ಪುತ್ತೂರು : Tulu Times | ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗುತ್ತಿನ ಶ್ರೀ ಜಟಾಧಾರಿ ಮತ್ತು ಪರಿವಾರ ದೈವಗಳ ಧರ್ಮಚಾವಡಿಯ ಸಮಾಲೋಚನಾ ಸಭೆ ಇಂದು (ಡಿಸೆಂಬರ್ 25) ನಡೆಯಲಿದೆ.
ಪೂರ್ವ ಸಿದ್ಧತೆಯ ಬಗ್ಗೆ ಸಮಾಲೋಚನಾ ಸಭೆ :
ಶ್ರೀ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ, ಫೆಬ್ರವರಿ 25, 2026 ರಿಂದ ಮಾರ್ಚ್ 01 ರವರೆಗೆ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಳ ಬಗ್ಗೆ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿರುತ್ತದೆ.
ಇಂದು ಈ ಸಭೆಯು ಸಂಜೆ 4 ಗಂಟೆಯಿಂದ ಬೆಟ್ಟಂಪಾಡಿ ಗುತ್ತು ಮನೆಯ ವಠಾರದಲ್ಲಿ ನಡೆಸಲಾಗುವುದು ಎಂದು ವರದಿಯಾಗಿದೆ.
ಈ ಸಭೆಗೆ ಬೆಟ್ಟಂಪಾಡಿ ಕುಟುಂಬದ ಸರ್ವರು ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ, ಬೆಟ್ಟಂಪಾಡಿ ಗುತ್ತು ಕುಟುಂಬಸ್ಥರು ಹಾಗೂ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಜೀರ್ಣೋದ್ದಾರ ಸಮಿತಿಯು ಈ ಮೂಲಕ ಮನವಿ ಮಾಡಿಕೊಂಡಿರುತ್ತಾರೆ ಎಂದು ವರದಿಯಾಗಿದೆ.
Consultation meeting of the Dharmachavadi of Sri Jatadhari and Parivar Daivas – ತುಳು ಟೈಮ್ಸ್
ಇದನ್ನೂ ಓದಿ :ಡಿಸೆಂಬರ್ 22 ‘ಗಣಿತ ದಿನ’ : ಗಣಿತದ ಆಸಕ್ತಿ ಹೆಚ್ಚಿಸುವುದು ಈ ದಿನದ ಮುಖ್ಯ ಉದ್ದೇಶ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Qg7ctTd7pfY?si=IDkF0fD38uBlvajW











