮೇಹಿಗಳಿಗೆ ಪ್ರಯೋಜನಕಾರಿ. ಹೀಗಾಗಿ ನಾವು ಈ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಸಕ್ಕರೆ ಬಳಕೆ ಮಾಡದೆಯೇ ಆರೋಗ್ಯಕರ ಉತ್ಪನ್ನಗಳನ್ನು ಪರಿಚಯಿಸಲಾಗಿದೆ ಎಂದು ಶಿವಸ್ವಾಮಿ ಹೇಳಿದ್ದಾರೆ.

ಶುದ್ಧ ನಂದಿನಿ ಹಳೆ ಪೇಡಾ (ಸಕ್ಕರೆ ರಹಿತ) 200 ಗ್ರಾಂಗೆ 170 ರೂ., ನಂದಿನಿ ಖೋವಾ ಗುಲಾಬ್ ಜಾಮೂನ್ (ಸಕ್ಕರೆ ರಹಿತ) 500 ಗ್ರಾಂ ಪ್ಯಾಕ್‌ಗೆ 220 ರೂ, ಮತ್ತು ನಂದಿನಿ ಬೆಲ್ಲ ಓಟ್ಸ್ ಮತ್ತು ಬೀಜಗಳ ಬರ್ಫಿ 200 ಗ್ರಾಂಗೆ 170 ರೂ. ಬೆಲೆಗೆ ಲಭ್ಯವಿದೆ ಎಂದು ಕೆಎಂಎಫ್ ತಿಳಿಸಿದೆ. ಈ ಉತ್ಪನ್ನಗಳು ಶುದ್ಧ, ರುಚಿಕರ, ಉತ್ತಮ ಗುಣಮಟ್ಟದ ವಿಚಾರದಲ್ಲಿ ನಂದಿನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಶಿವಸ್ವಾಮಿ ಹೇಳಿದ್ದಾರೆ.

ದಸರಾ ಸಮಯದಲ್ಲಿ, ನಂದಿನಿ ಸಿಹಿ ಉತ್ಪನ್ನಗಳ ಮಾರಾಟ 750 ಮೆಟ್ರಿಕ್ ಟನ್‌ಗಳನ್ನು ದಾಟಿದೆ. ಇದು ನಂದಿನಿ ಬ್ರ್ಯಾಂಡ್‌ನ ಶುದ್ಧತೆ ಮತ್ತು ಗುಣಮಟ್ಟದ ಬಗ್ಗೆ ಗ್ರಾಹಕರ ನಿರಂತರ ನಂಬಿಕೆಗೆ ಸಾಕ್ಷಿ ಎಂದು ಕೆಎಂಎಫ್ ಹೇಳಿದೆ.

ಜಿಎಸ್​​ಟಿ ಸುಧಾರಣೆ ಬಳಿಕ ಬೆಲೆ ಪರಿಷ್ಕರಣೆ
ಇತ್ತೀಚೆಗೆ ಜಿಎಸ್‌ಟಿ ಸುಧಾರಣೆಗಳು ಅನುಷ್ಠಾನಕ್ಕೆ ಬಂದ ನಂತರ ಹಲವು ದಿನನಿತ್ಯ ಬಳಕೆಯ ವಸ್ತುಗಳ ದರ ಕಡಿಮೆಯಾಗಿದೆ. ಅಂತೆಯೇ ಕೆಎಂಎಫ್ ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ಪಟ್ಟಿಯನ್ನು ಪರಿಷ್ಕರಿಸಿದೆ. ಪನ್ನೀರ್, ತುಪ್ಪ, ಚೀಸ್, ಚಾಕೊಲೇಟ್‌ಗಳು, ಐಸ್ ಕ್ರೀಮ್‌ಗಳು ಮತ್ತು ಇತರ ಉತ್ಪನ್ನಗಳನ್ನು ಒಳಗೊಂಡಂತೆ ಒಟ್ಟು 21 ನಂದಿನಿ ಹಾಲಿನ ಉತ್ಪನ್ನಗಳ ಬೆಲೆಗಳನ್ನು ಪರಿಷ್ಕರಿಸಲಾಗಿದೆ.

ದರ ಪರಿಷ್ಕರಣೆಯ ನಂತರ, ಈ ಹಿಂದೆ 650 ರೂ ಇದ್ದ ತುಪ್ಪದ (1000 ML) ದರ ಈಗ 610 ರೂ. ಆಗಿದೆ. 500 gram ತೂಕದ ಉಪ್ಪು ರಹಿತ ಬೆಣ್ಣೆಯ ಬೆಲೆ ಈಗ 286 ರೂ. ಆಗಿದೆ. 1 Kg ಸಂಸ್ಕರಿಸಿದ ಚೀಸ್ ಬ್ಲಾಕ್ ಬೆಲೆ 530 ರೂ.ನಿಂದ 497 ರೂ.ಗೆ ಇಳಿಕೆಯಾಗಿದೆ.

ಇದನ್ನೂ ಓದಿ: Udupi: ಬಿಡ್ಡಿಂಗ್‌ ಕೆಲಸದ ಆಮಿಷವೊಡ್ಡಿ 29 ಲಕ್ಷ ರೂ. ವಂಚನೆ


ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 138

You cannot copy content of this page