ಲಂಚ್ ಬಾಕ್ಸ್ : Tulu Times | ಶಾಲೆಗೆ ಹೋಗುವ ಮಕ್ಕಳು ತಾಯಂದಿರಲ್ಲಿ ತಮ್ಮ ಲಂಚ್ ಬಾಕ್ಸ್ ಗೆ ಹಾಕುವ ಆಹಾರದ ಬಗ್ಗೆ ದಿನೇ ದಿನೇ ಪೀಡಿಸುತ್ತಾರೆ. ಅಮ್ಮ ಬಾಕ್ಸ್ ನಲ್ಲಿ ಹಾಕಿ ಕೊಡೋ ಆಹಾರ ಕೆಲವೊಂದು ಸಲ ಇಷ್ಟಾನೇ ಆಗೋದಿಲ್ಲ. ಬೆಳಗ್ಗೆ ಹಾಕಿದ ತಿಂಡಿ ಸಂಜೆ ಬರುವಾಗ ಹಾಗೇ ಇರುತ್ತೆ. ಇದನ್ನು ನೋಡ್ದಾಗ ಅದೆಷ್ಟೋ ತಾಯಂದಿರು ಮಕ್ಕಳ ಟಿಫಿನ್ ರೆಡಿ ಮಾಡಿ ಕೋಡೋದಕ್ಕಾಗಿಯೇ ಟೈಂ ಟೇಬಲ್ ಮಾಡ್ಕೊಂಡು ಬಿಡ್ತಾರೆ. ಹೌದು… ಅದಕ್ಕಾಗಿ ನಾನು ಇಲ್ಲಿ ತಿಳಿಸೋ ‘ಪನ್ನೀರ್’ ರೈಸ್ ಮಕ್ಕಳಿಗೆ ಮಾಡಿ ಕೊಡಿ. ಇದು ಆರೋಗ್ಯಕ್ಕೂ ಉತ್ತಮ ಜೊತೆಗೆ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ.
ಇದು ಮಕ್ಕಳಿಗೆ ಏಕೆ ಉತ್ತಮ ಎಂದು ಕೇಳಿದ್ರೆ, ಪನ್ನೀರ್ನಿಂದ ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಸಿಗುತ್ತದೆ. ಇದರಲ್ಲಿ ಕಾರ ಇರೋದಿಲ್ಲ. ಜೊತೆಗೆ ಹೊಟ್ಟೆಗೆ ಲೈಟ್ ಫುಡ್ ಆಗಿದೆ. ಇನ್ನು ನೀವಿದನ್ನು ಲಂಚ್ ಬಾಕ್ಸ್ನಲ್ಲಿ ಹಾಕಿದ್ರೆ ಒಣಗೋದಿಲ್ಲ ಮತ್ತು ಶಾಲಾ ಮಕ್ಕಳು ಇಷ್ಟಪಟ್ಟು ತಿನ್ನುವ ಆಹಾರವಾಗಿದೆ. ಪನ್ನೀರ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು :
ಬೇಯಿಸಿದ ಅನ್ನ – 2 ಕಪ್ (ತಣ್ಣಗಾದದ್ದು)
ಪನ್ನೀರ್ – ½ ಕಪ್ (ಚಿಕ್ಕ ಚಿಕ್ಕ ತುಂಡು)
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ)
ಕ್ಯಾರೆಟ್ – 1 (ಸಣ್ಣದಾಗಿ ತುರಿದ)
ಬಟಾಣಿ – 2 ಟೇಬಲ್ ಸ್ಪೂನ್ (ಬೇಕಾದರೆ ಮಾತ್ರ)
ಬೆಣ್ಣೆ ಅಥವಾ ಎಣ್ಣೆ – 1 ಟೇಬಲ್ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಅರಿಶಿನ – ಒಂದು ಚಿಟಿಕೆ
ಮೆಣಸು ಪುಡಿ – ¼ ಟೀ ಸ್ಪೂನ್ (ಐಚ್ಛಿಕ)
ಉಪ್ಪು – ರುಚಿಗೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಒಂದು ಪ್ಯಾನ್ ನಲ್ಲಿ ಬೆಣ್ಣೆ ಅಥವಾ ಎಣ್ಣೆ ಹಾಕಿ ಜೀರಿಗೆ ಹಾಕಿ. ಈರುಳ್ಳಿ ಹಾಕಿ ಸ್ವಲ್ಪ ಹುರಿದುಕೊಳ್ಳಿ. ಕ್ಯಾರೆಟ್ ಮತ್ತು ಬಟಾಣಿ ಹಾಕಿ 2 ನಿಮಿಷ ಬೇಯಿಸಿ. ಪನ್ನೀರ್ ತುಂಡು ಹಾಕಿ ನಿಧಾನವಾಗಿ ಕಲಸಿ. ಅರಿಶಿನ, ಸ್ವಲ್ಪ ಮೆಣಸು ಪುಡಿ, ಉಪ್ಪು ಹಾಕಿ. ಈಗ ಅನ್ನ ಸೇರಿಸಿ ಚೆನ್ನಾಗಿ ಆದರೆ ಮೃದುವಾಗಿ ಕಲಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸು ಆರಿಸಿ. ಇದು ಇನ್ನೂ ಸಾಫ್ಟ್ ಬೇಕಾದರೆ 1 ಟೇಬಲ್ ಸ್ಪೂನ್ ಹಾಲು ಸೇರಿಸಬಹುದು. ಟೊಮೇಟೋ ಸಾಸ್ ಒಂದು ಚಮಚ ಹಾಕಿದರೆ ಮಕ್ಕಳಿಗೆ ಇನ್ನೂ ಇಷ್ಟ. ಇನ್ನು ಮಕ್ಕಳು ಇಷ್ಟ ಪಟ್ಟರೆ ಕಚ್ಚಂಬರ್ ಅಥವಾ ಬೂಂದಿ ಪ್ರತ್ಯೇಕ ಮಾಡಿ ಕೊಡಬಹುದು. ‘Paneer’ rice for kids’ lunch boxes – ತುಳು ಟೈಮ್ಸ್
ಇದನ್ನೂ ಓದಿ :ಪೋಷಕರೇ ಗಮನಿಸಿ ‘ಒಂದು ಮಗು ಕೂಡಾ ತಪ್ಪಬಾರದು’ : ನಾಳೆ (ಡಿ.21) ಪಲ್ಸ್ ಪೋಲಿಯೋ ದಿನ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=ZnMAz2_LgUHSxqn9











