ಮಂಗಳೂರು: Tulu Times | ಮಂಗಳೂರಿನಲ್ಲಿ ಕೆಟ್ಟು ನಿಂತಿದ್ದ ಲಾರಿಯೊಂದು ಏಕಾಏಕಿ ಹಿಂದಕ್ಕೆ ರಿವರ್ಸ್ ಚಲಿಸಿ, ಕಂದಕಕ್ಕೆ ಬಿದ್ದು ಪಲ್ಟಿಯಾದ ಘಟನೆ ನಡೆದಿದೆ.
ಮಂಗಳೂರಿನ ಕೆ.ಪಿ.ಟಿ ಬಳಿಯ SKS ಅಪಾರ್ಟ್ಮೆಂಟ್ ಬಳಿ ಶನಿವಾರ ಘಟನೆ ನಡೆದಿದೆ. ಹಿಮ್ಮುಖ ಚಲಿಸುವ ವೇಳೆ ಯಾವುದೇ ವಾಹನಗಳು ಬಾರದ ಹಿನ್ನೆಲೆಯಲ್ಲಿ ಬಾರಿ ಅನಾಹುತ ತಪ್ಪಿದೆ ಎನ್ನಲಾಗಿದೆ. ಲಾರಿ ಕೆಟ್ಟು ನಿಂತಿದರಿಂದ ಚಾಲಕ ಹೊರಗಡೆ ಹೋಗಿದ್ದು ಬರುವಷ್ಟರಲ್ಲಿ ಲಾರಿ ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಉರುಳಿದೆ.
2026ರಲ್ಲಿ ಬಾಬಾ ವಂಗಾ ಭವಿಷ್ಯವಾಣಿ
ಪ್ರತ್ಯೇಕ ಪ್ರಕರಣದಲ್ಲಿ, 2026ರಲ್ಲಿ ಏನೆಲ್ಲಾ ಬದಲಾವಣೆಗಳು ನಡೆಯಲಿವೆ ಎಂಬುವುದನ್ನು ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ. ಬಾಬಾ ಅವರ ಭವಿಷ್ಯವಾಣಿ ಪ್ರಕಾರ, ಮುಂಬರುವ ವರ್ಷ ಗಂಭೀರ ಬದಲಾವಣೆಗಳು ಮತ್ತು ಸವಾಲುಗಳಿಗೆ ವೇದಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಬಾಬಾ ವಂಗಾ ಅವರ ನಿಜವಾದ ಹೆಸರು ವಾಂಜೆಲಿಯಾ ಪಾಂಡವ ಡಿಮಿಟ್ರೋವಾ. 1911 ರಲ್ಲಿ ಬಲ್ಲೇರಿಯಾದಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡರು. 1996ರಲ್ಲಿ ಅವರ ಮರಣಕ್ಕೂ ಮೊದಲು, ರಾಜಕುಮಾರಿ ಡಯಾನಾ ಸಾವು, 2001ರ ನ್ಯೂಯಾರ್ಕ್ ಅವಳಿ ಗೋಪುರಗಳ ಘಟನೆ, ಮುಂಬೈ ಭಯೋತ್ಪಾದಕ ದಾಳಿ, ಚೀನಾದ ಉದಯ ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಅನೇಕ ಪ್ರಮುಖ ಘಟನೆಗಳನ್ನು ಮುಂಚಿತವಾಗಿ ಭವಿಷ್ಯ ನುಡಿದಿದ್ದರು.
ಬಾಬಾ ವಂಗಾ 2026 ರ ಭವಿಷ್ಯವಾಣಿಗಳು ಏನನ್ನು ಹೇಳುತ್ತವೆ ಅನ್ನೋದನ್ನು ನೋಡೋದಾದ್ರೆ, ತೀವ್ರ ಆರ್ಥಿಕ ಬಿಕ್ಕಟ್ಟು, ಚಿನ್ನದ ಬೆಲೆ ಏರಿಕೆಯಾಗಲಿವೆ. 2026 ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು, ಬ್ಯಾಂಕ್ ವೈಫಲ್ಯಗಳು ಮತ್ತು ಅಧಿಕ ಹಣದುಬ್ಬರ ಉಂಟಾಗಬಹುದು ಎಂದಿದ್ದಾರೆ. ಭೀಕರ ನೈಸರ್ಗಿಕ ವಿಕೋಪಗಳು: 2026ರಲ್ಲಿ ಭೂಕಂಪಗಳು, ಜ್ವಾಲಾಮುಖಿ ಸ್ಪೋಟಗಳು ಮತ್ತು ತೀವ್ರ ಹವಾಮಾನ ಬದಲಾವಣೆಗಳ ಸಾಧ್ಯತೆಯಿದೆ. ವಿಶ್ವದ ಭೂಪ್ರದೇಶದಲ್ಲಿ ಸುಮಾರು ಏಳರಿಂದ ಎಂಟು ಪ್ರತಿಶತವು ಈ ವಿಕೋಪಗಳಿಗೆ ತುತ್ತಾಗುತ್ತವೆ ಎಂದಿದ್ದಾರೆ. 2026ರ ಹೊತ್ತಿಗೆ ಕೃತಕ ಬುದ್ಧಿಮತ್ತೆ ಪ್ರಮುಖ ಸ್ಥಾನದಲ್ಲಿರುತ್ತವೆ. ವಿಶ್ವ ವ್ಯವಹಾರಗಳನ್ನು ನೋಡಿಕೊಳ್ಳುವ ಒಬ್ಬ ಶಕ್ತಿಶಾಲಿ ನಾಯಕ ರಷ್ಯಾದಿಂದ ಹೊರಹೊಮ್ಮುತ್ತಾನೆ ಎ ಚೀನಾದ ಪ್ರಾಬಲ್ಯ, ಭೌಗೋಳಿಕ ರಾಜಕೀಯ ಬದಲಾವಣೆಯಾಗಲಿದೆ.
ನವೆಂಬರ್ 2026 ರಲ್ಲಿ ಭೂಮಿಯ ವಾತಾವರಣ ಪ್ರವೇಶಿಸುವ ದೊಡ್ಡ ಬಾಹ್ಯಾಕಾಶ ನೌಕೆಯ ಮೂಲಕ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇಂಧನ ಕೊರತೆಯ ಸಮಸ್ಯೆಗಳ ನಡುವೆ ಪ್ರಪಂಚದಾದ್ಯಂತದ ದೇಶಗಳು ಹಸಿರು ಶಕ್ತಿಗಳು ಪರಿಣಾಮ ಬೀರಲಿವೆ.
A lorry suddenly went into reverse and overturned into a ditch!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











