ಭಟ್ಕಳ: Tulu Times | ಅದೆಷ್ಟೋ ಜನ ಯುವಕ ಯುವತಿಯರು ಬೆಂಗಳೂರಿಗೆ ಕನಸು ಹೊತ್ತುಕೊಂಡು ಬಂದು ಜೀವನ ನಡೆಸುತ್ತಾರೆ, ಅದ್ರಲ್ಲಿ ನಿನ್ನೆ ಬಸ್ ಅಪಘಾತದಲ್ಲಿ ಸುಟ್ಟುಕರಕಲಾದ ಯುವತಿ ರಶ್ಮಿಯ ಕಥೆ. ಉಜ್ವಲ ಭವಿಷ್ಯ ಕಟ್ಟಿಕೊಂಡು ಬಂದ ಈ ಹುಡುಗಿ ಗುರು ಸುಧೀಂದ್ರ ಕಾಲೇಜಿನ ಹುಡುಗಿ. ಅಪಘಾತದಲ್ಲಿ ಸುಟ್ಟು ಕರಕಲಾಗಿ ಹೋಗಿದ್ದಾಳೆ.
ರಶ್ಮಿ ಮಹಾಲೆ, ಭಟ್ಕಳದಂಥ ಪುಟ್ಟ ಪಟ್ಟಣದಲ್ಲಿ ಬೆಳೆದು, ವಿದ್ಯಾಭ್ಯಾಸವನ್ನು ಭಟ್ಕಳದಲ್ಲಿಯೇ ಮಾಡಿದ್ದ ಚಿತ್ರದುರ್ಗದ ಹಿರಿಯೂರು ಸಮೀಪ ಜವನಗೊಂಡನಹಳ್ಳಿಯ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ತನ್ನ ಇಬ್ಬರು ಗೆಳತಿಯರಾದ ಗಗನಾ ಹಾಗೂ ರಕ್ಷಿತಾ ಜೊತೆ ಗೋಕರ್ಣಕ್ಕೆ ಹೋಗುತ್ತಿದ್ದ ರಶ್ಮಿ ಮಹಾಲೆ ಸುಟ್ಟು ಕರಕಲಾಗಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಮಧ್ಯೇ ಏನೂ ಇಲ್ಲ,ಒಂದೇ ಹೆಲಿಕಾಪ್ಟರ್ ನಲ್ಲಿ ಪ್ರಯಾಣ!?
ಭಟ್ಕಳದ ಆನಂದ ಆಶ್ರಮ ಕಾನ್ವೆಂಟ್‌ನಲ್ಲಿ 10ನೇ ತರಗತಿಯವರಗೆ ಓದಿ, ನಂತರ ಪಿಯುಸಿಗೆ ಸಿದ್ಧಾರ್ಥ ಪ್ರೀ ಯುನಿವರ್ಸಿಟಿ ಕಾಲೇಜಿನಲ್ಲಿ ಮಾಡಿದ್ದರು. ಕಾಮರ್ಸ್ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದ ರಶ್ಮಿ ನಂತರ ತಮ್ಮ ಬಿಕಾಮ್ ಪದವಿಯನ್ನು ಶ್ರೀ ಗುರು ಸುಧೀಂಧ್ರ ಡಿಗ್ರಿ ಕಾಲೇಜಿನಲ್ಲಿ ಮಾಡಿದ್ದರು. ಕೊನೆಯ ವರ್ಷದ ಪದವಿಯಲ್ಲಿದ್ದಾಗಲೇ ಟಿಸಿಎಸ್ ಕಂಪನಿಯಲ್ಲಿ ಪರೀಕ್ಷೆ ಬರೆದು ಕೆಲಸ ಗಿಟ್ಟಿಸಿಕೊಂಡಿದ್ದರು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ, ನೆಮ್ಮದಿಯ ಜೀವನ ನೋಡಿಕೊಂಡು ಬೆಳೆದಿದ್ದ ರಶ್ಮಿ ಹೊಸ ವರ್ಷದ ಸಂಭ್ರಮವನ್ನು ಸ್ನೇಹಿತರ ಜೊತೆಯಲ್ಲಿ ಆಚರಿಸುವಾಗಲೇ ದುರಂತ ಸಾವು ಕಂಡಿದ್ದಾರೆ.
ಇದನ್ನೂ ಓದಿ: ಶಿಕ್ಷಣ ರಾಜಕೀಯ ಮುಕ್ತವಾಗಬೇಕು: ಬಸವರಾಜ ಬೊಮ್ಮಾಯಿ
ಯೂಟ್ಯೂಬ್ ಚಾನಲ್ ಗಳಿಗೆ ಮಾತನಾಡಿದ್ದ ರಶ್ಮಿ!
ಟಿಎಸ್‌ನಲ್ಲಿನಲ್ಲಿ ಪ್ಲೇಸ್‌ಮೆಂಟ್ ಅವಕಾಶ ಇದೆ ಎಂದಾಗ ನಮ್ಮ ಪ್ರೊಫೆಸರ್ ಅಪ್ಲೈ ಮಾಡುವಂತೆ ನನಗೆ ತಿಳಿಸಿದ್ದರು. ಟಿಸಿಎಸ್ ಆನ್‌ಲೈನ್ ಎಕ್ಸಾಮ್ ಮಾಡ್ತಿದೆ. ಅದಕ್ಕೆ ಅಪ್ಲೈ ಮಾಡು ಎಂದು ಹೇಳಿದ್ದರು. ಅಪ್ಲೈ ಮಾಡಿದ ಬಳಿಕ ನಾನು ನನ್ನದೇ ಆದ ರೀತಿಯಲ್ಲಿ ಇದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದೆ. ಮೊದಲಿಗೆ ಅವರ ಪರೀಕ್ಷೆ ಹೇಗೆ ನಡೆಯುತ್ತದೆ ಅನ್ನೋದು ತಿಳಿದುಕೊಳ್ಳೋದು ಮುಖ್ಯವಾಗಿತ್ತು. ಅದಕ್ಕಾಗಿ ಹಳೆಯ ಯೂಟ್ಯೂಬ್ ವಿಡಿಯೋಗಳನ್ನು ನೋಡಿದೆ ಎಂದು ಹೇಳಿದ್ದರು. ಇದೀಗ ರಶ್ಮಿಯ ಸಾವು ಯಾರಿಗೂ ಊಹಿಸಲಾಗದ ನೋವು ತಂದಿದೆ.
bhatkal-girl-Dream-burnt-to-death-in-a-bus-accident- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











