ಹೊಸ ವರ್ಷ 2026 : Tulu Times | ಇನ್ನೇನು 2025 ರ ಡಿಸೆಂಬರ್ ತಿಂಗಳು ನೋಡು ನೋಡುತ್ತಿದ್ದಂತೆ ಮುಗಿಯೋ ಹಂತದಲ್ಲಿದೆ. ದಿನಗಳು ಉರುಳಿ, ಸಮಯ ಸಾಗ್ತಾ ಇದ್ದರೂ ಕ್ಯಾಲೆಂಡರ್ ನ ದಿನಾಂಕ ಹಾಗೂ ಇಸವಿ ಮಾತ್ರ ಓಡುತ್ತಲೇ ಇವೆ. ಈ ಹೊಸ ಇಸವಿಯ ಆಗಮನಕ್ಕೆ ಕಾಯುತ್ತಿರುವವರು ಹಾಗೂ 2026 ನ್ನು ಭರ್ಜರಿಯಾಗಿ ವೆಲ್ಕಂ ಮಾಡಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಇತ್ತ ಕಡೆ ಪೊಲೀಸರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇಂದು (ಡಿಸೆಂಬರ್ 26) ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ನೇತೃತ್ವದಲ್ಲಿ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರ ಜೊತೆ ಸಭೆ ನಡೆಯಿತು. ಸಿಸಿಕ್ಯಾಮರಾ ಅಳವಡಿಕೆ, ಶಬ್ದ ಮಾಲಿನ್ಯ ಮತ್ತು ಹೆಣ್ಮಕ್ಕಳ ಸುರಕ್ಷತೆ ಸೇರಿದಂತೆ 30 ಸೂಚನೆಗಳನ್ನು ಕೊಟ್ಟಿದ್ದಾರೆ. ಇನ್ನು ಬಾರ್ ಮತ್ತು ಪಬ್ಗಳಿಗೆ ರಾತ್ರಿ 1 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
ಕಾರ್ಯಕ್ರಮದ ಪ್ಲ್ಯಾನ್ ಬಗ್ಗೆ ಪೊಲೀಸರಿಗೆ ತಿಳಿಸಬೇಕು ;
ಪ್ರಚೋದನಕಾರಿ ಹಾಡುಗಳನ್ನು ಹಾಕಬಾರದು. ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಬೇರೆ ವ್ಯವಸ್ಥೆ ಇರಬೇಕು. ಲಿಕ್ಕರ್ ಸ್ಟಾಕ್ ಬಗ್ಗೆ ಎಲ್ಲಾ ನೀಟಾಗಿ ಇರಬೇಕು. ಕಾರ್ಯಕ್ರಮದ ಪ್ಲ್ಯಾನ್ ಬಗ್ಗೆ ಪೊಲೀಸರಿಗೆ ತಿಳಿಸಬೇಕು. ಬಾರ್, ಪಬ್ನವರು ಹೆಚ್ಚುವರಿ ಸಮಯ ಕೇಳಿದ್ದರು, ಆದರೆ ರಾತ್ರಿ 1 ಗಂಟೆಗೆ ಬಂದ್ ಆಗಬೇಕೆಂದು ಸೂಚಿಸಿದ್ದೇನೆ. ಜವಾಬ್ದಾರಿಯಿಂದ ಹೊಸ ವರ್ಷಾಚರಣೆ ಮಾಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸೂಚನೆ ನೀಡಿದ್ದಾರೆ.
ಈಗಾಗಲೇ ಉಪವಿಭಾಗ, ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರನ್ನು ಕರೆಸಿ ಮೀಟಿಂಗ್ ಮಾಡಲಾಗಿದೆ. ಜನದಟ್ಟಣೆ ನಿಯಂತ್ರಣ, ವಯೋಮಿತಿ, ಸಮಯ, ಸಿಸಿಕ್ಯಾಮರಾ ಅಳವಡಿಕೆ, ಶಬ್ದ ಮಾಲಿನ್ಯ, ಹೆಣ್ಮಕ್ಕಳ ಸುರಕ್ಷತೆ, ಎಂಟ್ರಿ, ಎಕ್ಸಿಟ್, ಫೈರ್ ಸೇಫ್ಟಿ, ಪಾರ್ಕಿಂಗ್ ಮತ್ತು ಮ್ಯಾನೇಜರ್, ಸಿಬ್ಬಂದಿ ಮದ್ಯಪಾನ ಮಾಡಿರಬಾರದು ಎಂದು ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
Strict law to come in 2026: Time limits for pubs, bars – ತುಳು ಟೈಮ್ಸ್
ಇದನ್ನೂ ಓದಿ : ಮೈಸೂರು, ಬೆಂಗಳೂರಿನಲ್ಲಿ ಕೆಲಸ ಅರಸುತ್ತಿರುವ ಅಭ್ಯರ್ಥಿಗಳಿಗಾಗಿ ಇಲ್ಲಿದೆ ಉದ್ಯೋಗ ಮಾಹಿತಿ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c3Lml4k6wi4?si=Y2Bvz2kVYsMjARVU











