ಗಣಿತ ದಿನ : Tulu Times | ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಗಣಿತವಿಲ್ಲದೆ ದಿನ ಮುಂದಕ್ಕೇ ಹೋಗೋದಿಲ್ಲ. ವಿಶೇಷವಾಗಿ ಈ ದಿನ ಅಂದ್ರೆ ಡಿಸೆಂಬರ್ 22 ನ್ನು ಗಣಿತ ದಿನ ಎಂದು ಕರೆಯಲಾಗುತ್ತದೆ. ಈ ರಾಷ್ಟ್ರೀಯ ಗಣಿತ ದಿನದಂದು ಕೆಲ ಶಾಲೆಗಳು, ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಗಣಿತ ಕ್ವಿಜ್, ಪ್ರಬಂಧ ಸ್ಪರ್ಧೆ, ಉಪನ್ಯಾಸ, ಕಾರ್ಯಾಗಾರಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗಣಿತದ ಭಯ ಕಡಿಮೆಯಾಗಿ, ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯ ವೃದ್ಧಿಯಾಗುತ್ತದೆ.
ಪ್ರತಿ ವರ್ಷ ಡಿಸೆಂಬರ್ 22ರಂದು ಭಾರತದಲ್ಲಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಭಾರತದ ಮಹಾನ್ ಗಣಿತಜ್ಞ ಶ್ರೀನಿವಾಸ ರಾಮಾನುಜನರ ಜನ್ಮದಿನದ ನೆನಪಿಗಾಗಿ ಆಚರಣೆ ಮಾಡಲಾಗುತ್ತದೆ. ಗಣಿತ ಕ್ಷೇತ್ರಕ್ಕೆ ರಾಮಾನುಜನರು ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿ, ಯುವಜನರಲ್ಲಿ ಗಣಿತದ ಆಸಕ್ತಿ ಹೆಚ್ಚಿಸುವುದು ಈ ದಿನದ ಮುಖ್ಯ ಉದ್ದೇಶವಾಗಿರುತ್ತದೆ.
ಗಣಿತವು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗ. ಸಮಯ ಗಣನೆ, ಹಣ ವ್ಯವಹಾರ, ತಂತ್ರಜ್ಞಾನ, ವಿಜ್ಞಾನ, ವಾಣಿಜ್ಯ ಎಲ್ಲ ಕ್ಷೇತ್ರಗಳಿಗೂ ಗಣಿತವೇ ಆಧಾರ. ಆದ್ದರಿಂದ ರಾಷ್ಟ್ರೀಯ ಗಣಿತ ದಿನವು ಗಣಿತದ ಮಹತ್ವವನ್ನು ಜನರಿಗೆ ತಿಳಿಸಿ, ಮುಂದಿನ ಪೀಳಿಗೆಯಲ್ಲಿ ಗಣಿತಜ್ಞರನ್ನು ರೂಪಿಸುವ ಪ್ರೇರಣೆಯ ದಿನವಾಗಿದೆ. ಒಟ್ಟಿನಲ್ಲಿ, ರಾಷ್ಟ್ರೀಯ ಗಣಿತ ದಿನವು ಕೇವಲ ರಾಮಾನುಜನರ ಸ್ಮರಣೆ ಮಾತ್ರವಲ್ಲ, ಗಣಿತದ ಸೌಂದರ್ಯ ಮತ್ತು ಅದರ ಅಗತ್ಯತೆಯನ್ನು ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಮಹತ್ವದ ದಿನವಾಗಿದೆ.
ಶ್ರೀನಿವಾಸ ರಾಮಾನುಜನರ ವಿಶೇಷತೆ ಏನಂದ್ರೆ, ಅವರು ಯಾವುದೇ ಅಧಿಕೃತ ಗಣಿತ ಶಿಕ್ಷಣವಿಲ್ಲದೇ ಅನೇಕ ಸೂತ್ರಗಳು, ಸಿದ್ಧಾಂತಗಳನ್ನು ಕಂಡುಹಿಡಿದಿದ್ದರು. ಸಂಖ್ಯೆ ಸಿದ್ಧಾಂತ, ಅನಂತ ಸರಣಿ, ವಿಭಜನಾ ಸಿದ್ಧಾಂತ ಮುಂತಾದ ಕ್ಷೇತ್ರಗಳಲ್ಲಿ ಅವರ ಸಾಧನೆ ಜಗತ್ತಿನ ಗಣಿತಜ್ಞರನ್ನು ಅಚ್ಚರಿಗೊಳಿಸಿತು. ಇಂದಿಗೂ ಅವರ ಅನೇಕ ಸೂತ್ರಗಳು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಬಳಸಲಾಗುತ್ತಿವೆ ಅನ್ನೋದೇ ಹೆಮ್ಮೆಯ ವಿಚಾರ.
December 22nd is ‘Mathematics Day’: The main objective of this day is to increase interest in mathematics – ತುಳು ಟೈಮ್ಸ್
ಇದನ್ನೂ ಓದಿ :ಫ್ಯಾನ್ಸ್ ವಾರ್ ಮತ್ತೆ ಶುರು..? ದಚ್ಚು.. ಕಿಚ್ಚ ಫ್ಯಾನ್ಸ್ ಗಲಾಟೆಗೆ ಕಾರಣ ಏನು..?
——-
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/FGONMu5gqxQ?si=kJh2m095QefdUwmU











