ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಡುಪಿ ಜಿಲ್ಲಾ INTUC ಯುವ ಘಟಕ ಸ್ಥಾಪನೆ : ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ

ಉಡುಪಿ : Tulu Times | ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಯುವ ಸಬಲೀಕರಣಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಕಾರ್ಮಿಕ ಕಾಂಗ್ರೆಸ್ (INTUC) ಯುವ ಘಟಕವನ್ನು ಅಧಿಕೃತವಾಗಿ ಸ್ಥಾಪಿಸಲಾಗಿದೆ. ಈ ಘಟಕವು ಜಿಲ್ಲೆಯ ಯುವ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಸಂಘಟಿತ ವೇದಿಕೆಯಾಗುವ ನಿರೀಕ್ಷೆಯಿದೆ.

ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ ;

ವಿನಯ್ ಕುಮಾರ್ ಸೊರಕೆ ಹಾಗೂ ಜಿಲ್ಲಾ ಅಧ್ಯಕ್ಷರಾದ ಅಶೋಕ್ ಕೊಡವೂರು ಮತ್ತು ಜಿಲ್ಲಾ ಇಂಟಕ್ ಅಧ್ಯಕ್ಷರಾದ ಕೆ. ಎಸ್. ಕಿರಣ್ ಹೆಗ್ಡೆ ಇವರ ಶಿಫಾರಸ್ಸಿನ ಮೇರೆಗೆ ಉಡುಪಿ ಜಿಲ್ಲಾ ಇಂಟಕ್ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ರವೀಂದ್ರ ಆಚಾರ್ಯ ಅವರನ್ನು ರಾಜ್ಯ INTUC ಘಟಕ ಆಯ್ಕೆ ಮಾಡಲಾಗಿದೆ. INTUC ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆಗಳಲ್ಲಿ ಒಂದಾಗಿದ್ದು, ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇದರ ಅಂಗಸಂಸ್ಥೆಯಾಗಿ ಸ್ಥಾಪಿತವಾಗಿರುವ ಯುವ ಘಟಕವು, ಯುವ ಪೀಳಿಗೆಯನ್ನು ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಪ್ರೇರೇಪಿಸುವ ಉದ್ದೇಶ ಹೊಂದಿದೆ. ಉಡುಪಿ ಜಿಲ್ಲಾ ಯುವ ಘಟಕದ ಸ್ಥಾಪನೆಯೊಂದಿಗೆ ಯುವಕರಿಗೆ ತಮ್ಮ ಸಮಸ್ಯೆಗಳು, ಹಕ್ಕುಗಳು ಮತ್ತು ಅವಕಾಶಗಳ ಕುರಿತು ಧ್ವನಿ ಎತ್ತುವ ಶಕ್ತಿಶಾಲಿ ವೇದಿಕೆ ಲಭ್ಯವಾಗಿದೆ.

Udupi District INTUC Youth Unit established: Country’s largest labor organization – ತುಳು ಟೈಮ್ಸ್

ಇದನ್ನೂ ಓದಿ :ಸಾಕು ನಾಯಿಗಾಗಿ ಸೂಸೈಡ್ ಮಾಡಿಕೊಂಡ ಸಹೋದರಿಯರು !

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c3Lml4k6wi4?si=Y2Bvz2kVYsMjARVU

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page