ಬ್ರೇಕಿಂಗ್ ನ್ಯೂಸ್
ದೇಶ

ಚೀನಾದ ಸಾಗರದಲ್ಲಿದೆ 20 ಕೋಟಿ ಟನ್ ಚಿನ್ನ

ಚಿನ್ನದ ಬೆಲೆ : Tulu Times | 2025 ರಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರಿಗೆ ದೂರದ ಬೆಟ್ಟದಂತೆ ಭಾಸವಾಗಿದೆ. ಹೌದು… 10 ಗ್ರಾಂ ಚಿನ್ನದ ಬೆಲೆ 1 ಲಕ್ಷದ 36 ಸಾವಿರ ರೂ. ದಾಟಿದೆ. ಇನ್ನೇನು 2026 ರಲ್ಲಿ ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹೀಗೆ ಚಿನ್ನದ ಬೆಲೆ ಏರುತ್ತಾ ಇರಬೇಕಾದರೆ ಚೀನಾದಲ್ಲಿ ಚಿನ್ನದ ಗಣಿಯೇ ಸಿಕ್ಕಿದೆ ಎಂಬುದು ಮಾಧ್ಯಮದಲ್ಲಿ ವರದಿಯಾಗಿದೆ.

ಚೀನಾ ಸಾಗರದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, 20 ಕೋಟಿ ಟನ್ ಚಿನ್ನ ಈ ಸಾಗರದಲ್ಲಿ ಅಡಗಿದೆ ಎಂದು ಹೇಳಲಾಗಿದೆ. ಈ ಬಂಗಾರದ ಹುಡುಕಾಟಕ್ಕಾಗಿ ಚೀನಾ 5 ಲಕ್ಷ ಕೋಟಿ ವೆಚ್ಚವನ್ನು ಮಾಡಿತ್ತು. ಅಲ್ಲದೇ ಎರಡು ತಿಂಗಳಲ್ಲಿ 3 ಚಿನ್ನದ ನಿಕ್ಷೇಪವನ್ನು ಶೋಧಿಸಲಾಗಿತ್ತು. ಇದು ಪ್ರಪ್ರಥಮ ಬಾರಿಗೆ ಚೀನಾ ಸಮುದ್ರದಲ್ಲಿ ಚಿನ್ನ ಪತ್ತೆಯಾಗಿದ್ದು, ಚೀನಾ ಶಂಡಾಂಗ್ ನ ಲೈಝೋ ನಗರದ ಕಡಲಿನಲ್ಲಿ ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಚಿನ್ನದ ಮೇಲಿನ ಆಸಕ್ತಿ ಇನ್ನೂ ಮುಂದುವರಿದಿದೆ ;

ನಮ್ಮಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ,‌ ಡಿಸೆಂಬರ್ 22 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,528 ರೂಪಾಯಿ ಇದ್ದು, ಇಂದು 110 ರೂಪಾಯಿ ಏರಿಕೆ ಆಗಿದೆ. ಚಿನ್ನವು ಭಾರತೀಯ ಸಂಸ್ಕೃತಿಯಲ್ಲಿ ಆಭರಣ ಮಾತ್ರವಲ್ಲ, ಭದ್ರ ಹೂಡಿಕೆಯ ರೂಪದಲ್ಲಿಯೂ ಪರಿಗಣಿಸಲ್ಪಡುವುದರಿಂದ ಅದರ ಬೆಲೆಯ ಏರಿಳಿತಗಳು ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತವೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಮದುವೆ ವೆಚ್ಚ ಹೆಚ್ಚಾಗಿದ್ದು, ಕೆಲವರು ಕಡಿಮೆ ತೂಕದ ಆಭರಣಗಳತ್ತ ಮುಖ ಮಾಡುತ್ತಿದ್ದಾರೆ. ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯೆಂದು ಪರಿಗಣಿಸುತ್ತಿರುವುದರಿಂದ ಚಿನ್ನದ ಮೇಲಿನ ಆಸಕ್ತಿ ಇನ್ನೂ ಮುಂದುವರಿದಿದೆ.

ತಜ್ಞರ ಅಭಿಪ್ರಾಯದಂತೆ ಜಾಗತಿಕ ಆರ್ಥಿಕ ಸ್ಥಿರತೆ ಸಿಗುವವರೆಗೆ ಚಿನ್ನದ ಬೆಲೆ ಹೆಚ್ಚಿನ ಮಟ್ಟದಲ್ಲೇ ಉಳಿಯುವ ಸಾಧ್ಯತೆ ಇದೆ. ಆದ್ದರಿಂದ ಗ್ರಾಹಕರು ಮತ್ತು ಹೂಡಿಕೆದಾರರು ಚಿನ್ನ ಖರೀದಿಸುವ ಮೊದಲು ಮಾರುಕಟ್ಟೆಯ ಸ್ಥಿತಿಯನ್ನು ಗಮನಿಸುವುದು ಅಗತ್ಯ.

200 million tons of gold in China’s oceans – ತುಳು ಟೈಮ್ಸ್

ಇದನ್ನೂ ಓದಿ :ಕೊಡಗು ಗಡಿ ಪ್ರದೇಶವಾಗಿರುವ ಚೆಂಬು ಗ್ರಾಮದಲ್ಲಿ ಅಕ್ವಾನಿಶ್ ಬೆವರೇಜಸ್ ಪ್ರೈವೇಟ್‌ ಲಿಮಿಟೆಡ್ ಉದ್ಘಾಟನೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/FGONMu5gqxQ?si=kJh2m095QefdUwmU

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page