ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಪ್ಪಿನಂಗಡಿ: ಜೇನು ಕೃಷಿ ಕಲಿಸುತ್ತೇನೆ ಎಂದು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ

ಉಪ್ಪಿನಂಗಡಿ: Tulu Times | ಜೇನು ಕೃಷಿ ಕಲಿಸುತ್ತೇನೆ ಎಂದು ಹೇಳಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಂಗಡಿಯ ಅಬ್ದುಲ್ ಗಪೂರ್ ಬಂಧಿತ ಆರೋಪಿಯಾಗಿದ್ದಾನೆ. ಬೆಳಗಾವಿ ಮೂಲದ ಕುಟುಂಬ ಕೆಲಸಕ್ಕಾಗಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಮಗಳಿಗೆ ಜೇನು ಕೃಷಿ ಕಲಿಸುತ್ತೇನೆಂದು ಹೇಳಿದ ಕಾರಣ ತನ್ನ ಮಗಳನ್ನು 2 ತಿಂಗಳಿಂದ ಆರೋಪಿಯ ಮನೆಯಲ್ಲಿ ಬಿಟ್ಟಿದ್ದರು,  ಬಾಲಕಿಯ ತಂದೆ ತಾಯಿ ಊರಿಗೆ ಹೋದಾಗ ಆರೋಪಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.  ತಂದೆ ತಾಯಿ ಬಂದಾಗ ನೊಂದ ಬಾಲಕಿ ವಿಚಾರ ತಿಳಿಸಿದ್ದಾಳೆ. ನಂತರ ಇವರು ನೀಡಿದ ದೂರಿನ ಮೇರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕೋ ಕಾಯ್ದೆ 2012 ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: 2026ರಲ್ಲಿ ಬಾಬಾ ವಂಗಾ ಅಚ್ಚರಿಯ ಭವಿಷ್ಯವಾಣಿಗಳೇನು ಗೊತ್ತಾ..?

ಕೋಳಿ ಅಂಕಕ್ಕೆ ಪ್ರಚೋದನೆ ನೀಡಿದ ಆರೋಪ: ಅಶೋಕ್ ರೈ ವಿರುದ್ಧ ಎಫ್‌ಐಆ‌ರ್

ಪ್ರತೈೇಕ ಪ್ರಕರಣದಲ್ಲಿ,  ಕೋಳಿ ಅಂಕಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಕಾಂಗ್ರೆಸ್ ಶಾಸಕ ಅಶೋಕ್ ರೈ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.
ಕೋಳಿ ಅಂಕಕ್ಕೆ ಬಳಸಿದ್ದ 22 ಹುಂಜಗಳನ್ನು ಹಾಗೂ ಬಾಲುಗಳನ್ನು ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೇಪು ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿದೆ. ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ, 6 ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಕೋಳಿ ಅಂಕ ನಡೆಸಲು ಅವಕಾಶ ಮಾಡಿಕೊಟ್ಟ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧವೂ ಎಫ್‌ಐಆ‌ರ್ ದಾಖಲಿಸಿಕೊಂಡಿದ್ದಾರೆ. ಶಾಸಕರು ಕೋಳಿ ಅಂಕದ ಸ್ಥಳದಲ್ಲಿ ಹಾಜರಿದ್ದ ಹಾಗೂ ಕಾನೂನು ಬಾಹಿರವಾದ ಕೋಳಿ ಅಂಕವನ್ನು ಮುಂದುವರಿಸುವಂತೆ ಜನರಿಗೆ ಪ್ರಚೋದನೆ ನೀಡಿರುವ ಆರೋಪ ಕೇಳಿಬಂದಿದೆ. ಇನ್ನು ಕಾನೂನು ಬಾಹಿರ ಕೃತ್ಯಕ್ಕೆ ಅನುವು ಮಾಡಿಕೊಟ್ಟ ಆರೋಪದ ಮೇಲೆ ಮರಳೀಧರ ರೈವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ಪರವಾನಗಿ ಪಡೆಯದೇ ಕೋಳಿ ಅಂಕ ನಡೆಸಲು ಮರಳೀಧರ ರೈಜಾಗ ಕೊಟ್ಟಿದ್ದರು ಎನ್ನಲಾಗಿದೆ.

Uppinangady: Minor sexually assaulted on the pretext of teaching him how to cultivate bees- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page