ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಫ್ಯಾನ್ಸ್‌ ವಾರ್‌ ಮತ್ತೆ ಶುರು..? ದಚ್ಚು.. ಕಿಚ್ಚ ಫ್ಯಾನ್ಸ್‌ ಗಲಾಟೆಗೆ ಕಾರಣ ಏನು..?

ಕರ್ನಾಟಕ: Tulu Times | ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೆ ಫ್ಯಾನ್ಸ್‌ ವಾರ್‌ ಶುರುವಾಗಿದೆ. ಸೈಲೆಂಟ್‌ ಆಗಿದ್ದ ಕಿಚ್ಚು. ಇದೀಗ ಮತ್ತೆ ಹೊತ್ತಿದೆ. ಹೌದು, ಸುದೀಪ್‌ ಹಾಗೂ ದರ್ಶನ್‌ ಅಭಿಮಾನಿಗಳು ಮತ್ತೆ ಪರಸ್ಪರ ಜಗಳವಾಡಿಕೊಳ್ಳುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾ ಇವೆಂಟ್ ನಲ್ಲಿ ಸುದೀಪ್‌, ಯಾರ ಹೆಸರನ್ನೂ ನೇರವಾಗಿ ತಗೆದುಕೊಳ್ಳದೇ ಸುದೀಪ್ ಮಾತನಾಡಿದ್ದರೂ, ಆ ಮಾತುಗಳು ದರ್ಶನ್ ಅಭಿಮಾನಿಗಳನ್ನೇ ಉದ್ದೇಶಿಸಿ ಆಡಲಾಗಿದೆ ಅಂತ ಹೇಳಲಾಗುತ್ತಿದೆ. ಹೀಗಾಗಿ ಸುದೀಪ್‌ ಈ ಮಾತಿಗೆ ವಿಜಯಲಕ್ಷ್ಮಿ ಕೂಡ ಯಾರ ಹೆಸರನ್ನೂ ಉಲ್ಲೇಖಿಸಲದೇ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ದರ್ಶನ್‌ ಪತ್ನಿ  ವಿಜಯಲಕ್ಷ್ಮಿ ಸುದೀಪ್‌ ಗೆ ಟಾಂಗ್‌ ಕೊಟ್ಟಿದ್ದೇನು..?

ಕೆಲವರು ದರ್ಶನ್‌ ಅವ್ರು ಇಲ್ಲದೇ ಇದ್ದಾಗ ಏನೇನೋ ಮಾತಾಡ್ತಾ ಇದ್ದಾರೆ. ಅವರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆ ಎಲ್ಲಾ ಮಾತಾಡ್ತಾರೆ. ವೇದಿಕೆ ಮೇಲೆ ನಿತ್ಕೊಂಡು ಮಾತಾಡೋದು… ವೀಡಿಯಾಗಳಲ್ಲಿ ಕುಳಿತು ಮಾತಾಡೋದು… ಹೊರಗೆ ಕುತ್ಕೊಂಡ್ ಮಾತಾಡೋದು ಎಲ್ಲಾ ಮಾಡ್ತಿದ್ದಾರೆ. ಅದೇ ಜನರು ದರ್ಶನ್ ಅವರು ಇದ್ದಾಗ ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ ಅಂತ  ಮಾತನಾಡಿದ್ದಾರೆ.

ಅಖಾಡಕ್ಕೆ ಇಳಿದ  ದರ್ಶನ್ ಫ್ಯಾನ್ಸ್ !

ನೀವೇ ಯುದ್ಧಕ್ಕೆ ಕರೆದ್ರೆ ನಾವ್ ಬರದೇ ಇರ್ತೀವಾ ಅಂತ ಹೇಳೋದ್ರ ಜೊತೆಗೆ, ಯುದ್ಧ ಏನು ಒಬ್ಬ ಶಕುನಿ ಕೂಡ ಮಾಡ್ತಾನೆ ಜನರ ಪ್ರೀತಿ ಗಳಿಸಿ ಅಂತ ಕುಟುಕಿದ್ದಾರೆ. ವಿಜಯಲಕ್ಷ್ಮಿ ಮಾತು ಬೆಂಬಲಿಸಿ ಖುದ್ದು ದರ್ಶನ್ ಫ್ಯಾನ್ಸ್ ಅಖಾಡಕ್ಕೆ ಇಳಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಾ ಮಾತಿನ ಯುದ್ಧ ಸಾರಿದ್ದಾರೆ. ಕೆಲವರು ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ ಮಾಸ್‌ ಲುಕ್‌ ಫೋಟೋವನ್ನು ಹಂಚಿಕೊಂಡು ಸುದೀಪ್‌ ವಿರುದ್ಧ ಟಾಂಗ್‌ ಕೊಡ್ತಿದ್ದಾರೆ. ವಿಜಯಲಕ್ಷ್ಮಿ ಬೆಂಕಿ ಮಾತಿಗೆ ನಟ ಧನ್ವೀರ್‌ , ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ಕಾಡಲ್ಲಿ ಸಾಕಷ್ಟು ಪ್ರಾಣಿಗಳು ಇರ್ತಾವೆ. ಆದ್ರೆ ಆ ಕಾಡಿಗೆ ಒಂದೇ ಸಿಂಹ ಇರುತ್ತೆ, ಅಂತ ಡೈಲಾಗ್ ಮೂಲಕ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

Has the fan war started again? What is the reason for the uproar among the fans?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page