ಬೆಂಗಳೂರು: Tulu Times | ಮೇರು ವ್ಯಕ್ತಿತ್ವದ ಆಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಬದುಕಿನ, ಅವರ ಜೀವನ ಮೌಲ್ಯಗಳನ್ನು ದೇಶಾದ್ಯಂತ ಪಸರಿಸಲು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಾರ್ಕ್ ಪ್ರೀ-ರಿಲೀಸ್ ಇವೆಂಟ್…ನಾವು ಯುದ್ಧಕ್ಕೆ ಸಿದ್ದ ಎಂದ ಕಿಚ್ಚ ಸುದೀಪ್!
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ವಾಜಪೇಯಿಯವರ ಜೀವನ, ಕಾರ್ಯಗಳ ಪರಿಚಯಕ್ಕೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು. ಅಟಲ್ ಜೀ ಅವರು ದೇಶ ಕಂಡ ಮಹಾನ್ ರಾಜನೀತಿಜ್ಞ ಎಂದು ತಿಳಿಸಿದರು. ಆಜಾತಶತ್ರು, ಈ ದೇಶದ ನೆಚ್ಚಿನ ಪ್ರಧಾನಿ ಆಗಿದ್ದವರು. ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿ ಜಗತ್ತಿನ ಗಮನ ಸೆಳೆದವರು ಎಂದು ವಿವರಿಸಿದರು.
ಇದನ್ನೂ ಓದಿ: ಡಿಸೆಂಬರ್ 22 ‘ಗಣಿತ ದಿನ’ : ಗಣಿತದ ಆಸಕ್ತಿ ಹೆಚ್ಚಿಸುವುದು ಈ ದಿನದ ಮುಖ್ಯ ಉದ್ದೇಶ
ಪ್ರಧಾನಿ ಆಗಿದ್ದಾಗ ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟು, ಮೊದಲ ಬಾರಿಗೆ ಸುವರ್ಣ ಚತುಷ್ಪಥ ಎಂಬ ಅದ್ಭುತವಾದ ಸಂಪರ್ಕ ವ್ಯವಸ್ಥೆ ನಿರ್ಮಿಸಿದ್ದರು. ದಿಟ್ಟತನದ ನಿರ್ಣಯಗಳ ಜೊತೆ ದೇಶದ ಅಣುನೀತಿ ಪರಿಷ್ಕರಿಸಿದ ಕೀರ್ತಿ ಪಡೆದವರು ಎಂದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ದೇಶದ ಉದ್ದಗಲದಲ್ಲಿ ಗುಣಮಟ್ಟದ ರಸ್ತೆ ನಿರ್ಮಸಿದ್ದಾರೆ ಎಂದು ವಿವರಿಸಿದರು. ಶಿಕ್ಷಣದ ಕಡೆಗಣನೆ ಸಂದರ್ಭದಲ್ಲಿ ಸರ್ವ ಶಿಕ್ಷಾ ಅಭಿಯಾನದ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಟ್ಟವರು. ಮೌಲ್ಯಾಧಾರಿತ ರಾಜಕಾರಣಕ್ಕೆ ಆದ್ಯತೆ ಕೊಟ್ಟವರು ಎಂದು ತಿಳಿಸಿದರು. ವಿಚಾರಗೋಷ್ಠಿ, ಚರ್ಚಾಸ್ಪರ್ಧೆ, ಪ್ರದರ್ಶಿನಿ ಇರುತ್ತದೆ ಎಂದರು.
