ಸಿನಿಮಾ: Tulu Times | ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಮಾರ್ಕ್ ಸಿನಿಮಾದ ಒಟ್ಟು ಗಳಿಕೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ. ಕಳೆದ ವರ್ಷ ಮ್ಯಾಕ್ಸ್ ಮೂಲಕ ಗೆದ್ದಿದ್ದ ಈ ಜೋಡಿ ಈ ಬಾರಿ ಅಂತಹದ್ದೇ ಪ್ರಯತ್ನ ಮಾಡಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಮಧ್ಯೇ ಏನೂ ಇಲ್ಲ,ಒಂದೇ ಹೆಲಿಕಾಪ್ಟರ್ ನಲ್ಲಿ ಪ್ರಯಾಣ!?
ಮೊದಲ ದಿನ ಮಾರ್ಕ್ ಗಳಿಕೆ ಎಷ್ಟು..?
ಒಂದೇ ದಿನ ಮಾರ್ಕ್ ಹಾಗೂ ಕನ್ನಡದ ಮತ್ತೊಂದು ಸ್ಟಾರ್ ಸಿನಿಮಾ 45 ಬಿಡುಗಡೆಯಾದ ಕಾರಣ ಈ ಎರಡೂ ಚಿತ್ರಗಳಿಗೂ ಸಾಮಾನ್ಯ ಪ್ರದರ್ಶನಗಳು ಲಭಿಸಿದ್ದವು. ಹೀಗಾಗಿ ಮೊದಲ ದಿನ ಮಾರ್ಕ್‌ಗೆ ನಿರೀಕ್ಷಿಸಿದ್ದ ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಪ್ರದರ್ಶನಗಳು ಸಿಕ್ಕಿಲ್ಲ. ಮಾರ್ಕ್ ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ತಮಿಳುನಾಡಿನಲ್ಲಿ ಮಾರ್ಕ್ ತಮಿಳು ಡಬಿಂಗ್ ಸಹ ಬಿಡುಗಡೆಯಾಗಿದೆ. ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾದ ಪರಿಣಾಮ ಮಾರ್ಕ್ ಮೊದಲ ದಿನ ಹೇಳಿಕೊಳ್ಳುವ ಗಳಿಕೆ ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರು ನಗರದಲ್ಲಿ ಒಟ್ಟು 471 ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಬಾಕ್ಸ್‌ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ಮಾರ್ಕ್ ಮೊದಲ ದಿನದ ಗಳಿಕೆಯನ್ನು ಪ್ರಕಟವಾಗಿದೆ. ಮೊದಲ ದಿನ ಅಂದಾಜು 6.28 ಕೋಟಿ ರೂ ನೆಟ್ ಗಳಿಕೆ ಮಾಡಿದೆ. ಇದು ನೆಟ್ ಕಲೆಕ್ಷನ್ ಆಗಿದ್ದು ಗ್ರಾಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಹತ್ತಿರತ್ತಿರ 8 ಕೋಟಿ ಗಳಿಕೆ ಆದಂತಾಗಲಿದೆ.
ಇದನ್ನೂ ಓದಿ: ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ವರ್ತಮಾನವನ್ನು ಮರೆಸದಿರಲಿ
ಮಾರ್ಕ್ ಸಿನಿಮಾಗೆ ಪೈರಸಿ ಕಾಟ!
ಕಿಚ್ಚನ ಅಭಿಮಾನಿಗಳು ಹಬ್ಬ ಮಾಡ್ತಿದ್ದಾರೆ. ಆದ್ರೆ, ಇನ್ನೊಂದು ಕಡೆ ಚಿತ್ರತಂಡಕ್ಕೆ ದೊಡ್ಡ ಶಾಕ್ ಕಾದಿತ್ತು. ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ಇಡೀ ಸಿನಿಮಾ ಪೈರಸಿ ಆಗಿ ಮೊಬೈಲ್ ಫೋನ್ಗಳಲ್ಲಿ ಹರಿದಾಡ್ತಿದೆ. ಸುದೀಪ್ ಅವರು ಯಾವ ಯುದ್ಧದ ಬಗ್ಗೆ ಮಾತಾಡಿದ್ರೋ, ಆ ಯುದ್ಧದಲ್ಲಿ ಮೊದಲ ದಿನವೇ ಭಾರೀ ಹಿನ್ನಡೆಯಾಗಿದೆ.
Do you know what the first day collection of the movie Mark was?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











