ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕಧಾರ್ಮಿಕ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಕಿರುಷಷ್ಠಿ

ಕುಕ್ಕೆ ಸುಬ್ರಹ್ಮಣ್ಯ: Tulu Times |ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯ  ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವ ಆರಂಭವಾಗಲಿದ್ದು, ಡಿ.26ರ ವರೆಗೆ ನಡೆಯಲಿದೆ.

ಅನ್ಯಧರ್ಮೀಯರನ್ನ ಆಹ್ವಾನಿಸಿರೋದಕ್ಕೆ ಭಾರೀ ವಿರೋಧ!

ಇನ್ನು ಕಿರುಷಷ್ಠಿಮಹೋತ್ಸವಕ್ಕೆ ಅನ್ಯಧರ್ಮೀಯರನ್ನ ಆಹ್ವಾನಿಸಿರೋದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು,  ಇದೀಗ ವಿವಾದಕ್ಕೆ ಕಾರಣವಾಗಿದೆ.  ಧರ್ಮಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಶಿಷ್ಟಾಚಾರದಂತೆ ಅನ್ಯಧರ್ಮೀಯರನ್ನೂ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ  ಅನ್ಯಧರ್ಮೀಯರನ್ನು  ಆಹ್ವಾನಿಸಿರೋದು ಸರಿಯಲ್ಲ, ತಕ್ಷಣ ಅದನ್ನು ತಡೆಯಬೇಕೆಂದು ಕ್ಷೇತ್ರ ಸಂರಕ್ಷಣಾ ವೇದಿಕೆಯಿಂದ ಕ್ಷೇತ್ರದ ಆಡಳಿತಾಧಿಕಾರಿಗೆ ಮನವಿ ನೀಡಲಾಗಿದೆ.

ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸೋ ಎಚ್ಚರಿಕೆ!

ಕುಕ್ಕೆ ಮುಜರಾಯಿ ಇಲಾಖೆಯ ಅಧೀನದಲ್ಲಿರೋದ್ರಿಂದ ಸರ್ಕಾರದ ಶಿಷ್ಟಾಚಾರ ಪ್ರಕಾರ ಎಲ್ಲರನ್ನು ಆಹ್ವಾನಿಸಲಾಗಿದೆ. ಅದರಲ್ಲಿ ಅನ್ಯಧರ್ಮಿಯರಾದ ಸ್ಪೀಕರ್ ಯು.ಟಿ.ಖಾದರ್, ಎಂಎಲ್‌ಸಿ ಐವನ್ ಡಿಸೋಜಾ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಫೂರ್, ಕನಿಷ್ಠ ವೇತಾತ ಸಲಹಾ ಮಂಡಳಿ ಅಧ್ಯಕ್ಷ ಶಹೀದ್ ತೆಕ್ಕಿಲ್, ಕೊಂಕಣಿ ಸಾಹಿತ್ಯ ಅಕಾಡಮಿಯ ಜೋಕಿಂ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಶಾಲೆಟ್ ಪಿಂಟೋಗೆ ಆಹ್ವಾನ ನೀಡಲಾಗಿದೆ. ಆಹ್ವಾನ ವಾಪಸ್ ಪಡೆಯದೇ ಇದ್ದರೆ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.

ಸುಬ್ರಹ್ಮಣ್ಯ ಷಷ್ಠಿಯು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಭಕ್ತರು ಉಪವಾಸ ಮತ್ತು ಪೂಜೆಗಳನ್ನು ಆಚರಿಸುತ್ತಾರೆ ಮತ್ತು ಕುಕ್ಕೆ ಸುಬ್ರಹ್ಮಣ್ಯದಂತಹ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಸುಬ್ರಹ್ಮಣ್ಯ ಕಿರುಷಷ್ಠಿಯನ್ನು ಸಾಮಾನ್ಯವಾಗಿ ಮಾರ್ಗಶಿರ ಮಾಸದ ಚಂಪಾಷಷ್ಠಿಯ ಒಂದು ತಿಂಗಳ ನಂತರ, ಅಂದರೆ ಪುಷ್ಯ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಆಚರಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದು ಬಹಳ ಪ್ರಸಿದ್ಧವಾದ ಉತ್ಸವವಾಗಿದೆ.

ಸುಬ್ರಹ್ಮಣ್ಯ ಕಿರುಷಷ್ಠಿ ಕಥೆಯೇನು..?

ಸುಬ್ರಹ್ಮಣ್ಯ ಸ್ವಾಮಿಯು ತಾರಕಾಸುರನಂತಹ ದುಷ್ಟ ರಾಕ್ಷಸರನ್ನು ಸಂಹರಿಸಿ ವಿಜಯ ಸಾಧಿಸಿದ ಸಂಕೇತವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ನಾಗದೋಷ, ಸರ್ಪದೋಷ ಮತ್ತು ಕುಜದೋಷ (ಮಂಗಳ ದೋಷ) ಇರುವವರು ಈ ದಿನ ಸುಬ್ರಹ್ಮಣ್ಯನ ಆರಾಧನೆ ಮಾಡುವುದರಿಂದ ದೋಷಗಳ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಚರ್ಮದ ಕಾಯಿಲೆಗಳ ನಿವಾರಣೆ, ಉತ್ತಮ ಆರೋಗ್ಯ ಮತ್ತು ಸಂತಾನ ಭಾಗ್ಯಕ್ಕಾಗಿ ಭಕ್ತರು ಈ ದಿನ ವಿಶೇಷ ಪೂಜೆ ಹಾಗೂ ಹರಕೆಗಳನ್ನು ಸಲ್ಲಿಸುತ್ತಾರೆ. ಪುರಾಣಗಳ ಪ್ರಕಾರ, ಸರ್ಪರಾಜ ವಾಸುಕಿಗೆ ಸುಬ್ರಹ್ಮಣ್ಯನು ಅಭಯ ನೀಡಿದ ನೆನಪಿಗಾಗಿ ಈ ಉತ್ಸವವನ್ನು ನಡೆಸಲಾಗುತ್ತದೆ. ಈ ದಿನ ಉಪವಾಸವಿದ್ದು ಪೂಜೆ ಮಾಡುವುದರಿಂದ ಮಾನಸಿಕ ಶಾಂತಿ, ಶಿಸ್ತು ಮತ್ತು ಆಧ್ಯಾತ್ಮಿಕ ಉನ್ನತಿ ದೊರೆಯುತ್ತದೆ.

Kirusashthi from today in Kukke Subrahmanya- ತುಳುಟೈಮ್ಸ್‌

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 156

You cannot copy content of this page