ಇದನ್ನೂ ಓದಿ: ರಾಜ್ಯಾದ್ಯಂತ ಡಿ. 21 ರಿಂದ 24 ವರೆಗೆ ಪಲ್ಸ್ ಪೋಲಿಯೋ ಲಸಿಕೆ
ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಮಾತನಾಡಿ, ಒಂದು ವರ್ಷ ಕಾಲ ಅಟಲ್‍ಜೀ ಜೀವನದ ವಿಚಾರಧಾರೆಗಳನ್ನು ಇಂದಿನ ಯುವಕರಿಗೆ, ಜನತೆಗೆ ತಿಳಿಸಲಾಗಿದೆ. ಸುಶಾಸನ ದಿನವನ್ನು ರಾಜ್ಯಾದ್ಯಂತ ಸೇವಾದಿನವಾಗಿ ಆಚರಿಸಿದ್ದೇವೆ. ಅಟಲ್ ಜೀ ಅವರ ಒಡನಾಡಿಗಳ, ಅವರ ಕರ್ನಾಟಕದ ನಂಟಿನ ವಿವರ ಸಂಗ್ರಹ ಮಾಡಿದ್ದೇವೆ. 350ಕ್ಕೂ ಹೆಚ್ಚು ಹಿರಿಯ ಕಾರ್ಯಕರ್ತರನ್ನು ಇದಕ್ಕಾಗಿ ಭೇಟಿ ಮಾಡಿದ್ದೇವೆ. ಎಲ್ಲ ಪತ್ರ, ಸ್ಮರಣಿಕೆ ಸಂಗ್ರಹ ನಡೆಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕೊಡಗು ಗಡಿ ಪ್ರದೇಶವಾಗಿರುವ ಚೆಂಬು ಗ್ರಾಮದಲ್ಲಿ ಅಕ್ವಾನಿಶ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ಉದ್ಘಾಟನೆ
ಅಟಲ್ ಜೀ ವೃಕ್ಷ ಎಂಬ ಸಸಿ ನೆಡುವ ಕಾರ್ಯಕ್ರಮವು ರಾಜ್ಯದ ವೈಶಿಷ್ಟ್ಯ. ವಿಧಾನಸಭಾ ಕ್ಷೇತ್ರದ ಒಂದು ಶಾಲೆಯಲ್ಲಿ 10 ಸಸಿ ನೆಡುವ ಕಾರ್ಯ ಇದಾಗಿದೆ ಎಂದು ತಿಳಿಸಿದರು. 224 ಕ್ಷೇತ್ರಗಳಲ್ಲಿ 2240 ಸಸಿ ನೆಟ್ಟು 3 ವರ್ಷ ಸಂರಕ್ಷಿಸಿ, ಸಸಿಯನ್ನು ವೃಕ್ಷವನ್ನಾಗಿ ಮಾಡುವ ಕಾರ್ಯವನ್ನು ಅದೇ ಶಾಲೆ ವಿದ್ಯಾರ್ಥಿಗಳಿಗೆ ನೀಡುವ ಮಹತ್ವದ ಕಾರ್ಯ ಇದೆಂದು ವಿವರಿಸಿದರು.
ಇದನ್ನೂ ಓದಿ: ಕೋಳಿ ಅಂಕಕ್ಕೆ ಪ್ರಚೋದನೆ: ಅಶೋಕ್ ರೈ ವಿರುದ್ಧ ಎಫ್‌ಐಆರ್
ಸಸಿಗಳು ಸಿದ್ಧವಿದ್ದು, ಶಾಲೆಗಳನ್ನೂ ಗುರುತಿಸಲಾಗಿದೆ. 25ರಿಂದ 31ರವರೆಗೆ ಇದನ್ನು ನಡೆಸುತ್ತೇವೆ ಎಂದರು. ಬೆಂಗಳೂರು ಬಿಜೆಪಿಯ 3 ಜಿಲ್ಲೆಗಳ ನೇತೃತ್ವದಲ್ಲಿ ಜಗನ್ನಾಥ ಭವನದಲ್ಲಿ ಒಂದು ದೊಡ್ಡ ಆರೋಗ್ಯ ತಪಾಸಣಾ ಶಿಬಿರವನ್ನು ನಾವು ನಡೆಸಲಿದ್ದೇವೆ. ಅತಿ ಹೆಚ್ಚು ರಕ್ತದಾನ ಮಾಡುವ ಶಿಬಿರ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಯಾನ್ಸರ್ ತಪಾಸಣೆಯನ್ನು ಈ ಶಿಬಿರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಹಿಂದಿನ ನಗರ ಕಚೇರಿ ಇದ್ದ ಭಾವುರಾವ್ ದೇಶಪಾಂಡೆ ಭವನದಲ್ಲಿ ಅಟಲ್ ಗ್ರಂಥಾಲಯ ಉದ್ಘಾಟನೆ ನೆರವೇರಿಸಲಿದ್ದೇವೆ ಎಂದರು.
ಇದನ್ನೂ ಓದಿ: ಪೋಷಕರೇ ಗಮನಿಸಿ ‘ಒಂದು ಮಗು ಕೂಡಾ ತಪ್ಪಬಾರದು’ : ನಾಳೆ (ಡಿ.21) ಪಲ್ಸ್ ಪೋಲಿಯೋ ದಿನ
ಅಟಲ್ ಅವರ ಕನಸಿನ ಕೂಸು ಹೆದ್ದಾರಿಗಳಲ್ಲಿ ಸಿಹಿ ಹಂಚುವ ಕಾರ್ಯ ನಡೆಯಲಿದೆ. ಗ್ರಾಮ ಸಡಕ್ ಯೋಜನೆ ಜಾರಿಯಾದ ಕಡೆಗಳಲ್ಲಿ ಅಟಲ್ ನಡಿಗೆ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ ಕಾರ್ಕಳದಲ್ಲಿ 10 ಸಾವಿರ ಕಾರ್ಯಕರ್ತರ, ಹಿತೈಷಿಗಳ ಸಮ್ಮೇಳನ ಇದೇ 25ರಂದು ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಕಿರುಷಷ್ಠಿ
2240 saplings protected under Atal Jee Vriksha Yojana- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











