ಬ್ರೇಕಿಂಗ್ ನ್ಯೂಸ್
ಕರಾವಳಿ

Udupi: ಬಿಡ್ಡಿಂಗ್‌ ಕೆಲಸದ ಆಮಿಷವೊಡ್ಡಿ 29 ಲಕ್ಷ ರೂ. ವಂಚನೆ

Udupi: ದಿನದಿಂದ ದಿನಕ್ಕೆ ಆನ್‌ಲೈನ್‌ ಸ್ಕ್ಯಾಮ್‌ಗಳಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಟೆಲಿಗ್ರಾಮ್‌ ಮೂಲಕ ಚಿನ್ನದ ಉತ್ಪನ್ನಗಳ ಬಿಡ್ಡಿಂಗ್‌ ಕೆಲಸದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಬರೋಬ್ಬರಿ 29 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಉಡುಪಿಯ ಮೂಡುತೋನ್ಸೆ ನಿವಾಸಿಯೊಬ್ಬರು ಹಣಕಳೆದುಕೊಂಡವರು. ಟೆಲಿಗ್ರಾಮ್‌ ಮೂಲಕ ಚಿನ್ನದ ಪ್ರಾಡಕ್ಟ್‌ಗಳ ಬಿಡ್ಡಿಂಗ್‌ ಕೆಲಸದ ಆಮಿಷವೊಡ್ಡಿ 29,68,973 ವಂಚನೆ ಮಾಡಲಾಗಿದೆ.

ಟೆಲಿಗ್ರಾಮ್‌ನಲ್ಲಿ ಬಂದ ಮೆಸೇಜ್‌ ನಂಬಿ ಅವರು, ಸೆ. 18ರಿಂದ ಅ. 10 ವರೆಗೆ ಹಂತಹಂತವಾಗಿ ಅಪರಿಚಿತ ಕೊಟ್ಟ ವಿವಿಧ ಬ್ಯಾಂಕ್‌ ಅಕೌಂಟ್‌ಗಳಿಗೆ ಹಣ ವರ್ಗಾಯಿಸಿದ್ದಾರೆ. ನಂತರ ಲಾಭದ ಹಣ ಹಿಂದುರುಗಿಸದೆ ವಂಚನೆ ಮಾಡಿದ್ದಾರೆ. ಈ ಕುರಿತು ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Surathkal: ಬಾಲಕಿಯ ಮೇಲೆ ದಾಳಿಗೈದ ಬೀದಿನಾಯಿಗಳು


ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 30

You cannot copy content of this page