ಕಳ್ಳತನ : Tulu Times | ತಂತ್ರಜ್ಞಾನ ಬೆಳೆದಂತೆಲ್ಲಾ ಅಪರಾಧಿಗಳು ಕೂಡ ಅಷ್ಟೇ ಅಪ್‌ಡೇಟ್ ಆಗುತ್ತಿದ್ದಾರೆ. ದಿನಕ್ಕೊಂದು ತಂತ್ರಗಳು, ಗಳಿಗೆಗೊಂದು ಯೋಜನೆ ಹಾಕ್ತಿರೋ ಕಳ್ಳರ ತಂಡ ಎಷ್ಟಿವೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆದ್ರೆ ಇಲ್ಲೊಂದು ತಂಡ ಗೂಗಲ್ ಮ್ಯಾಪ್ ಮೂಲಕ ಕಳ್ಳತನ ದಾರಿ ಹಿಡಿದಿದ್ದರು.
ಗೂಗಲ್ ಮ್ಯಾಪ್ ಮೂಲಕ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಬಿಹಾರ ಮೂಲದ ಅಂತರರಾಜ್ಯ ಕಳ್ಳರ ತಂಡವನ್ನು ಜಮ್‌ಶೆಡ್‌ಪುರ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ಮೂರು ರಾಜ್ಯಗಳಲ್ಲಿ ಈ ಗ್ಯಾಂಗ್ ತನ್ನ ಕೈಚಳಕ ತೋರಿಸುತ್ತಿತ್ತು. ಹೀಗೂ ಕೂಡಾ ಕಳ್ಳತನ ಮಾಡ್ಬೋದು ಅನ್ನೋದಕ್ಕೆ ಈ ತಂಡ ಸಾಕ್ಷಿಯಾಗಿದೆ.
ಯಾವುದೇ ಪರಿಚಿತರಿಲ್ಲದ ನಗರಕ್ಕೆ ಭೇಟಿ ನೀಡುತ್ತಿದ್ದ ಕಳ್ಳರು ;
ಈಗಾಗಲೇ ಬಂಧಿತರಾದವರಿಂದ ಮಾರಕಾಸ್ತ್ರಗಳ ವಶ ಮಾಡಲಾಗಿದ್ದು, ಪಿಸ್ತೂಲ್, ಜೀವಂತ ಗುಂಡುಗಳು, ಕಳವು ಮಾಡಲಾಗಿದ್ದ ಬಂಗಾರದ ಆಭರಣಗಳು ಹಾಗೂ ಮನೆ ಮುರಿಯಲು ಬಳಸುತ್ತಿದ್ದ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ತಂಡಕ್ಕೆ ಸ್ಥಳೀಯವಾಗಿ ಯಾರಾದರೂ ಸಹಾಯ ಮಾಡುತ್ತಿದ್ದರೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೂಗಲ್ ಮ್ಯಾಪ್ ಬಳಸಿ ಸ್ಕೆಚ್ ಮಾಡ್ತಿದ್ದ ಈ ತಂಡ ನಿಜಕ್ಕೂ ವಿಶೇಷ. ಯಾವುದೇ ಪರಿಚಿತರಿಲ್ಲದ ನಗರಕ್ಕೆ ಭೇಟಿ ನೀಡುತ್ತಿದ್ದ ಈ ಕಳ್ಳರು, ಗೂಗಲ್ ಮ್ಯಾಪ್ ಮೂಲಕ ಜನವಸತಿ ಪ್ರದೇಶಗಳಲ್ಲಿರುವ ಐಷಾರಾಮಿ ಮನೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಹೀಗೆ ಸ್ಕೆಚ್ ಹಾಕಿದ ನಂತರ ರಾತ್ರಿ ವೇಳೆ ಕಳ್ಳತನ ಎಸಗುತ್ತಿದ್ದರು. ಕಳ್ಳತನ ಮಾಡಿದ ತಕ್ಷಣ ಯಾರಿಗೂ ಅನುಮಾನ ಬರದಂತೆ ಅದೇ ವೇಗದಲ್ಲಿ ಆ ನಗರವನ್ನು ಬಿಟ್ಟು ಪಾರಾಗುತ್ತಿದ್ದರು. ಈ ಮೂಲಕ ಮೂರು ರಾಜ್ಯಗಳಲ್ಲಿ ಒಟ್ಟು ಆರು ದೊಡ್ಡ ಮನೆಗಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
Did the Kadeema use Google Maps to commit theft? – ತುಳು ಟೈಮ್ಸ್
ಇದನ್ನೂ ಓದಿ :ವಿಟ್ಲ: ಬಾಂಗ್ಲಾ ದೇಶದ ಪ್ರಜೆಗೆ ಪಾಸ್ ಪೋರ್ಟ್ ಗೆ ಸಹಾಯ ಮಾಡಿದಾದ ಅರೆಸ್ಟ್ !
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/FGONMu5gqxQ?si=QFAo0VHBqtafBDpX











