ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮುಳ್ಳಯ್ಯನಗಿರಿಗೆ ಟ್ರಿಪ್ ಹೋಗಿದ್ದ ಜೀಪ್ ಪಲ್ಟಿ!

ಚಿಕ್ಕಮಗಳೂರು: Tulu Times | ಮುಳ್ಳಯ್ಯನಗಿರಿಗೆ ಟ್ರಿಪ್ ಹೋಗಿದ್ದದವರ ಜೀಪ್ ಪಲ್ಟಿಯಾಗಿ 7ಮಂದಿಗೆ ಗಾಯಗಳಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರಿನಿಂದ ಜೀಪ್ ಮೂಲಕ ಮುಳ್ಳಯ್ಯನಗಿರಿಗೆ ಟ್ರಿಪ್ ಹೋಗಿದ್ದ  7 ಮಂದಿಗೆ ಗಾಯಗಳಾಗಿರುವ ಘಟನೆ ಮುಳ್ಳಯ್ಯನಗಿರಿ ಮಾರ್ಗದ ತಿಪ್ಪನಹಳ್ಳಿ ಎಸ್ಟೇಟ್ ಬಳಿ ಸಂಭವಿಸಿದೆ. ಜೀಪು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಪುತ್ತೂರಿನಿಂದ ಜೀಪ್ ನಲ್ಲಿಯೇ ಆಗಮಿಸಿದ್ದ 7ಮಂದಿ ಮುಳ್ಳಯ್ಯನಗಿರಿಗೆ ಬಂದಿದ್ದರು. ಈ ವೇಳೆ ಅಪಘಾತವಾಗಿದೆ. ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಂಕು ಡೊಂಕಿನ ರಸ್ತೆಯಲ್ಲಿ ಪ್ರಯಾಣಿಸುವುದೂ  ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ.

ಪ್ರತ್ಯೇಕ ಪ್ರಕರಣದಲ್ಲಿ, ಸುಳ್ಯದ ಯುವತಿಯೋರ್ವಳು ಮೆದುಳಿನ ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಇದೀಗ ಮೃತ ಯುವತಿಯ ಕುಟುಂಬಸ್ಥರು ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆ ಅಂಗಾಂಗಗಳನ್ನು ದಾನ ಮಾಡಿ, ಮಾದರಿಯಾಗಿದ್ದಾರೆ.

ಘಟನೆ ನಡೆದದ್ದು ಹೇಗೆ..?

ಮಮತಾ ಎಂಬವರ ಪುತ್ರಿ ಸಿಂಧು ಮೃತಪಟ್ಟ ಯುವತಿ. ಪುತ್ತೂರು ಆದರ್ಶ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದ ಸಿಂಧು ಡಿ. 16 ರಂದು ಪುತ್ತೂರಿನಿಂದ ಸುಳ್ಯಕ್ಕೆ ಬಸ್ ನಲ್ಲಿ ಬರುತ್ತಿದ್ದ ವೇಳೆ ಅಡ್ಡಾರ್ ನಲ್ಲಿ ಬಸ್ನ ಸೀಟಿನಿಂದ ಜಾರಿ ಬಿದ್ದಿದ್ದಾರೆ. ನಂತರ, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ನರದ ಸಮಸ್ಯೆ ಉಂಟಾಗಿರುವುದು ತಿಳಿದುಬಂತು. ಮರುದಿನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫರ್ಸ್ಟ್ ನ್ಯೂರೋ ಆಸ್ಪತ್ರೆಗೆ ಕೊಂಡೊಯ್ದಲಾಗಿತ್ತು. ಮೆದುಳಿನ ರಕ್ತ ಸ್ರಾವ ಉಂಟಾದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ನಂತರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಕೋಮಾಗೆ ಜಾರಿದ್ದರು.

ಯುವತಿಯ ಅಂಗಾಂಗ ದಾನ ಮಾಡಲು ನಿರ್ಧಾರ!

ಇದೀಗ ಈಕೆಯ ಕುಟುಂಬಸ್ಥರು, ಅಂಗಾಂಗಗಳನ್ನು ದಾನ ಮಾಡಲು ಮನೆಯವರು ನಿರ್ಧರಿಸಿದ್ದಾರೆ. ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡರೂ, ಯಂತ್ರಗಳ ಸಹಾಯದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್, ಕಣ್ಣುಗಳನ್ನು ಉಳಿಸಬಹುದಾಗಿದೆ. ಈ ಹಿನ್ನೆಲೆ ತಾಯಿ ಮಮತಾ ಅವರು ಮನೆಯವರೊಂದಿಗೆ ಚರ್ಚಿಸಿ ಅಂಗಾಂಗಗಳನ್ನು ದಾನಮಾಡುವ ನಿರ್ಧಾರ ಮಾಡಿದರು. ಅದರಂತೆ ಮೈಸೂರಿನ ಅಪೊಲೋ ಆಸ್ಪತ್ರೆ ನಿಟ್ಟೆ, ಎ.ಜೆ. ಮತ್ತು ಕೆ.ಎಂ.ಸಿ. ಆಸ್ಪತ್ರೆಗಳಿಗೆ ಅಂಗಾಂಗ ದಾನ ಮಾಡಲಾಗಿತ್ತು. 22 ವರ್ಷ ಸಿಂಧು ಅವರಿಗೆ ತಾಯಿ, ಸಹೋದರಿ ಇದ್ದಾರೆ. ಇವರು, ಸುಳ್ಯದ ಶಾಂತಿನಗರ, ಜಟ್ಟಿಪ್ಪಳ್ಳ ಗಳಲ್ಲಿ ಪತಿ, ಮಕ್ಕಳೊಂದಿಗೆ ವಾಸ್ತವ್ಯದಲ್ಲಿದ್ದರು. ಮಕ್ಕಳಿಗೆ ಶಿಕ್ಷಣ ಕೊಡಿಸಿ ಓರ್ವಳಿಗೆ ಮದುವೆ ಮಾಡಿಸಿದ್ದು, ಸಿಂಧು ಅವರಿಗೆ ಉದ್ಯೋಗ ಕೊಡಿಸಿದ್ದಾರೆ. ಈ ದುಃಖದ ಸನ್ನಿವೇಶದಲ್ಲೂ ಮಗಳ ಅಂಗಾಂಗ ದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಬದುಕು ನೀಡಿದ್ದಾರೆ. ಯುವತಿಯ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

The bus that was going on a trip to Mullaiyanagari overturned!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page