ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಬಸ್‌ ಚಾಲಕನಿಗೆ ಎದೆನೋವು..ತಪ್ಪಿದ ಭಾರೀ ದುರಂತ

ಸುಬ್ರಹ್ಮಣ್ಯ: Tulu Times | ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ಕೆಎಸ್ಸಾರ್ಟಿಸಿ ಬಸ್ ಅನ್ನು ಚಾಲನೆ ಮಾಡುತ್ತಿದ್ದ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡ  ಘಟನೆ ನಡೆದಿದ್ದು, ತಕ್ಷಣವೇ ಪಯಾಣಿಕರೋರ್ವರ  ಬಸ್ ನ್ನು ರಸ್ತೆ ಬದಿ ನಿಲ್ಲಿಸಿ, ಭಾರೀ ದುರಂತವನ್ನು ತಪ್ಪಿಸಿದ್ದಾರೆ.

ಘಟನೆ ನಡೆದದ್ದು ಹೇಗೆ..?

ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ಕೆಎಸ್ಸಾರ್ಟಿಸಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಗೋವಿಂದ ನಾಯ್ಕ ಎಂಬವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಪೆರ್ನೆ ಗ್ರಾಮದ ಕರ್ವೇಲು ಎಂಬಲ್ಲಿ ಸಮೀಪಿಸುತ್ತಿದ್ದಾಗ ಅವರಿಗೆ ತೀವ್ರವಾದ ಎದೆನೋವು ಶುರುವಾಗಿದೆ. ಇದನ್ನು ತಿಳಿದ ಬಸ್‌ ನಲ್ಲಿದ್ದ ಪ್ರಯಾಣಿಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ಬಸ್ಸಿನಲ್ಲಿದ್ದ ನ್ಯಾಯವಾದಿ ನೆಲ್ಯಾಡಿಯ ಇಸ್ಮಾಯೀಲ್ ಎಂಬವರ ಪುತ್ರ ಸಲ್ಮಾನುಲ್ ಫಾರಿಸ್ ತಕ್ಷಣವೇ ಚಾಲಕನತ್ತ ದೌಡಾಯಿಸಿ ಬಸ್ ಅನ್ನು ನಿಧಾನಕ್ಕೆ ಹತೋಟಿಗೆ ತಂದು ರಸ್ತೆ ಬದಿಗೆ ನಿಲ್ಲಿಸಿ, ಜನರ ಜೀವ ಉಳಿಸಿದ್ದಾರೆ. ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಸಾರಿಗೆ ನಿಯಂತ್ರಕರ ಸಹಕಾರದಿಂದ ಬಸ್ ಅನ್ನು ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಂದಿಡಲಾಗಿದೆ.

ಇದನ್ನೂ ಓದಿ: ಅಬ್ಬಬ್ಬಾ ಗಗನಕ್ಕೇರಿದ ಮೀನಿನ ಬೆಲೆ..ಕೆ.ಜಿ. ಗೆ ಎಷ್ಟು ಅಂತೀರಾ..?

ಭಟ್ಕಳದ ಹುಡುಗಿ ಕನಸು.. ಬಸ್‌ ಅಪಘಾತದಲ್ಲಿ ಸುಟ್ಟು ಭಸ್ಮ!

ಪ್ರತ್ಯೇಕ ಪ್ರಕರಣದಲ್ಲಿ, ಅದೆಷ್ಟೋ ಜನ ಯುವಕ ಯುವತಿಯರು ಬೆಂಗಳೂರಿಗೆ ಕನಸು ಹೊತ್ತುಕೊಂಡು ಬಂದು ಜೀವನ ನಡೆಸುತ್ತಾರೆ, ಅದ್ರಲ್ಲಿ ನಿನ್ನೆ ಬಸ್ ಅಪಘಾತದಲ್ಲಿ ಸುಟ್ಟುಕರಕಲಾದ ಯುವತಿ ರಶ್ಮಿಯ ಕಥೆ. ಉಜ್ವಲ ಭವಿಷ್ಯ ಕಟ್ಟಿಕೊಂಡು ಬಂದ ಈ ಹುಡುಗಿ ಗುರು ಸುಧೀಂದ್ರ ಕಾಲೇಜಿನ ಹುಡುಗಿ. ಅಪಘಾತದಲ್ಲಿ ಸುಟ್ಟು ಕರಕಲಾಗಿ ಹೋಗಿದ್ದಾಳೆ.

ರಶ್ಮಿ ಮಹಾಲೆ, ಭಟ್ಕಳದಂಥ ಪುಟ್ಟ ಪಟ್ಟಣದಲ್ಲಿ ಬೆಳೆದು, ವಿದ್ಯಾಭ್ಯಾಸವನ್ನು ಭಟ್ಕಳದಲ್ಲಿಯೇ ಮಾಡಿದ್ದ ಚಿತ್ರದುರ್ಗದ ಹಿರಿಯೂರು ಸಮೀಪ ಜವನಗೊಂಡನಹಳ್ಳಿಯ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ತನ್ನ ಇಬ್ಬರು ಗೆಳತಿಯರಾದ ಗಗನಾ ಹಾಗೂ ರಕ್ಷಿತಾ ಜೊತೆ ಗೋಕರ್ಣಕ್ಕೆ ಹೋಗುತ್ತಿದ್ದ ರಶ್ಮಿ ಮಹಾಲೆ ಸುಟ್ಟು ಕರಕಲಾಗಿದ್ದಾರೆ.

Bus driver suffers chest pain…a major tragedy averted- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page