ಚಿತ್ರದುರ್ಗ : Tulu Times | ಚಿತ್ರದುರ್ಗ ಬಸ್ ಅವಘಡ ಹಾಗೂ ಸಾವು ನೋವುಗಳ ಒಂದೊಂದು ಕಥೆಯೂ ಕಣ್ಣೀರು ತರಿಸುವಂತಿದೆ. ಜೀವಗಳನ್ನು ಕಳೆದುಕೊಂಡ ಮನೆಯವರ ನರಳಾಟ, ವೇದನೆ ಹೇಳತೀರದು. ಇಲ್ಲಿ ಒಬ್ಬೊಬ್ಬರದು ಒಂದೊಂದು ಕಥೆಯನ್ನು ಹೇಳುತ್ತವೆಯಾದರೂ ಇಷ್ಟೊಂದು ಭೀಕರವಾಗಿ ಬಸ್ ಹೊತ್ತಿ ಉರಿಯೋದಕ್ಕೆ ಹೇಗೆ ಸಾಧ್ಯವಾಯಿತು ಎಂಬುವುದಕ್ಕೆ ಹಲವು ಕಾರಣಗಳು ಕೇಳಿ ಬರುತ್ತಿವೆ.
ಬಸ್‌ನೊಳಗೆ ರಾಶಿ ರಾಶಿ ಆಯಿಲ್ ಬಾಕ್ಸ್‌ಗಳು ಪತ್ತೆ ;
ಹೌದು… ಇದೀಗ ಚಿತ್ರದುರ್ಗ ಬಸ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಸೀಬರ್ಡ್ ಖಾಸಗಿ ಬಸ್ವೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ಬೆಂಕಿ ಅನಾಹುತ ಸಂಭವಿಸಿತ್ತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ನಡೆದ ಈ ದುರ್ಘಟನೆಯಲ್ಲಿ, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ತನಿಖೆಯ ವೇಳೆ, ಅಪಘಾತಕ್ಕೀಡಾದ ಬಸ್‌ನೊಳಗೆ ರಾಶಿ ರಾಶಿ ಆಯಿಲ್ ಬಾಕ್ಸ್‌ಗಳು ಪತ್ತೆಯಾಗಿರುವುದು ಹೊಸ ತಿರುವನ್ನು ನೀಡಿದೆ.
ಈ ಆಯಿಲ್ ಬಾಕ್ಸ್‌ಗಳು ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಬೆಂಕಿ ನಿಯಂತ್ರಿಸಲು ಕಷ್ಟವಾಗಲು ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬಸ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಯಿಲ್ ಬಾಕ್ಸ್‌ಗಳು ಹೇಗೆ ಬಂದವು ಮತ್ತು ಇವುಗಳ ಸಾಗಣೆಗೆ ಅನುಮತಿ ಇತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಬಸ್ ದುರಂತದ ತೀವ್ರತೆಯನ್ನು ಹೆಚ್ಚಿಸಿ, ಹೆಚ್ಚಿನ ಹಾನಿಗೆ ಕಾರಣವಾಗಿದೆ ಎಂದು ಮೊದಲ ತನಿಖೆಯಲ್ಲಿ ಕಂಡುಬಂದಿದೆ. ಇದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
Is this material the root cause of the Chitradurga bus fire disaster? – ತುಳು ಟೈಮ್ಸ್
ಇದನ್ನೂ ಓದಿ :ಭಟ್ಕಳದ ಹುಡುಗಿ ಕನಸು.. ಬಸ್ ಅಪಘಾತದಲ್ಲಿ ಸುಟ್ಟು ಹೋಯ್ತು!
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c3Lml4k6wi4?si=Y2Bvz2kVYsMjARVU











